ಕಲರ್`ಫುಲ್ ಸೆಟ್`ನಲ್ಲಿ `ತೋತಾಪುರಿ` ಹಾಡು
Posted date: 02 Fri, Apr 2021 07:35:22 PM
ರಂಗು ರಂಗಿನ ಸೆ‍ಟ್... ನೂರಾರು ನೃತ್ಯ ಕಲಾವಿದರು, ಜಗ್ಗೇಶ್, ಅದಿತಿ ಸೇರಿದಂತೆ ಸಾಕಷ್ಟು ಪ್ರಮುಖ ಕಲಾವಿದರು  ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಅದ್ದೂರಿ ಸೆಟ್ ನಲ್ಲಿ `ತೋತಾಪುರಿ` ತಂಡ ಬೀಡು ಬಿಟ್ಟಿತ್ತು. ಅದು ಚಿತ್ರದ ಹಾಡೊಂದಕ್ಕೆ ಹಾಕಲಾಗಿದ್ದ ಬೃಹತ್ ಸೆಟ್. ಕಳೆದ ಮೂರು ದಿನಗಳಿಂದ ಸತತವಾಗಿ ಚಿತ್ರೀಕರಣ ನಡೆಸುತ್ತಿರುವ ಈ ಹಾಡಿಗೆ ಖ್ಯಾತ ನೃತ್ಯ ನಿರ್ದೇಶಕ ಮುರಳಿ ಕೊರಿಯೋಗ್ರಫಿಯಲ್ಲಿ ಮೂಡಿಬರುತ್ತಿದೆ. `ನೀರ್ ದೋಸೆ` ಯಶಸ್ಸಿನ ಬಳಿಕ ನಿರ್ದೇಶಕ ವಿಜಯಪ್ರಸಾದ್ ಹಾಗೂ ನಾಯಕ ಜಗ್ಗೇಶ್ ಅವರ ಕಾಂಬಿನೇಷನ್ `ತೋತಾಪುರಿ` ಮೂಲಕ ಮತ್ತೆ ಒಂದಾಗಿದೆ. 
 
ಹಿಂದಿ ಹಾಗೂ ಕನ್ನಡ ಮಿಶ್ರಿತ ಸಾಹಿತ್ಯವಿರುವ ಈ ಹಾಡಿಗೆ ವಿಜಯಪ್ರಸಾದ್ ಪೆನ್ನು ಹಿಡಿದರೆ, ಅನೂಪ್ ಸೀಳಿನ್ ರಾಗ ಸಂಯೋಜಿಸಿದ್ದಾರೆ. ಹಾಡಿನ ಚಿತ್ರೀಕರಣವನ್ನು ಹಿಂದು ಮುಸ್ಲಿಂ ಗೆ‍ಟಪ್  ನಲ್ಲಿಯೇ ಶೂಟಿಂಗ್ ಮಾಡುತ್ತಿರೋದು ವಿಶೇಷ. ಈ ಹಾಡಿನ ಶೂಟಿಂಗ್ ಪೂರ್ಣಗೊಂಡರೆ ಕುಂಬಳಕಾಯಿ ಒಡೆಯಲಿದೆ ಚಿತ್ರತಂಡ.
ಗೋವಿಂದಾಯ ನಮಃ, ಶ್ರಾವಣಿ ಸುಬ್ರಮಣ್ಯ, ಶಿವಲಿಂಗ, ರಾಜು ಕನ್ನಡ ಮೀಡಿಯಂ ಸೇರಿದಂತೆ ಮೊದಲಾದ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಕೆ.ಎ.ಸುರೇಶ್ `ತೋತಾಪುರಿ`ಗೆ ಬಂಡವಾಳ ಹಾಕಿದ್ದಾರೆ. ಈ ಚಿತ್ರ ಎರಡು ಭಾಗವಾಗಿ ತೆರೆಕಾಣಲಿದ್ದು, ಮೊದಲ ಭಾಗಕ್ಕೆ `ತೊಟ್ಟ್ ಕೀಳ್ಬೇಕಷ್ಟೇ...` ಎಂಬ ಅಡಿಬರಹವಿದ್ದರೆ, ಎರಡನೇ ಭಾಗಕ್ಕೆ `ತೊಟ್ಟ್ ಕಿತ್ತಾಯ್ತು...`ಎಂಬ ಟ್ಯಾಗ್ಲೈ ನ್ ಇದೆ. 

ತಾರಾಗಣದ ವಿಷಯದಲ್ಲೂ ಈ ಚಿತ್ರ ಸದ್ದು ಮಾಡಿದ್ದು, ಜಗ್ಗೇಶ್, ಅದಿತಿ ಪ್ರಭುದೇವ, ಡಾಲಿ ಧನಂಜಯ್, ದತ್ತಣ್ಣ, ಸುಮನ್ ರಂಗನಾಥ್, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಸುಮಾರು 80ಕ್ಕೂ ಅಧಿಕ ಕಲಾವಿದರು ಪ್ರಮುಖ ತಾರಾಬಳಗದಲ್ಲಿದ್ದಾರೆ. ಬೆಂಗಳೂರು, ಮೈಸೂರು, ಮಡಿಕೇರಿ, ಕೇರಳ ಸೇರಿದಂತೆ ಸಾಕಷ್ಟು ಸ್ಥಳಗಳಲ್ಲಿ ಚಿತ್ರೀಕರಣವಾಗಿರುವ ಈ ಚಿತ್ರ ದಕ್ಷಿಣ ಭಾರತ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎರಡೂ ಭಾಗದ ಸ್ಕ್ರಿಪ್ಟ್ ರೆಡಿ ಮಾಡಿಕೊಂಡು ಒಂದೇ ಬಾರಿ ಎರಡೂ ಭಾಗದ ಶೂಟಿಂಗ್ ನಡೆಸಿದ ಕೀರ್ತಿ `ತೋತಾಪುರಿ`ಗೆ ಸಲ್ಲುತ್ತದೆ. 150ಕ್ಕೂ ಹೆಚ್ಚಿನ ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಜಗ್ಗೇಶ್ ಅವರ ಸಿನಿ ಕೆರಿಯರ್ ನಲ್ಲೇ ಇದೇ ಮೊದಲ ಬಾರಿಗೆ ಎರಡು ಭಾಗದ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ತೆರೆಯ ಮೇಲೆ ಕಮಾಲ್ ಮಾಡಲು ಸದ್ಯದಲ್ಲಿಯೇ ಹಾಜರಾಗಲಿದೆ `ತೋತಾಪುರಿ` ತಂಡ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed