`ಗಿರ್ಕಿ`ಗೆ ರಘು ದೀಕ್ಷಿತ್ ಗಾಯನ
Posted date: 14 Sun, Nov 2021 07:37:09 PM
ಎದಿತ್ ಫಿಲ್ಮ್ ಫ್ಯಾಕ್ಟರಿ ಸಂಸ್ಥೆಯಡಿಯಲ್ಲಿ ಮೊಟ್ಟ ಮೊದಲ ಬಾರಿಗೆ ಹಾಸ್ಯನಟ ತರಂಗ ವಿಶ್ವ ಅವರು ನಿರ್ಮಿಸುತ್ತಿರುವ ಗಿರ್ಕಿ ಚಿತ್ರ ವಾಸುಕಿ ಮೂವೀಸ್ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿದ್ದು, ಈ ಚಿತ್ರಕ್ಕೆ ಯೋಗರಾಜ್ ಭಟ್ ಅವರ ಶಿಷ್ಯ ವೀರೇಶ್ ಪಿ ಎಮ್ ಆಕ್ಷನ್ ಕಟ್  ಹೇಳಿದ್ದು, ಚಿತ್ರದ ಕೆಲಸಗಳು ಸಂಪೂರ್ಣವಾಗಿ ಮುಗಿದಿದ್ದು ಸೆನ್ಸಾರ್ ಗೆ ಕಳಿಸಲು ಸಿದ್ಧವಾಗಿದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ವಿಲೋಕ್ ರಾಜ್, ತರಂಗ ವಿಶ್ವ, ದಿವ್ಯ ಉರುಡುಗ ಮತ್ತು ರಾಶಿ ಮಹದೇವ್ ಅವರು ನಟಿಸಿದ್ದಾರೆ. ಚಿತ್ರದಲ್ಲಿ ಎರಡು ಫೈಟ್ ಮತ್ತು ಮೂರು ಗೀತೆಗಳಿದ್ದು, ವೀರ್ ಸಮರ್ಥ್ ಅವರು ಸಂಗೀತ ಸಂಯೋಜಿಸಿದ್ದಾರೆ. ಇತ್ತೀಚಿಗಷ್ಟೇ ನಿರ್ದೇಶಕರೇ ಬರೆದಿರುವ ``ಗಿರ್ಕಿ`` ಟೈಟಲ್ ಟ್ರ್ಯಾಕ್ ನ್ನು ರಘು ದೀಕ್ಷಿತ್ ಅವರು ಹಾಡಿದ್ದು ಗೀತೆ ಅದ್ಭುತವಾಗಿ ಮೂಡಿಬಂದಿದೆ.ಇನ್ನು ಈ ಚಿತ್ರ ಜನವರಿ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಯೋಜನೆ ಹಾಕಿಕೊಂಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed