ಕಲಾವಿದರಂದ ಕಬಂಧ ಚಿತ್ರದ ಪೋಸ್ಟರ್ ಬಿಡುಗಡೆ
Posted date: 02 Tue, Apr 2024 06:27:11 PM
ಕುಂಜಾರ ಫಿಲಂಸ್ ಲಾಂಛನ ಹಾಗೂ ಹೊಬಾಕ್ಸ್ ಸ್ಟುಡಿಯೋಸ್ ಸಹಯೋಗದೊಂದಗೆ ನಿರ್ಮಾಣಗೊಂಡಿರುವ ಕಬಂಧ (ಕಬಂಧ ಬಾಹು ರಕ್ಷಸ, ನನಗೆ ಎಲ್ಲಾ ಬೇಕು ಎನ್ನುವ ಸ್ವಾರ್ಥ, ಬಿಡಿಸಲಾಗದ ಗಂಟು) ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿದ್ದು, ಕರ್ನಾಟಕ-ಕೇರಳ ಭಾಗದಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಪ್ರಕರಣ ರಾಜ್ಯಾದ್ಯಂತ ಭಯಹುಟ್ಟಿಸಿತ್ತು. ಇದರ ಜೊತೆಗೆ ಹಾರರ್ ರೂಪದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಕಬಂಧ ಚಿತ್ರದ ಪ್ರಮುಖ ಪಾತ್ರದಾರಿಗಳ ಪೋಸ್ಟರ್‌ಗಳ ಅನಾವರಣವನ್ನು ಚಿತ್ರ್ಯೋದ್ಯಮದ ಖ್ಯಾತ ಕಲಾವಿದರಾದ ರಂಗಾಯಣ ರಘು, ಬಿ.ಸುರೇಶ್, ನಾಗಭೂಷಣ್, ಸುಧಾರಾಣಿ, ಅಚ್ಯುತ್‌ಕುಮಾರ್ ಮುಂತಾದವರು ಆತ್ಮೀಯವಾಗಿ ನೆರವೇರಿಸಿದ್ದಾರೆ.  ಕಬಂಧ ಚಿತ್ರದ ಪ್ರತಿ ಪೋಸ್ಟರ್‌ನಲ್ಲೂ ಒಂದು ಬಗೆಯ ಕುತೂಹಲ ಮೂಡಿಸುವಲ್ಲಿ ಚಿತ್ರತಂಡ ಗಮನಹರಿಸಿದ್ದು ಯಶಸ್ವಿಯಾಗಿದೆ. ಸತ್ಯನಾಥ್ ಈ ಚಿತ್ರದ ನಿರ್ದೇಶಕರು. ವಿಷ್ಣುಪ್ರಸಾದ್ -ಛಾಯಾಗ್ರಹಣ. ಸಂಕಲನ-ಸತ್ಯಜಿತ್ ಸಿದ್ದಕಟ್ಟೆ,  ಹಿನ್ನೆಲೆ ಸಂಗೀತ-ಸಾಯಿತೇಜ್, ಚಿತ್ರವನ್ನು ದಾವಣೆಗೆರೆ, ತುಮಕೂರು ಮುಂತಾದೆಡೆಗಳಲ್ಲಿ ೪೦ ದಿನ ಚಿತ್ರೀಕರಣ ಪೂರೈಸಿದೆ. ಈ ಚಿತ್ರಕ್ಕೆ ಸಾಹಿತ್ಯ - ಕೆ.ಕಲ್ಯಾಣ್, ತಾರಾಗಣದಲ್ಲಿ ಪ್ರಸಾದ್ ವಸಿಷ್ಠ, ಪ್ರಿಯಾಂಕ ಮಲಾಲಿ, ಕಿಶೋರ್, ಅವಿನಾಶ್, ನಿರ್ದೇಶಕ ಯೋಗರಾಜಭಟ್, ವಂದನ, ವಚನ, ವಿಶಾಲ್, ನಾಗಾರ್ಜುನ ಸ್ವಾಮಿ, ಚಂದ್ರು, ಛಾಯಾಶ್ರೀ, ಪ್ರಶಾಂತ್ ಸಿದ್ಧಿ, ಮುಂತಾದವರು ಅಭಿನಯಿಸಿದ್ದಾರೆ.  
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed