ಅಖಂಡ-2 ಸಿನಿಮಾಗೆ ಮುಹೂರ್ತದ ಸಂಭ್ರಮ..ಮತ್ತೆ ಒಂದಾದ ಬಾಲಯ್ಯ-ಬೋಯಾಪಾಟಿ ಸೀನು..
Posted date: 18 Fri, Oct 2024 01:53:07 PM
ಸಿಂಹ, ಲೆಜೆಂಡ್ ಹಾಗೂ ಅಖಂಡದಂತಹ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಕ್ರೇಜಿ ಕಾಂಬಿನೇಷನ್ ಮಾಸ್ ಆಫ್ ಗಾಡ್ ಖ್ಯಾತಿಯ ಬಾಲಕೃಷ್ಣ ಹಾಗೂ ಬೋಯಾಪಾಟಿ ಸೀನು..ಈ ಜೋಡಿ ನಾಲ್ಕನೇ ಬಾರಿಗೆ ಒಂದಾಗಿದೆ. ಇಂದು ಬಾಲಯ್ಯ-ಬೋಯಾಪಾಟಿ ಹೊಸ ಸಿನಿಮಾದ ಮುಹೂರ್ತ ಸಮಾರಂಭ ಹೈದ್ರಾಬಾದ್ ನಲ್ಲಿ ನೆರವೇರಿದೆ. ಈ ಕಾಂಬೋ ಅಖಂಡ-2 ಸಿನಿಮಾವನ್ನು ಘೋಷಣೆ ಮಾಡಿದೆ. 

2021ರಲ್ಲಿ ತೆರೆಕಂಡಿದ್ದ ಬಾಲಯ್ಯ ಹಾಗೂ ಬೋಯಾಪಾಟಿ ಸೀನು ಜೋಡಿಯ ಅಖಂಡ ಸಿನಿಮಾ ಮೆಗಾ ಹಿಟ್ ಕಂಡಿತ್ತು. ಬಾಲಯ್ಯ ಡಬಲ್ ರೋಲ್‌ನಲ್ಲಿ ಧಮಾಕ ಎಬ್ಬಿಸಿದ್ದರು. ಈ ಚಿತ್ರದಲ್ಲಿ ಬಾಲಯ್ಯಗೆ ಪ್ರಾಗ್ಯಾ ಜೋಡಿಯಾಗಿ ನಟಿಸಿದ್ದರು. ಈ ಚಿತ್ರ ಬ್ಲ್ಯಾಕ್ ಬಸ್ಟರ್ ಹಿಟ್ ಆಗಿತ್ತು. ಹಾಗಾಗಿ ಇದರ ಸೀಕ್ವೆಲ್ ಮಾಡಲು ಚಿತ್ರತಂಡ ಸಜ್ಜಾಗಿದೆ. 

ಅಖಂಡ ಸಿನಿಮಾವನ್ನು 14 ರೀಲ್ಸ್ ಫ್ಲಸ್ ಬ್ಯಾನರ್ ನಡಿ ರಾಮ್ ಅಚಂತ ಮತ್ತು ಗೋಪಿಚಂದ್ ಅಚಂತಾ ನಿರ್ಮಾಣ ಮಾಡಲಿದ್ದಾರೆ. ಎಂ ತೇಜಸ್ವಿನಿ ನಂದಮೂರಿ ಈ ಚಿತ್ರವನ್ನು ಪ್ರೆಸೆಂಟ್ ಮಾಡಲಿದ್ದಾರೆ. ಅಖಂಡ-2 ತಾಂಡವ ಎಂಬ ಟೈಟಲ್ ನಡಿ ಸಣ್ಣ ಝಲಕ್ ರಿಲೀಸ್ ಮಾಡಿರುವ ಚಿತ್ರತಂಡ ಕಿಕ್ ಹೆಚ್ಚಿಸಿದೆ. 

ಅಖಂಡ 2 ಪ್ರತಿಭಾವಂತ ತಂತ್ರಜ್ಞರ ತಂಡವನ್ನು ಹೊಂದಿದೆ. ಪ್ರೀಕ್ವೆಲ್ ಗೆ ಬ್ಲಾಕ್ ಬಸ್ಟರ್ ಸಂಗೀತ ನೀಡಿದ್ದ ಎಸ್ ಥಮನ್ ಸೀಕ್ವೆಲ್ ನಲ್ಲೂ ಕೆಲಸ ಮಾಡಲಿದ್ದಾರೆ. ಸಿ ರಾಮ್‌ಪ್ರಸಾದ್‌ ಅವರು ಸಂತೋಷ್‌ ಡಿ ಡೇಟಕೆ ಅವರೊಂದಿಗೆ ಕ್ಯಾಮರಾ ನಿರ್ವಹಿಸಲಿದ್ದಾರೆ. ಎ.ಎಸ್.ಪ್ರಕಾಶ್ ಕಲಾ ನಿರ್ದೇಶನ, ತಮ್ಮಿರಾಜು ಸಂಕಲನ ಚಿತ್ರಕ್ಕಿದೆ. ಶೀಘ್ರದಲ್ಲೇ ಅಖಂಡ ಸಿನಿಮಾದ ಶೂಟಿಂಗ್ ಶುರುವಾಗಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed