`ಬನಾರಸ್` ಚಿತ್ರದ ಆಡಿಯೋ ಹಕ್ಕು ಮೂರುವರೆ ಕೋಟಿ
Posted date: 27 Wed, Oct 2021 10:01:48 AM
ನ್ಯಾಷನಲ್ ಖಾನ್ ಪ್ರೊಡಕ್ಷನ್ಸ್ ರವರ `ಬನಾರಸ್` ಚಿತ್ರವು ಭಾರತದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ನಾಡಿನ ಹೆಸರಾಂತ ನಿರ್ದೇಶಕ ಜಯತೀರ್ಥ ರವರು ನಿರ್ದೇಶಿಸಿದ್ದಾರೆ.
ಬಿ.ಝೆಡ್. ಜಮೀರ್ ಅಹಮದ್, MLA ರವರ ಪುತ್ರ ಝೈದ್ ಖಾನ್ ಅವರು ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಅವರೊಂದಿಗೆ ಸೋನಲ್ ಮೊಂಟೈರೊ ನಾಯಕಿಯಾಗಿ ಹೆಜ್ಜೆ ಹಾಕಿರುತ್ತಾರೆ.
ಪ್ರಸ್ತುತ ವಿಷಯವೇನೆಂದರೆ, ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಹಾಗು ಐದು ಅದ್ಭುತ ಹಾಡುಗಳನ್ನು ಒಳಗೊಂಡ ಈ ಚಿತ್ರದ ಆಡಿಯೋ ಹಕ್ಕನ್ನು ಪ್ರಸಿದ್ಧ ಆಡಿಯೋ ಸಂಸ್ಥೆಗಳಾದ ಲಹರಿ ಮತ್ತು ಟಿ-ಸೀರಿಸ್ ಕಂಪನಿಯು ಮೂರೂವರೆ ಕೋಟಿ ಮೊತ್ತವನ್ನು ಕೊಟ್ಟು ಖರೀದಿ ಮಾಡಿದೆ ಹಾಗೂ ಭಾರತ ಚಿತ್ರರಂಗದಲ್ಲೇ ಮೊದಲ ಬಾರಿಗೆ ಹೊಸಬರ ಚಿತ್ರಕ್ಕೆ ಇಷ್ಟು ದೊಡ್ಡ ಮಟ್ಟದ ಆಡಿಯೋ ಹಕ್ಕು ದೊರಕಿದೆ ಎಂದು ತಿಳಿಸಲು ಸಂತಸಪಡುತ್ತೇವೆ. ಈ ಸಿನೆಮಾದ ಚಿತ್ರೀಕರಣವನ್ನು ಶೇಕಡಾ ತೊಂಬತ್ತರಷ್ಟು ಭಾಗ ಬನಾರಸ್ ಅಲ್ಲಿಯೇ ಚಿತ್ರೀಕರಿಸಿದ್ದೇವೆ ಹಾಗು ಅಲ್ಲಿನ ಎಲ್ಲಾ 84 ಘಾಟ್ ಅನ್ನು ಬಹಳ ಅಧ್ಭುತವಾಗಿ ತೋರಿಸಿದ್ದೇವೆ. 
ಈ ವಿಷಯವನ್ನು ತಮ್ಮ ಪತ್ರಿಕೆ ಅಥವಾ ಮಾಧ್ಯಮದಲ್ಲಿ ಪ್ರಕಟಿಸಿ, ಜನ ಸಾಮಾನ್ಯರಿಗೆ ತಲುಪುವಂತೆ ಮಾಡಿ ಎಂದು ಕೋರುತ್ತಿದ್ದೇವೆ.   
                                                                                                
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed