ಅನಾಥ ಚಿತ್ರ ಈ ವಾರ ತೆರೆಗೆ
Posted date: 26 Tue, Nov 2024 12:07:09 PM
ಗೋನೇಂದ್ರ ಫಿಲಂ ‌ಸಂಸ್ಥೆಯಲ್ಲಿ ಡಿವೈನ್ ಸ್ಟಾರ್  ಇಂದ್ರ ಅವರು ನಾಯಕನಾಗಿ ಅಭಿನಯಿಸಿರುವ, ಜತೆಗೆ ನಿರ್ಮಾಪಕ, ಸಂಗೀತ ನಿರ್ದೇಶಕನಾಗಿಯೂ ಕೆಲಸ ಮಾಡಿರುವ ಚಿತ್ರ. ಅನಾಥ  ಈ ಚಿತ್ರಕ್ಕೆ ವಿಜಯಪುರದ ಯುವ ನಿರ್ದೇಶಕ  ಅಣ್ಣಾ ಶೇಟ್ ಕೆ. ಎ. ಆಕ್ಷನ್ ಕಟ್ ಹೇಳಿದ್ದಾರೆ. ಬಿಎಸ್ ಸಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಚಿತ್ರರಂಗಕ್ಕೆ ಬಂದು, ಅನಾಥ ಚಿತ್ರ ನಿರ್ದೇಶಿಸಿದ್ದಾರೆ.
ಕನ್ನಡ. ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣವಾಗಿರುವ  ಈಚಿತ್ರ ಇದೇವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 
ಕನಕಪುರ, ಹೊಸಕೋಟೆ, ಮಡಿಕೇರಿ ಬೆಂಗಳೂರು ಹಾಗು ಹಿರಿಯೂರು ಸುತ್ತಮುತ್ತ  ಸುಮಾರು 50 ದಿನಗಳ ಕಾಲ ಈ ಚಿತ್ರದ  ಚಿತ್ರೀಕರಣ ನಡೆಸಲಾಗಿದೆ. ಭಗ್ನ ಪ್ರೇಮಿಯ ಬದುಕಲ್ಲಿ ಜಾತೀಯತೆ ಎಂಬ  ಬಿರುಗಾಳಿ ಬೀಸಿದಾಗ ಆತನ  ದುರಂತದ ಬದುಕಿನ ಅಂಶಗಳೇ ಅನಾಥ ಚಿತ್ರದ  ಕಥಾಹಂದರ. ಈಗಿನ ಪ್ರಸಕ್ತ ಸಮಾಜದ ಹಾಗು ಹೋಗುಗಳ ನೈಜ ಘಟನೆ ಆದಾರವಾಗಿಟ್ಟುಕೊಂಡು  ಅನಾಥ ಚಿತ್ರದ ಕಥಾಹಂದರ ಹೆಣೆಯಲಾಗಿದೆ.
 
ಸೆಂಟಿಮೆಂಟ್,ಲವ್ ,ಕಾಮಿಡಿ, ಸಸ್ಪೆನ್ಸ್ ನಂಥ ಎಲ್ಲಾ ಮನರಂಜನಾತ್ಮಕ ಅಂಶಗಳ ಜಗೆ ಸಮಾಜಕ್ಕೆ  ಉತ್ತ. ಸಂದೇಶ ನೀಡುವ  ಚಿತ್ರವಿದು.
 
ವೀರೇಶ್ ಕುಮಾರ್ ಅವರ ಛಾಯಾಗ್ರಹಣ, ರಮೇಶ್ ರಂಜಿತ್ ಅವರ ಸಾಹಸ, ಬಾಲ ಮಾಸ್ಟರ್ ನೃತ್ಯ ನಿರ್ದೇಶನ , ಮಾರುತಿ ರಾವ್ ಸಂಕಲನ, ಎಲ್. ಎನ್ ಸೂರ್ಯ ಅವರ ಸಾಹಿತ್ಯ, ಶಿವಕುಮಾರ್ ಶೆಟ್ಟಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ.

ಚಿತ್ರದಲ್ಲಿ ಡಿವೈನ್ ಸ್ಟಾರ್  ಇಂದ್ರ, ನಿಖಿತಾ ಸ್ವಾಮಿ, ಯುಕ್ತ ಪರ್ವಿ, ಶೋಭರಾಜ್, ಸಂಗೀತ, ಹೊನ್ನವಳ್ಳಿ ಕೃಷ್ಣ, ಬಾಯ್ ಬಡ್ಕ ಸಿದ್ದು ಜಿಮ್ ಹರೀಶ್, ಮೀಸೆ ಮೂರ್ತಿ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ‌.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed