`ಬ್ಲಿಂಕ್`ಗೆ ಬೊಂಬಾಟ್ ರೆಸ್ಪಾನ್ಸ್..8 ಶೋಗಳಿಂದ 82 ಶೋಗಳಿಗೆ ಏರಿಕೆ..ಇದಪ್ಪಾ ಕನ್ನಡ ಸಿನಿಮಾದ ತಾಕತ್ತು..
Posted date: 23 Sat, Mar 2024 08:10:12 AM
ಕನ್ನಡ ಸಿನಿಮಾಗಳನ್ನು ಕಣ್ತುಂಬಿಕೊಳ್ಳೋದಿಕ್ಕೆ ಜನ ಥಿಯೇಟರ್ ನತ್ತ ಹೆಜ್ಜೆ ಇಡ್ತಿಲ್ಲ. ಅದರ ನಡುವೆಯೇ ಒಂದಷ್ಟು ವಿಭಿನ್ನ ಪ್ರಯತ್ನಗಳ ಸಿನಿಮಾಗಳು ಎಲ್ಲರ ಗಮನಸೆಳೆಯುತ್ತಿವೆ. ಆ ಪ್ರಯತ್ನಗಳಲ್ಲಿ ಒಂದು ಬ್ಲಿಂಕ್. ಸದ್ಯ ಕನ್ನಡ `ಬ್ಲಿಂಕ್` ಸಿನಿಮಾ ಹೊಸ ಸಾಧನೆ ಮಾಡಿದೆ. ಆ ಸಾಧನೆಗೆ ಕನ್ನಡ ಸಿನಿಮಾಪ್ರೇಮಿಗಳೇ ಕಾರಣ..
 
ಶಿವರಾತ್ರಿ ಹಬ್ಬದಂದು ಸೂಪರ್ ಸ್ಟಾರ್ಸ್ ಸಿನಿಮಾಗಳ ಮಧ್ಯೆ ತೆರೆಗೆ ಬಂದ ಬ್ಲಿಂಕ್ ಸಿನಿಮಾಗೆ ಪ್ರಾರಂಭದಲ್ಲಿ ಅಷ್ಟಾಗಿ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಆ ನಂತರ ಮೌತ್ ಪಬ್ಲಿಸಿಟಿಯಿಂದ ಬ್ಲಿಂಕ್ ಶೋಗಳು ಏರಿಕೆಯಾಗುತ್ತಾ ಹೋದ್ವು. ಕನ್ನಡ ಸಿನಿಮಾಗಳಿಗೆ ಶೋ ಸಿಕ್ತಿಲ್ಲ ಎಂಬ ಆಪವಾದದ ನಡುವೆ 8 ಶೋಗಳಿಂದ 82 ಶೋ ಬ್ಲಿಂಕ್ ಪಾಲಾಗಿದೆ. ಇದಕ್ಕೆ ಕನ್ನಡ ಪ್ರೇಕ್ಷಕನ ಬೆಂಬಲ ಕಾರಣ..

ಶಿವಣ್ಣ ಬ್ಲಿಂಕ್ ಸಿನಿಮಾಗೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ಸೋಷಿಯಲ್ ಮೀಡಿಯಾದಲ್ಲಿ ಚಿತ್ರ ನೋಡುವ ಇಂಗಿತ ವ್ಯಕ್ತಪಡಿಸಿದ್ದರು. ಸಿಂಪಲ್ ಸುನಿ, ನವೀನ್ ಶಂಕರ್ ಹಾಗೂ ನಟಿ ಬೃಂದಾ ಆಚಾರ್ ಸೇರಿದಂತೆ ಹಲವಾರು ಕನ್ನಡ ತಾರೆಯರು ಬ್ಲಿಂಕ್ ಗೆ ಬಹುಪರಾಕ್ ಎಂದಿದ್ದರು.

ಶ್ರೀನಿಧಿ ಬೆಂಗಳೂರು ನಿರ್ದೇಶನದ `ಬ್ಲಿಂಕ್` ಚಿತ್ರಕ್ಕೆ ರವಿಚಂದ್ರ ಎ. ಜೆ ಬಂಡವಾಳ ಹೂಡಿದ್ದಾರೆ. ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್, ಗೋಪಾಲ ದೇಶಪಾಂಡೆ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

ಒಂದ್ಕಡೆ ಬ್ಲಿಂಕ್ ಸಿನಿಮಾಗಳು ಹೆಚ್ಚಾಗಿರುವ ಖುಷಿ ನಡುವೆಯೇ ವಿದೇಶದಲ್ಲಿಯೂ ಚಿತ್ರ ತೆರೆಕಂಡಿದೆ. ಇಂದಿನಿಂದ ಆಸ್ಟ್ರೇಲಿಯಾ, ಯುಎಸ್ ಹಾಗೂ ಐರ್ಲೆಂಡ್ ಬ್ಲಿಂಕ್ ಬಿಡುಗಡೆಯಾಗಿದೆ. ಯುಕೆ, ಯೂರೋಪ್, ನ್ಯೂಜಿಲೆಂಡ್, ಯುಎಸ್, ಸಿಂಗಾಪುರ್, ಮಲೇಷಿಯಾ, ಜರ್ಮನ್, , ಕೆನಡಾ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed