``Chef ಚಿದಂಬರ``ನಿಗೆ ನುರಿತ ``chef`` ಗಳಿಂದ ತರಭೇತಿ
Posted date: 24 Thu, Aug 2023 02:19:15 PM
ನಟ ಅನಿರುದ್ದ್ ನಾಯಕರಾಗಿ ನಟಿಸುತ್ತಿರುವ "chef ಚಿದಂಬರ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆದಿತ್ತು. ಈಗ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯವಾಗಿದೆ. ಅನಿರುದ್ದ್ ಈ ಚಿತ್ರದಲ್ಲಿ "chef" ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿ ಅನಿರುದ್ದ್ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅನಿರುದ್ದ್ ಅವರಿಗೆ ಹೆಸರಾಂತ ಬಾಣಸಿಗರು ತರಭೇತಿ ನೀಡುತ್ತಿದ್ದಾರೆ. ಈ ಟ್ರೈನಿಂಗ್ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. 

ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಎಂ.ಆನಂದರಾಜ್ ನಿರ್ದೇಶಿಸುತ್ತಿದ್ದಾರೆ. ರೆಚೆಲ್ ಡೇವಿಡ್ ಹಾಗೂ ನಿಧಿ ಸುಬ್ಬಯ್ಯ ಈ ಚಿತ್ರದ ನಾಯಕಿಯರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed