ಈವಾರ ತೆರೆಗೆ ಟಕ್ಕರ್
Posted date: 03 Tue, May 2022 05:30:07 PM
ದರ್ಶನ್ ಸೋದರಳಿಯ ಮನೋಜ್ ಕುಮಾರ್, ಪುಟ್ಟಗೌರಿ ಮದುವೆ, ಕನ್ನಡತಿ ಖ್ಯಾತಿಯ  ರಂಜನಿ ರಾಘವನ್  ಪ್ರಮುಖ ಪಾತ್ರಗಳಲ್ಲಿ  ಅಭಿನಯಿಸಿರುವ  ʻಟಕ್ಕರ್ʼ ಚಿತ್ರ ಈ‌ ಶುಕ್ರವಾರ ರಾಜ್ಯಾದ್ಯಂತ ತೆರೆಗೆ  ಬರಲಿದೆ. ವಿ. ರಘುಶಾಸ್ತ್ರಿ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಈ ಚಿತ್ರಕ್ಕಿದ್ದು, ಹಾಡುಗಳಿಗೆ ಮಣಿಕಾಂತ್ ಕದ್ರಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. 

ಎಸ್.ಎಲ್.ಎನ್ ಕ್ರಿಯೇಶನ್ಸ್ ಸಂಸ್ಥೆಯ ಅಡಿಯಲ್ಲಿ ನಾಗೇಶ ಕೋಗಿಲು ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.‌  ಇಡೀ ಜಗತ್ತನ್ನು ನಲುಗುವಂತೆ ಮಾಡಿರುವ, ಅದರಲ್ಲೂ ಹೆಣ್ಣುಮಕ್ಕಳನ್ನು ಹಿಂಡುತ್ತಿರುವ ಸೈಬರ್ ಕ್ರೈಂ ಸುತ್ತ ಹೆಣೆದಿರುವ ಕತೆಯನ್ನು ರೋಚಕವಾಗಿ ಹಿಡಿದಿಟ್ಟಿರುವ ಚಿತ್ರ ಟಕ್ಕರ್. ಭಜರಂಗಿ ಖ್ಯಾತಿಯ ಸೌರವ್ ಲೋಕಿ ಇಲ್ಲಿ ಖಳನಾಯಕನಾಗಿ ಅಬ್ಬರಿಸಿದ್ದಾರೆ. ವಿಕ್ರಾಂತ್ ರೋಣ ಚಿತ್ರಕ್ಕೆ ಕೆಲಸಮಾಡಿರುವ  ವಿಲಿಯಮ್ಸ್ ಡೇವಿಡ್ ಟಕ್ಕರ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಅತ್ಯಾಧುನಿಕ ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ನಡೆಸಲಾಗಿದೆ. 

ಸಾಧು ಕೋಕಿಲಾ, ಅಶ್ವಿನ್ ಹಾಸನ್, ಆದಿ, ಕಾಮಿಡಿ ಕಿಲಾಡಿ ನಯನಾ, ಕುರಿ ಸುನಿಲ್, ಜೈಜಗದೀಶ್, ಈಟಿವಿ ಶ್ರೀಧರ್, ಹಿರಿಯ ನಟಿ ಸುಮಿತ್ರಾ ಸೇರಿದಂತೆ ಇನ್ನೂ ಅನೇಕ ಕಲಾವಿದರು ಟಕ್ಕರ್ ಚಿತ್ರದ ಭಾಗವಾಗಿದ್ಧಾರೆ.  ಮಲೇಶಿಯಾ, ಮೈಸೂರು, ಬೆಂಗಳೂರು ಸೇರಿದಂತೆ ಸಾಕಷ್ಟು ಲೊಕೇಶನ್ ಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed