`ಮೂರನೇ ಕೃಷ್ಣಪ್ಪ`ನಿಗೆ ಲೂಸ್ ಮಾದ ಸಾಥ್..ಟ್ರೇಲರ್ ಗೆ ಧ್ವನಿಯಾದ ಯೋಗಿ
Posted date: 11 Sat, May 2024 10:28:27 AM
ತಮ್ಮ ಅಭಿನಯದ ಮೂಲಕವೇ ಕನ್ನಡ ಸಿನಿಪ್ರೇಕ್ಷಕರನ್ನು ಗಮನಸೆಳೆದ ಸಂಪತ್ ಮೈತ್ರೇಯಾ ಮೂರನೇ ಕೃಷ್ಣಪ್ಪ ಸಿನಿಮಾ ಮೂಲಕ ನಾಯಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈಗಾಗ್ಲೇ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ತಯಾರಿ ನಡೆದಿದೆ. ನಾಳೆ ಮೂರನೇ ಕೃಷ್ಣಪ್ಪ ಸಿನಿಮಾದ ಮೊದಲ ನೋಟ ಹೊರಬೀಳಲಿದ್ದು, ಲೂಸ್ ಮಾದ ಯೋಗಿ ಟ್ರೇಲರ್ ಗೆ ಧ್ವನಿಯಾಗಿದ್ದಾರೆ. ಈ ಮೂಲಕ ನವೀನ್ ರೆಡ್ಡಿ ಹೊಸ ಕನಸಿಗೆ ಸಿದ್ಲಿಂಗು ಸಾಥ್ ಕೊಟ್ಟಿದ್ದಾರೆ.

ಲವ್ ಸ್ಟೋರಿ ಸಿನಿಮಾಗಳ ಸೂತ್ರಧಾರ ನಿರ್ದೇಶಕ ನವೀನ್ ರೆಡ್ಡಿ ಹೊಸ ಪ್ರಯತ್ನ `ಮೂರನೇ ಕೃಷ್ಣಪ್ಪ`.. ಅಕಿರ ಹಾಗೂ ರಿಲ್ಯಾಕ್ಸ್ ಸತ್ಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಅವರೀಗ ವಿಭಿನ್ನ ಶೀರ್ಷಿಕೆಯೊಂದಿಗೆ ಫ್ರೆಶ್ ಕಥೆ ಹೇಳೋದಿಕ್ಕೆ ಬರ್ತಿದ್ದಾರೆ. ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಗಿಸಿ ಪ್ರಚಾರ ಅಖಾಡಕ್ಕೆ ಎಂಟ್ರಿ ಕೊಟ್ಟಿದೆ.

ರೆಡ್ ಡ್ರಾಗ್ಯನ್ ಫಿಲಂಸ್‌ ಪ್ರೊಡಕ್ಷನ್ ಹೌಸ್ ನಡಿ ಮೂರನೇ ಕೃಷ್ಣಪ್ಪ ಚಿತ್ರ ಮೂಡಿ ಬರ್ತಿದೆ. ಈ ಹಿಂದೆ ರಿಲ್ಯಾಕ್ಸ್ ಸತ್ಯ ಚಿತ್ರವನ್ನು ಇದೇ ಪ್ರೊಡಕ್ಷನ್ ನಡಿ ಮೋಹನ್ ರೆಡ್ಡಿ ಜಿ, ರವಿಶಂಕರ್ ನಿರ್ಮಿಸಿದ್ದರು. ಇದೀಗ ಇದೇ ಪ್ರೊಡಕ್ಷನ್ ಹೌಸ್ ನಡಿ ಇವರಿಬ್ಬರು ಮೂರನೇ ಕೃಷ್ಣಪ್ಪ ಸಿನಿಮಾಗೆ ಹಣ ಹಾಕಿದ್ದಾರೆ. ಆನೇಕಲ್ ಭಾಗದ ಭಾಷೆಯ ಸೊಬಗನ್ನು ಹೊತ್ತು ಬಂದಿರುವ ಈ ಚಿತ್ರದಲ್ಲಿ ಸಂಪತ್ ಮೈತ್ರೀಯಾ, ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಶ್ರೀಪ್ರಿಯಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ತುಕಾಲಿ ಸಂತೋಷ್, ಉಗ್ರಂ ಮಂಜು ತಾರಾಬಳಗದಲ್ಲಿದ್ದಾರೆ. ಮೂರನೇ ಕೃಷ್ಣಪ್ಪ ಸಿನಿಮಾಕ್ಕೆ ಆನಂದ್ ರಾಜವಿಕ್ರಮ್ ಸಂಗೀತ, ಶ್ರೀಕಾಂತ್ ಸಂಕಲನ, ಯೋಗಿ ಛಾಯಾಗ್ರಹಣವಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed