`ಹುಚ್ಚಿ ` ಈವಾರ ಬಿಡುಗಡೆ
Posted date: 7/October/2009

ಪೂಜಾಗಾಂಧಿ, ಪ್ರಧಾನ ಪಾತ್ರದಲ್ಲಿ ನಟಿಸಿರುವ ಕವಿತಾಲಯ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹುಚ್ಚಿ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.  ಡಿ.ಬಿ. ಕುಮಾರಸ್ವಾಮಿ ನಿರ್ಮಾಣದ ಈ ಚಿತ್ರಕ್ಕೆ ವೆಂಕಟೇಶ ಪಂಚಾಂಗಂ ಕಥೆ ಚಿತ್ರಕಥೆ ಬರೆದು ನಿರ್ದೇಶಿದ್ದಾರೆ.  ಆಕಸ್ಮಿಕವಾಗಿ ನಡೆದ ಘಟನೆಯೊಂದರಲ್ಲಿ ಮನ ನೊಂದ ನಾಯಕಿ ಮಾನಸಿಕವಾಗಿ ಅಘಾತಕ್ಕೆ ಒಳಗಾಗಿ ವಿಚಿತ್ರವಾಗಿ ವರ್ತಿಸುತ್ತಾಳೆ.  ಆ ಘಟನೆ ಹಿನ್ನಲೆ ಏನು ಎಂಬುದೇ ಈ ಚಿತ್ರದ ಕಥಾವಸ್ತು.  ಒಂದು ಮಗು ಹಾಗು ಪೂಜಾ ಗಾಂಧಿ ಇವರಿಬ್ಬರ ಸುತ್ತ ಸಾಗುವ ಈ ಕಥೆಯ ಹೆಚ್ಚಿನ ಭಾಗವನ್ನು ರಾಜರಾಜೇಶ್ವರಿ ನಗರದ ಖಾಸಗಿ ಬಂಗಲೆಯೊಂದರಲ್ಲಿ ಚಿತ್ರೀಕರಿಸಲಾಗಿದೆ.  ಚಿತ್ರದಲ್ಲಿ ಒಂದು ಹಾಡು ಇದ್ದು ನವೀನ್ ಸುವರ್ಣರ ಛಾಯಾಗ್ರಹಣ, ಗಿರಿಪಂಚಾಂಗಂ ಅವರ ಸಂಭಾಷಣೆ-ಸಾಹಿತ್ಯ ಹಾಗೂ ಸಂಗೀತ ಸಂಯೋಜನೆ, ನಾಗೇಂದ್ರ ಅರಸ್‌ರ ಸಂಕಲನ  ಇದೆ.  ನಾಯಕನ ಪಾತ್ರದಲ್ಲಿ ತಿಲಕ್ ಅಲ್ಲದೆ ಅನಂತ್‌ನಾಗ್, ಸುಧಾರಾಣಿ, ವೆಂಕಟೇಶ ಪ್ರಸಾದ್, ಮನದೀಪ್ ರಾಯ್, ಮಗುವಿನ ಪಾತ್ರದಲ್ಲಿ ಬೇಬಿ ಸೌಂದರ್ಯ [ಸೋನು] ಅಭಿನಯಿಸಿದ್ದಾರೆ.  

 

Manohar. R.(Manu),
chitrataramanu@gmail.com
Photo Journalist
M: 9845549026
  : 9844904440

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed