`ಮಾಫಿಯಾ` ನಿರ್ದೇಶಕರೊಂದಿಗೆ ಮತ್ತೊಮ್ಮೆ ಕೈ ಜೋಡಿಸಿದ ಪ್ರಜ್ವಲ್ ದೇವರಾಜ್-
Posted date: 17 Thu, Nov 2022 09:56:35 PM
`ಮಮ್ಮಿ`, `ದೇವಕಿ` ಖ್ಯಾತಿಯ ನಿರ್ದೇಶಕ ಲೋಹಿತ್.ಹೆಚ್ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಜೊತೆಗೆ ಹೊಸದೊಂದು ಚಿತ್ರವನ್ನು ಶುಭಾರಂಭ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ `ಮಾಫಿಯಾ`ಸಿನಿಮಾಗೆ ಲೋಹಿತ್ ಆಕ್ಷನ್ ಕಟ್ ಹೇಳಿದ್ದು ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದರ ನಡುವೆಯೇ ಮತ್ತೊಂದು ಹೊಸ ಸಿನಿಮಾವನ್ನು ಈ ಜೋಡಿ ಘೋಷಿಸಿದೆ. 

ಪ್ರಜ್ವಲ್ ದೇವರಾಜ್ ನಿರ್ದೇಶಕ ಲೋಹಿತ್.ಹೆಚ್ ಕಾಂಬಿನೇಶನ್ ಮೊದಲ ಸಿನಿಮಾ `ಮಾಫಿಯಾ. ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದರ ನಡುವೆಯೇ ಲೋಹಿತ್ ಜೊತೆಗೆ ಮತ್ತೊಂದು ಸಿನಿಮಾ ಮಾಡಲು ಡೈನಾಮಿಕ್ ಪ್ರಿನ್ಸ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಲೋಹಿತ್ ಹೇಳಿದ ಕಥೆಯ ಎಳೆ ತುಂಬಾ ಇಷ್ಟ ಆಯ್ತು. ಅವರ ಕೆಲಸದ ಶೈಲಿ ಹಾಗೂ ಸಾಮರ್ಥ್ಯವನ್ನು ಹತ್ತಿರದಿಂದ ಅರಿತಿರುವುದರಿಂದ ಮತ್ತೊಂದು ಸಿನಿಮಾವನ್ನು ಅವರೊಂದಿಗೆ ಮಾಡಲು ಕೈ ಜೋಡಿಸಿದ್ದೇನೆ ಎಂದು ಪ್ರಜ್ವಲ್ ದೇವರಾಜ್ ತಿಳಿಸಿದ್ದಾರೆ. 
 
ಸದ್ಯ ಸಿನಿಮಾದ ಸ್ಕ್ರಿಪ್ಟ್ ಪೂಜೆ ನಡೆದಿದ್ದು, ಡಿಸೆಂಬರ್ ನಲ್ಲಿ ಚಿತ್ರದ ಕೆಲಸಗಳು ಆರಂಭವಾಗಲಿವೆ. ಇದೊಂದು ಹಾರಾರ್ ಥ್ರಿಲ್ಲರ್ ಒಳಗೊಂಡ ಟೈಂ ಲೂಪ್ ಸಿನಿಮಾವಾಗಿದೆ. ಸದ್ಯದಲ್ಲೇ ಸಿನಿಮಾ ಟೈಟಲ್, ತಾರಾಬಳಗ ಇದೆಲ್ಲದರ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳೋದಾಗಿ ನಿರ್ದೇಶಕರು ತಿಳಿಸಿದ್ದಾರೆ. 

`ಮಾಫಿಯಾ`ಸಿನಿಮಾ ನಡೆಯುತ್ತಿರುವಾಗಲೇ ಈ ಸಿನಿಮಾ ಬಗ್ಗೆ ಪ್ರಜ್ವಲ್ ಸರ್ ಜೊತೆ ಮಾತನಾಡಿದ್ದೆ. ಕಥೆ ಕೇಳಿ ಸಖತ್ ಇಂಪ್ರೆಸ್ ಆಗಿ ನಾವೇ ಈ ಪ್ರಾಜೆಕ್ಟ್ ಮಾಡೋಣ ಎಂದು ಹೇಳಿದ್ರು. `ಮಾಫಿಯಾ` ದಲ್ಲಿ ಪ್ರಜ್ವಲ್ ಸರ್ ಜೊತೆ ಕೆಲಸ ಮಾಡಿದ್ದು ಒಂದೊಳ್ಳೆ ಅನುಭವ ನೀಡಿದೆ. ತುಂಬಾ ಸಪೋರ್ಟಿವ್ ಆಗಿರುತ್ತಾರೆ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡ್ತಿರೋದ್ರಿಂದ ಅಂದುಕೊಂಡಂತೆ ಸಿನಿಮಾ ಔಟ್ ಪುಟ್ ತೆಗೆಯಬಹುದು ಎಂದು ನಿರ್ದೇಶಕ ಲೋಹಿತ್ ತಿಳಿಸಿದ್ದಾರೆ. 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed