`4.30-6.00 ಮುಹೂರ್ತ, ನಾಲ್ಕು ಜನ ಕಾಣಿಸ್ತಿಲ್ಲ`ಚಿತ್ರದ ಮುಹೂರ್ತ
Posted date: 28 Sat, Jan 2023 � 02:06:40 PM
ಮೇಲಿನ ವಾಕ್ಯ ಚಿತ್ರದ ಶೀರ್ಷಿಕೆಯಾಗಿದೆ. ಚಂದನವನದ ಹಿರಿಯ ನಿರ್ದೇಶಕರುಗಳಾದ ದೊರೆ-ಭಗsವಾನ್ ಇದ್ದಂತೆ ಕಾಲಿವುಡ್‌ನ ಶಿವರಾಜ್ ಮತ್ತು ಪೂವೈಸುರೇಶ್ ಜಂಟಿಯಾಗಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡಿರುವ ಡಿ.ಯೋಗರಾಜ್ ಅವರು ನೀಲಕಂಠ ಫಿಲಿಂಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡುವ ಜತೆಗೆ ಛಾಯಾಗ್ರಹಣ-ಸಂಕಲನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಕೈಗಾರಿಕೋದ್ಯಮಿ ಹೂಸೂರು ಮೂಲದ ಮಹೇಂದ್ರನ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರದ ಮಹೂರ್ತ ಸಮಾರಂಭವು ಗಣರಾಜ್ಯೋತ್ಸವ ದಿನದಂದು ರೇಣುಕಾಂಬ ಸ್ಟುಡಿಯೋದಲ್

90ರ ದಶಕದಲ್ಲಿ ನಡೆಯುವ ರೆಟ್ರೋ ಕಥೆಯು ಕಲ್ಯಾಣ ಮಂಟಪದಲ್ಲಿ ಒಂದು ದಿನದಲ್ಲಿ ನಡೆಯುವ ಘಟನೆಗಳನ್ನು ಹಾಸ್ಯದ ಮೂಲಕ ತೋರಿಸಲಾಗುವುದು. ಪೂವೈಸುರೇಶ್ ವಿವಾಹಕ್ಕೆ ಹೋದ ಸಂದರ್ಭದಲ್ಲಿ ನೋಡಿದಂತ ನೈಜ ಅಂಶಗಳನ್ನು ಚಿತ್ರರೂಪಕ್ಕೆ ತರುತ್ತಿರುವುದಲ್ಲದೆ ಬೀಗರ ಪಾತ್ರಕ್ಕೆ ಬಣ ಹಚ್ಚುತ್ತಿದ್ದಾರೆ. ಮದುವೆ ಅಂದರೆ ಎಷ್ಟೇಲ್ಲಾ ಪ್ರಶ್ನೆಗಳು ಉದ್ಬವವಾಗುತ್ತದೆ. ವರದಕ್ಷಣೆ, ಕುಡಿದು ಬಂದು ಗಲಾಟೆ ಮಾಡುವುದು, ಅಡುಗೆ ಸರಿಯಿಲ್ಲವೆಂದು ಮೂಗು ತೂರಿಸುವುದು. ಹೆಣ್ಣು ಓಡಿ ಹೋಗುವುದು, ಮತ್ತೋಂದು ಕಡೆ ಗಂಡು ವಿರೋದ ವ್ಯಕ್ತಪಡಿಸುವುದು. ಇನ್ನು ಮುಂತಾದವು ಆ ಜಾಗದಲ್ಲಿ ನಡೆಯುತ್ತದೆ. ತಂಗಿ ಮಗಳಿಗೆ ಕೊಡಬಾರದೆನ್ನುವ ಹಠ, ಹೆಣ್ಣನು ಸ್ವಂತದವರಿಗೆ ಧಾರೆ ಏರೆಯಬಾರದೆನ್ನುವ ಧೋರಣೆ. ಇವೆರಡು ಪಾತ್ರಗಳ ಸುತ್ತ ಚಿತ್ರವು ಸಾಗುತ್ತದೆ. ಊರಿನಲ್ಲಿ ನಡೆಯುತ್ತಿರುವುದರಿಂದ ಅಲ್ಲಿನ ಜನರು ಏನು ಮಾಡುತ್ತಾರೆ. ಅಂತಿಮವಾಗಿ ಶುಭ ಮುಹೂರ್ತ ನಡೆಯುತ್ತದಾ? ಇಲ್ಲವಾ? ಎಂಬುದು ಒನ್ ಲೈನ್ ಸ್ಟೋರಿಯಾಗಿದೆ.
       
`ರಥಾವರ` ನಿರ್ಮಾಪಕ ಧರ್ಮಶ್ರೀಮಂಜುನಾಥ್ ಪುತ್ರ ಗೋವಿಂದ್ ರಂಗಭೂಮಿಯಲ್ಲಿ ತರಭೇತಿ ಪಡೆದುಕೊಂಡು ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಸನ ಕಡೆಯ ಜಾನ್ವಿಶರ್ಮ, ಮೈಸೂರಿನ ಸುರಕ್ಷಿತಾ ನಾಯಕಿಯರು. ಇಬ್ಬರಿಗೂ ತಲಾ ಮೂರು ಚಿತ್ರಗಳಲ್ಲಿ ನಟಿಸಿದ ಅನುಭವವಿರುತ್ತದೆ. ಉಳಿದಂತೆ ಬಲರಾಜವಾಡಿ, ಬ್ಯಾಂಕ್‌ಜನಾರ್ಧನ್, ಟೆನ್ನಿಸ್‌ಕೃಷ್ಣ, ಕಮಲಾ, ತನುಜಾ, ಮಮತಾ, ಸವಿತಾ, ಅರವಿಂದ್ ಹಾಗೂ ನಾಲ್ಕು ಸಿನಿಮಾ ತರಭೇತಿ ಶಾಲೆಗಳ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.
       
ಅಗ್ನಿಗಣೇಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚೆನ್ನಪಟ್ಟಣ, ಮಂಡ್ಯ, ಚಿಕ್ಕಮಗಳೂರು, ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಅಂದುಕೊಂಡಂತೆ ಆದರೆ ಏಪ್ರಿಲ್‌ದಲ್ಲಿ ಕನ್ನಡ, ತಮಿಳು ಭಾಷೆಯಲ್ಲಿ ಬಿಡುಗಡೆ ಮಾಡಲು ತಂಡವು ಯೋಜನೆ ರೂಪಿಸಿಕೊಂಡಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed