`ಗಾಂಧಾರಿ` ಹಾಡಿನಲ್ಲಿ ಮಿಂಚಿದ ಕವಿತಾ ಗೌಡ…ಮೇ27ಕ್ಕೆ ಬೆಳ್ಳಿತೆರೆಗೆ ಮೆಟಡೋರ್
Posted date: 14 Sat, May 2022 12:57:17 PM
ಮೆಟಡೋರ್ ಹೀಗೊಂದು ಡಿಫರೆಂಟ್ ಟೈಟಲ್ ನ ಸಿನಿಮಾವೊಂದು ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿದೆ. ಕಳೆದ ಕೆಲ ತಿಂಗಳ ಹಿಂದಷ್ಟೇ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ, ಡಾಲಿ ಧನಂಜಯ್ ಮೆಟಡೋರ್ ಟ್ರೇಲರ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ರಿಲೀಸ್ ಆಗಿರುವ ಮೆಟಡೋರ್ ಸಿನಿಮಾದ ಪ್ರಮೋಷನಲ್ ಹಾಡು ಯೂಟ್ಯೂಬ್ ನಲ್ಲಿ ಸೌಂಡ್ ಮಾಡ್ತಿದೆ.

ಗಾಂಧಾರಿ ಎಂದು ಶುರುವಾಗುವ ಅರ್ಥಪೂರ್ಣ ಗಾನಲಹರಿಗೆ ತಂಗಾಳಿ ನಾಗರಾಜ್ ಸಾಹಿತ್ಯ ಬರೆದಿದ್ದು, ಜೊತೆಗೆ ಮ್ಯೂಸಿಕ್ ನೀಡಿದ್ದಾರೆ. ಅಪೂರ್ವ ಶ್ರೀಧರ್ ಧ್ವನಿಯಾಗಿರುವ ಈ ಹಾಡಿನಲ್ಲಿ ಕವಿತಾ ಗೌಡ ಮಿಂಚಿದ್ದಾರೆ. ಈ ಹಿಂದೆ 13ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಸುದರ್ಶನ್ ಜಿ ಶೇಖರ್ ಮೆಟಡೋರ್ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

ಐದು ಕಥೆಯನ್ನು ಹೇಳುವ ಹೈಪರ್ ಲಿಂಕ್ ಸಿನಿಮಾವಾಗಿರುವ ಮೆಂಟಡೋರ್ ಚಿತ್ರದಲ್ಲಿ ಕಿರಣ್, ರವಿ ಮೈಸೂರು, ರಾಜ ಕರ್ಮ, ಅರ್ಚನಾ ಮಹೇಶ್, ಮೋಹನ್ ಬಾಬು ಸೇರಿದಂತೆ ಹೊಸ ಕಲಾಬಳಗ ಸಿನಿಮಾದಲ್ಲಿದೆ. ಓಂ ಸ್ಟುಡಿಯೋ ಪ್ರೊಡಕ್ಷನ್ ಹೌಸ್ ಬ್ಯಾನರ್ ನಡಿ ಕಿರಣ್ ಕುಮಾರ್ ಹೆಚ್ ಎಸ್ ಬಂಡವಾಳ ಹೂಡಿದ್ದು, ಈಗಾಗ್ಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಸಿನಿಮಾ ಮೇ 27ರಂದು ತೆರೆಗೆ ಬರ್ತಿದ್ದು, ಸದ್ಯ ಹಾಡು ರಿಲೀಸ್ ಮಾಡುವ ಮೂಲಕ ಪ್ರಮೋಷನ್ ಗೆ ಚಿತ್ರತಂಡ ಮುನ್ನುಡಿ ಬರೆದಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed