ಒಂದೇ ಟೇಕ್‌ದಲ್ಲಿ ಆರು ನಿಮಿಷದ ದೃಶ್ಯ
Posted date: 26 Mon, Apr 2021 01:02:57 PM
ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್.ಟಿ.ಆರ್ ನಟನೆಯ `ಮಾನಾಡು` ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್‌ಕಶ್ಯಪ್, ತೆಲುಗುದಲ್ಲಿ ರವಿತೇಜ ಮತ್ತು ಮಲೆಯಾಳಂದಲ್ಲಿ ಪೃಥ್ವಿರಾಜ್ ಲೋಕಾರ್ಪಣೆ ಮಾಡಿದ್ದರು. ಸದ್ಯ ಕನ್ನಡದ `ರಿವೈಂಡ್`ಶೀರ್ಷಿಕೆ ಬದಲಾಗಿದ್ದು, ಮುಂದಿನ ದಿನಗಳಲ್ಲಿ ಹೊಸ ಹೆಸರನ್ನು ತಿಳಿಸುವುದಾಗಿ ತಂಡವು ಹೇಳಿಕೊಂಡಿದೆ. ಮೊನ್ನೆ ನಡೆದ ಚಿತ್ರೀಕರಣದಲ್ಲಿ ಆರು ನಿಮಿಷದ ಸಂಭಾಷಣೆಯನ್ನು ಒಂದೇ ಟೇಕ್‌ದಲ್ಲಿ ಮುಗಿಸಿ, ಎಲ್ಲರಿಗೂ ಸಿಲಂಬರಸನ್ ಅಚ್ಚರಿ ಮೂಡಿಸಿದ್ದು ಸುದ್ದಿಯಾಗಿದೆ. 
 
ಪೊಲಟಿಕಲ್ ಡ್ರಾಮ ಕತೆ ಹೊಂದಿರುವ ಚಿತ್ರಕ್ಕೆ ರಚನೆ-ನಿರ್ದೇಶನ ವೆಂಕಟ್‌ಪ್ರಭು, ಸಂಗೀತ ಯುವನ್‌ಶಂಕರ್‌ರಾಜ, ಛಾಯಾಗ್ರಹಣ ರಿಚರ್ಡ್.ಎಂ.ನಾಥನ್, ಸಂಕಲನ ಪ್ರವೀಣ್.ಕೆ.ಎಲ್, ಸಾಹಸ ಸ್ವಂಟ್‌ಶಿವ, ನೃತ್ಯ ರಾಜುಸುಂದರಂ ಅವರದಾಗಿದೆ.  ಸುರೇಶ್‌ಕಮತ್‌ಚಿ ಅವರು`ವಿ ಹೌಸ್ ಪ್ರೊಡಕ್ಷನ್`ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಕಲ್ಯಾಣಪ್ರಿಯದರ್ಶನ್ ನಾಯಕಿ. ಮತ್ತೋಂದು ಮುಖ್ಯ ಪಾತ್ರದಲ್ಲಿ ಎಸ್.ಜೆ.ಸೂರ್ಯ ಇವರೊಂದಿಗೆ ವೈ.ಜಿ.ಮಹೇಂದ್ರನ್, ವಾಗಿಚಂದ್ರಶೇಖರ್, ಅಂಜನಕೀರ್ತಿ, ಎಸ್.ಎ.ಚಂದ್ರಶೇಖರ್, ಉದಯ, ಮನೋಜ್.ಕೆ.ಭಾರತಿ, ಪ್ರೇಮ್‌ಗಿಅಮರೆನ್, ಡ್ಯಾನಿಯೆಲ್, ಕರುಣಾಕರನ್ ಮುಂತಾದವರು ನಟಿಸುತ್ತಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed