ಕನ್ನಡದಲ್ಲಿ ಹೊಸ ಬಗೆಯ ಚಿತ್ರ``ಔಟ್ ಆಫ್ ಸಿಲಬಸ್``...ರೇಟಿಂಗ್ : 3/5 ***
Posted date: 27 Fri, Dec 2024 11:41:09 PM
ಚಿತ್ರ : ಔಟ್ ಆಫ್ ಸಿಲಬಸ್
ನಿರ್ದೇಶನ ; ಪ್ರದೀಪ್ ದೊಡ್ಡಯ್ಯ
ತಾರಾಗಣ : ಪ್ರದೀಪ್ ದೊಡ್ಡಯ್ಯ, ಹೃತಿಕಾ, ಯೋಗರಾಜ್ ಭಟ್, ಅಚ್ಯುತ್ ಕುಮಾರ್,  ರಾಮಕೃಷ್ಣ, ಜಹಂಗೀರ್, ಮಹಂತೇಶ್ ಹಿರೇಮಠ, ಚಿತ್ಕಲಾ ಬಿರಾದಾರ್,ಮಂಜು‌ ಪಾವಗಡ ಮತ್ತಿತರರು
 
ಹೊಸ ಬಗೆಯ ಕಥೆಯ ಚಿತ್ರಗಳು ಮತ್ತು‌ ಕಂಟೆಂಟ್ ಹೊಂದಿರುವ ಚಿತ್ರಗಳು ಆಗಾಗ ಬರುತ್ತಿವೆ ಅವುಗಳ ಸಾಲಿಗೆ ಮತ್ತೊಂದು ಸೇರ್ಪಡೆ "  ಔಟ್ ಆಫ್ ಸಿಲಬಸ್ 
 
ಚಿತ್ರಕ್ಕೆ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹೀಗೆ ಹಲವು ವಿಭಾಗದಲ್ಲಿ ‌ಕೆಲಸ ಮಾಡುವ ಮೂಲಕ ಮೊದಲ ಪ್ರಯತ್ನದಲ್ಲಿ ನಟ ಪ್ರದೀಪ್ ದೊಡ್ಡಯ್ಯ ಹೊಸ ಕಥೆಯೊಂದಿಗೆ ಹೊಸ ವಿಷಯವನ್ನು ತೆರೆಗೆ ತಂದಿದ್ದಾರೆ. ಅದರಲ್ಲಿ ಯಶಸ್ವಿಯೂ ಕೂಡ ಆಗಿದ್ದಾರೆ.
 
ಪ್ರೀತಿ, ಪ್ರೇಮ, ಬದುಕು, ಜೀವನ, ಮೋಜು ಮಸ್ತಿ, ಹಾಸ್ಟಲ್ ಜೀವನ, ಸಾಮಾಜಿಕ ಮಾದ್ಯಮದಿಂದಾಗುವ ಅನಾಹುತ ಸೇರಿದಂತೆ ಹಲವು ವಿಷಯಗಳನ್ನು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಇಡಲಾಗಿದೆ.
 
ದೇವ್ - ಪ್ರದೀಪ್ ದೊಡ್ಡಯ್ಯ ಕಂಪನಿಯಲ್ಲಿ ಕೆಲಸ‌ ಮಾಡುತ್ತಿದ್ದರೂ   ಅ ಕಂಪನಿ ಕಡೆಯಿಂದಲೇ ವ್ಯಾಸಂಗ ಮಾಡಲು ಬಂದ ಪ್ರತಿಭಾವಂತ, ಈತನ ನಡೆ ನುಡಿ, ಕಾಲೇಜಿನ ಎಲ್ಲರಿಗೂ ಅಚ್ಚು ಮೆಚ್ಚು. ಈ ಕಾರಣಕ್ಕಾಗಿಯೇ  ದಿವ್ಯ - ಹೃತಿಕಾ ಶ್ರೀನಿವಾಸ್ ಕೂಡ ಮನಸೋಲುತ್ತಾಳೆ. ಈ ನಡುವೆ ಆಕೆಗೆ ಮನೆಯಲ್ಲಿ ಮದುವೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಾರೆ.
 
ಈ ವೇಳೆ ವಿದೇಶದಲ್ಲಿ ಕೆಲಸಕ್ಕೆ ತೆರಳುವ ದೇವ್ , ಕೆಲಸಲ್ಲಿ‌ ತಲ್ಲೀನನಾಗುತ್ತಾನೆ. ಹೀಗಾಗಿ‌ ಮದುವೆ ನಿಗಧಿಯಾಗಿದೆ ಎನ್ನುವುದನ್ನು ಹೇಳುವ ಪ್ರಯತ್ನ ಮಾಡಿದರೂ ಅದನ್ನು ಕೇಳಿಸಿಕೊಳ್ಳುವ ಗೋಜಿಗೆ  ಹೋಗದ ದೇವ್, ನೀನೆ ನಿಭಾಯಿಸಿ‌ ಎಂದು ಹೇಳಿ ಬಿಡ್ತಾನೆ. ಆದರೆ ಆಕೆಯೋ  ಈತನ. ನಡೆ ಕಂಡ ಪ್ರೀತಿ ಕಡಿತ ಮಾಡಿ ಬೇರೊಬ್ಬನ ಜೊತೆ ಮದುವೆಗೆ ಒಪ್ಪಿಕೊಂಡು ಬಿಡುತ್ತಾಳೆ.
 
ಇತ್ತ ಅಮೇರಿಕಾದಿಂದ ಬರುವ ದೇವ್, ತನ್ನ ಹುಡುಗಿ ಇನ್ನೂ ಪ್ರೀತಿಸುತ್ತಿದ್ದಾಳೆ ಎಂದು ಸಪ್ರೈಸ್ ಕೊಡಲು ಮುಂದಾಗುತ್ತಾನೆ. ಆಕೆ ಬೇರೊಬ್ಬನ ಜೊತೆ ಎಂಗೇಜ್ ಆದ ಆಕೆಯ ನಡೆ ಏನು , ದಿವ್ಯ, ದೇವ್ ಜೊತೆಯಾಗ್ತಾಳಾ ಅಥವಾ ಮನೆಯವರು ಒಪ್ಪಿದ ಹುಡುಗನ. ಜೊತೆ ಸೇರ್ತಾಳಾ , ಹುಟ್ಟು ಗುಣ ಸುಟ್ಟರೂ ಹೋಗಲ್ಲ,ಅನುಮಾನ ಸತ್ತರೂ ಬಿಡಿಲ್ಲ ಎಂತ ಹೇಳಿದ್ದಕ್ಕೆ ಅರ್ಥವಿದೆ. ಅದು ಏನು ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ
 
ಮೊದಲ ಪ್ರಯತ್ನದಲ್ಲಿ ನಟ, ನಿರ್ದೇಶಕ ಪ್ರದೀಪ್ ದೊಡ್ಡಯ್ಯ ಹೊಸತನದ ಕಥೆಯೊಂದಿಗೆ ವಿಭಿನ್ನ ಪ್ರಯತ್ನ ಮಾಡಿ ಪ್ರೇಕ್ಷಕರ ಗೆಲ್ಲುವ. ಕಸರತ್ತು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹೃತಿಕಾ ಶ್ರೀನಿವಾಸ್,ಯೋಗರಾಜ್ ಭಟ್, ಅಚ್ಯುತ್ ಕುಮಾರ್,  ರಾಮಕೃಷ್ಣ, ಜಹಂಗೀರ್, ಮಹಂತೇಶ್ ಹಿರೇಮಠ, ಚಿತ್ಕಲಾ ಬಿರಾದಾರ್,ಮಂಜು‌ ಪಾವಗಡ ಮತ್ತಿತರರು ಚಿತ್ರಕ್ಕೆ ಪೂರಕವಾಗಿ ನಟಿಸಿದ್ದಾರೆ.
.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed