ಆಧುನಿಕ ರಾಮನ ಬದುಕಲ್ಲಿ ಗ್ರಾಮೋದ್ಧಾರದ ಕನಸು.....ರೇಟಿಂಗ್: 3.5/5 ****
Posted date: 11 Sat, May 2024 02:11:44 PM
ತನ್ನ  ಊರನ್ನು ಉದ್ದಾರ ಮಾಡಲು ಹೊರಟ ಆಧುನಿಕ ರಾಮನ ಬದುಕಿನಲ್ಲಿ ಎದುರಾಗುವ ಸಂಕಷ್ಟಗಳು, ಅದನ್ನೆಲ್ಲ  ಆತ ಹೇಗೆ ಎದುರಿಸಿದ ಎಂಬುದನ್ನ  ರೋಮ್ಯಾಂಟಿಕ್ ಕಾಮಿಡಿ ಕಥೆಯ  ಮೂಲಕ ಪ್ರೇಕ್ಷಕರ ಮುಂದೆ ತಂದೆದ್ದಾರೆ ನಿರ್ದೇಶಕ ವಿಕಾಸ್ ಪಂಪಾಪತಿ. 
 
ಮೂರು ಅಧ್ಯಾಯದ ರೂಪಕವಾಗಿ ತೆರೆಗೆ ಮೇಲೆ ಬಂದಿರುವ  ರಾಮನ ಅವತಾರ"ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲವಾಗಿದೆ. ಚಿತ್ರದ ನಾಯಕ  ತಾನು ಹುಟ್ಟಿ ಬೆಳೆದ ಜಾಗದಲ್ಲಿ ಬದುಕು ಕಟ್ಟಿಕೊಳ್ಳುವುದು ಮುಖ್ಯ ಎಂಬ ನಿರ್ಧಾರ ಮಾಡುತ್ತಾನೆ ಜಂಟಲ್ ಮ್ಯಾನ್ ರಾಮ. (ರಿಷಿ). ತಾನು ಪ್ರೀತಿಸಿದ ಹುಡುಗಿ ಪೂರ್ಣಿ (ಶುಭ್ರ ಅಯ್ಯಪ್ಪ) ತನ್ನನ್ನು  ಒಪ್ಪಿದಳು ಅನ್ನುವಷ್ಟರಲ್ಲಿ ಕೆಲಸಕ್ಕಾಗಿ  ಬೆಂಗಳೂರಿಗೆ ಹೋಗುತ್ತಾಳೆ. ನಂತರ ಗೆಳೆಯರ ತಂಡ ಕಟ್ಟಿಕೊಂಡು ತನ್ನೂರನ್ನು ಉದ್ದಾರ ಮಾಡಲು ಊರ ಮುಖಂಡರ ಸಹಕಾರ ಪಡೆದು ರಾಜಕೀಯ ಸೇರಲೆಂದು  ಹಣ ಸಂಗ್ರಹಕ್ಕೆ  ರಾಮ‌ ಮುಂದಾಗುತ್ತಾನೆ.  ಒಮ್ಮೆ ತಂದೆಯ ನಾಟಕ ಮಂಡಳಿಯಲ್ಲಿ ರಾಮನ ‌ ಪಾತ್ರಧಾರಿ ಬರದ ಕಾರಣ ರಾಮನ ಪಾತ್ರ ನಿರ್ವಹಿಸಬೇಕಾಗುತ್ತದೆ. ರಾಜಕೀಯಕ್ಕೆ ಬರುವ ರಾಮನಿಗೆ ಪ್ರತಿ  ಓಟು ಮುಖ್ಯವಾಗಿರುತ್ತದೆ.  ಈ ನಡುವೆ ಸಂಗ್ರಹಿಸಿದ ಹಣ ಕಾಣೆಯಾಗಿ, ಊರ ಜನರ ಕೋಪಕ್ಕೆ ಗುರಿಯಾಗುವ ರಾಮ, ಕೊನೆಗೆ  ಊರನ್ನೇ  ಬಿಡುವ ಪರಿಸ್ಥಿತಿ ಎದುರಾಗುತ್ತದೆ. 

ರೆಸಾರ್ಟ್ ನಲ್ಲಿ ಕೆಲಸ ಮಾಡುವ  ಗೆಳೆಯನ ಸಹಾಯ ಪಡೆದ ರಾಮ, ಹಣ ಕದ್ದವನನ್ನ  ಹುಡುಕಲು ಮುಂದಾಗುತ್ತಾನೆ. ಅದೇ ರೆಸಾರ್ಟ್ ಗೆ  ಪ್ರಾಜೆಕ್ಟ್ ವರ್ಕ್ ಮಾಡಲು ಬಂದಿದ್ದ  ರಿಪೋರ್ಟರ್ (ಪ್ರಣಿತಾ ಸುಭಾಷ್ ) ಕಂಡ ರಾಮ, ಆಕೆಯ  ಮನಸನ್ನ  ಸೆಳೆಯುತ್ತಾಳೆ. ಆಕೆಗೆ ಸಹಾಯ ಮಾಡುವ ನೆಪದಲ್ಲಿ ಹೆಸರು , ಊರು , ಹಿನ್ನೆಲೆ ಕೇಳುವಷ್ಟರಲ್ಲಿ ಆಕೆ  ಕಿಡ್ನಾಪ್ ಆಗುತ್ತಾಳೆ.     

ಈ ನಡುವೆ ಡ್ರಗ್ಸ್,  ಹೆಣ್ಣುಮಕ್ಕಳ ಮಾರಾಟ ದಂಧೆ ಮಾಡಿಕೊಂಡಿದ್ದ ಗ್ಯಾಂಗ್ ಸ್ಟರ್ ಅಲೆಕ್ಸಾಂಡರ್ (ಅರುಣ್ ಸಾಗರ್) ಬಂದಮೇಲೆ ಕಥೆ ಹೊಸ ತಿರುವು ಪಡೆದು ಚಿತ್ರ ಕ್ಲೈಮಾಕ್ಸ್ ಹಂತಕ್ಕೆ ಬರುತ್ತದೆ. ರಾಮನ ರಾಜಕೀಯ ಭವಿಷ್ಯ ಏನಾಯ್ತು, ನಾಯಕಿಯನ್ನು ಯಾರು ಕಿಡ್ನಾಪ್ ಮಾಡಿದ್ದರು, ಈ ಎಲ್ಲದಕ್ಕೂ ಉತ್ತರ ಚಿತ್ರಮಂದಿರದಲ್ಲಿ ಸಿಗುತ್ತದೆ.
 
ನಿರ್ದೇಶಕ ವಿಕಾಸ್ ಪಂಪಾಪತಿ ಅವರು ಆಧುನಿಕ ರಾಮನ ಆಲೋಚನೆಗೆ ಪೂರಕವಾಗೇ ಕಥಾವಸ್ತುವನ್ನು ಆಯ್ಕೆ ಮಾಡಿದ್ದಾರೆ.  ಸಂಭಾಷಣೆಗಳು ಗಮನ ಸೆಳೆಯುತ್ತದೆ. ಹೊಸದೊಂದು  ಆಲೋಚನೆಯಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ  ನಿರ್ಮಾಪಕರು ತುಂಬಾನೇ ಎಫರ್ಟ್ ಹಾಕಿದದ್ದಾರೆ. ಜೂಡಾ ಸ್ಯಾಂಡಿ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ಇನ್ನು ಛಾಯಾಗ್ರಹಕ ವಿಷ್ಣು ಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೆ ಕೈ ಚಳಕ ಉತ್ತಮವಾಗಿದೆ.  

ಇನ್ನು ನಾಯಕನಾಗಿ ರಿಷಿ ಎಂದಿನಂತೆ ತಮ್ಮ ಪಾತ್ರವನ್ನು ಎಲ್ಲಾ ವಿಭಾಗದಲ್ಲೂ ಸೆಂಟಿಮೆಂಟ್, ಆಕ್ಷನ್, ಕಾಮಿಡಿ, ಪ್ರೀತಿ  ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ತನ್ನ ಮಾತಿನ ವರಸೆಯಲ್ಲೇ ಜನರ ಗಮನ ಸೆಳೆಯುತ್ತಾರೆ. ಇವರ ಜೋಡಿಯಾಗಿ ಪ್ರಣಿತಾ ಸುಭಾಷ್ ಮುದ್ದಾಗಿ ಕಾಣಿಸಿದ್ದು. ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅರುಣ್ ಸಾಗರ್  ಬಹುಮುಖ ಪ್ರತಿಭೆ ಎಂಬುದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿವೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed