`ಕೊಡೆಮುರುಗ` ನಾಳೆಯಿಂದ ತೆರೆಗೆ
Posted date: 08 Thu, Apr 2021 08:44:07 AM
ಕೆ ಆರ್ ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ  ಕೆ.ರವಿಕುಮಾರ್ ಹಾಗೂ ಅಶೋಕ್ ಶಿರಾಲಿ ನಿರ್ಮಿಸಿರುವ `ಕೊಡೆಮುರುಗ` ಚಿತ್ರ ನಾಳೆಯಿಂದ  ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಸುಬ್ರಹ್ಮಣ್ಯ ಪ್ರಸಾದ್ ಕಥೆ, ಚಿತ್ರಕಥೆ, ಗೀತರಚನೆ ಹಾಗೂ ಸಂಭಾಷಣೆ ಬರೆದು‌ ನಿರ್ದೇಶಿಸಿರುವ ಈ ಚಿತ್ರಕ್ಕೆ ಎಂ.ಎಸ್.ತ್ಯಾಗರಾಜ ಸಂಗೀತ ನೀಡಿದ್ದಾರೆ. ರುದ್ರಮುನಿ‌ ಬೆಳಗೆರೆ ಛಾಯಾಗ್ರಹಣ ಹಾಗೂ ಸಿ.ರವಿಚಂದ್ರನ್ ಸಂಕಲನ ಈ ಚಿತ್ರಕ್ಕಿದೆ. 
 
ಮುನಿಕಷ್ಣ ಹಾಗೂ ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್  ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಪಲ್ಲವಿ ಗೌಡ, ದತ್ತಣ್ಣ, ಕುರಿ ಪ್ರತಾಪ್, ಅರವಿಂದ್ ರಾವ್, ಕಾಮಿನಿಧರನ್, ಸ್ವಾತಿ, ರಾಕ್ ಲೈನ್ ಸುಧಾಕರ್, ಕಡ್ಡಿಪುಡಿ ಚಂದ್ರು, ಗೋವಿಂದೇ ಗೌಡ, ಮೋಹನ್ ತುಮಕೂರು, ಮೋಹನ್ ಜುನೇಜ ಮುಂತಾದವರಿದ್ದಾರೆ
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed