ಅಕ್ಟೋಬರ್ 8ಕ್ಕೆ ``ಬಾಬು ಮಾರ್ಲಿ`` ತೆರೆಗೆ.
Posted date: 28 Tue, Sep 2021 05:07:20 PM
ಕ್ರೀಡಾ ಪ್ರಧಾನ ಚಿತ್ರದ ನಾಯಕನಾಗಿ ಅವಿನಾಶ್ ಸಂಪತ್. ನಾಯಕಿಯಾಗಿ ಬಾಲಿವುಡ್ ಬೆಡಗಿ ಮೀನಾಕ್ಷಿ ದೀಕ್ಷಿತ್. ವಾಲಿಬಾಲ್ ಆಟಗಾರನೊಬ್ಬನ ಜೀವನದಲ್ಲಿ ನಡೆದ ಘಟನೆಗಳನ್ನಾಧರಸಿ ನಿರ್ಮಾಣವಾಗಿರುವ ಚಿತ್ರ ``ಬಾಬು ಮಾರ್ಲಿ``.
ಈ ಚಿತ್ರ ಅಕ್ಟೋಬರ್ 8ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ಚಿತ್ರದಲ್ಲಿ ನಾಯಕನ ಹೆಸರು ಬಾಬು. ಆತ ಪ್ರಸಿದ್ಧ ವಾಲಿಬಾಲ್ ಆಟಗಾರ. ಬಾಬು ಕಾಲಕ್ರಮೇಣ ಮಾದಕದ್ರವ್ಯ ವ್ಯಸನಿಯಾಗುತ್ತಾನೆ. ನಂತರ ಅವನ ಜೀವನದ ಹಾದಿಯೇ ಬೇರೆಯಾಗುತ್ತದೆ. ಆನಂತರ ಸ್ನೇಹದ ಸುಳಿಯಲ್ಲಿ ಸಿಲುಕುವ ನಾಯಕ ಮೊದಲಿನಂತಾಗುತ್ತಾನೆ.  ಆಟದಲ್ಲಿ ಉತ್ತಮ ಹೆಸರು ಗಳಿಸುತ್ತಾನೆ. ಇದೇ ಚಿತ್ರದ ಪ್ರಮುಖ ಕಥಾವಸ್ತು. ಬರೀ ಕ್ರೀಡೆ ಅಷ್ಟೇ ಅಲ್ಲ. ಪ್ರೇಮಕಥೆಯೂ ಈ ಚಿತ್ರದಲ್ಲಿದೆ.  ಇದೊಂದು ಯುವಜನತೆಯ ಮನಸ್ಸಿಗೆ ಹೇಳಿ ಮಾಡಿಸಿದ ಕಥಾವಸ್ತುವಂತೆ.

ಈ ಚಿತ್ರಕ್ಕೆ ಊಟಿ, ಬೆಂಗಳೂರಿನಲ್ಲಿ 45ದಿನಗಳ ಚಿತ್ರೀಕರಣ ನಡೆದಿದೆ. ಮಾಹಿ ಜಿ.ವೈ.ಕೆ ಈ ಚಿತ್ರದ ನಿರ್ದೇಶಕರು. ಇವರೇ ಕಥೆ ಚಿತ್ರಕಥೆ ಬರೆದಿದ್ದಾರೆ. 
ಜಗನ್ಮೋಹನ್ ಫಿಲಂಸ್ ಲಾಂಛನದಲ್ಲಿ ಜಗನ್ಮೋಹನ ರಾವ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.ಕೃತಿಕ ಈ ಚಿತ್ರದ ಸಹ ನಿರ್ಮಾಪಕರು.

ಅವಿನಾಶ್ ಸಂಪತ್ ಗೆ ನಾಯಕನಾಗಿ ಇದು ಮೊದಲ ಚಿತ್ರ. ಬಾಲಿವುಡ್ ನಲ್ಲಿ ಹೆಸರು ಮಾಡಿರುವ ಮೀನಾಕ್ಷಿ ದೀಕ್ಷಿತ್ ಈ ಚಿತ್ರದ ನಾಯಕಿ. ತ್ರಿವೇಣಿ (ಟಗರು ಸರೋಜ), ಸಾರಿಕ, ಕಿಲ್ಲರ್ ವೆಂಕಟೇಶ್, ಅಶೋಕ್, ಶಿಲ್ಪ, ಪೂಜಾ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಐದು ಹಾಡುಗಳಿರುವ ಈ ಚಿತ್ರಕ್ಕೆ ಎಂ.ಸಿ.ಬಿಜು, ರಾಹುಲ್ ಡಿಟೊ ಹಾಗೂ ಎಸ್ ಐ ಡಿ ಸಂಗೀತ ಸಂಯೋಜನೆ ಮಾಡಿದ್ದಾರೆ. 
ಚಿತ್ರದಲ್ಲಿ ಎಸ್ ಐ ಡಿ ಅವರ ನೇತೃತ್ವದ ಬಿ ಜಿ ಎಂ ಪ್ರಮುಖ ಆಕರ್ಷಣೆಯಾಗಲಿದೆಯಂತೆ.

ಪ್ರಖ್ಯಾತ್ ನಾರಾಯಣ್ ಛಾಯಾಗ್ರಹಣ, ಬಿಪಿನ್  ಪಾಲ್ ಸಾಮುಯಲ್, ವಿಷ್ಣು ಮಾನಿಕ್,  ಜಾರ್ಜ್ ಸಂಕಲನ ಹಾಗೂ ನೀರ್ಜಾ ರಾಕಿಲ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ರಾಮಕೃಷ್ಣ ರಣಗಟ್ಟಿ "ಬಾಬು ಮಾರ್ಲಿ" ಗೆ ಸಂಭಾಷಣೆ ಬರೆದಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed