ಗುರು ಶಿಷ್ಯರು ಸಿನಿಮಾದಲ್ಲಿ ಸುರೇಶ್ ಹೆಬ್ಳೀಕರ್ ನೂತನ ರೀತಿಯ ಪಾತ್ರ
Posted date: 02 Sat, Oct 2021 02:08:18 PM
ಮಹಾತ್ಮ ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ ನಮ್ಮ `ಗುರು ಶಿಷ್ಯರು` ಸಿನಿಮಾ ತಂಡವು ಹೊಸ ಸುದ್ದಿಯೊಂದನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಹರ್ಷಿಸುತ್ತದೆ. ಈ ಸಿನಿಮಾದಲ್ಲಿ ಹೆಸರಾಂತ ಹಿರಿಯ ನಟ, ನಿರ್ದೇಶಕ, ಪರಿಸರವಾದಿ ಸುರೇಶ್ ಹೆಬ್ಳೀಕರ್ ನೂತನ ರೀತಿಯ ಪಾತ್ರ ನಿರ್ವಹಿಸಿದ್ದು, ಅದು ಗಾಂಧಿ ತತ್ವ ಪರಿಪಾಲಿಸುವ ಪಾತ್ರ ಎನ್ನುವುದು ವಿಶೇಷ.  ಗಾಂಧಿ ಜಯಂತಿ ಸಂದರ್ಭದಲ್ಲಿ ಆ ಪಾತ್ರದ ಕುರಿತು ತಮ್ಮೊಂದಿಗೆ ಹಂಚಿಕೊಳ್ಳಲು ಖುಷಿ ಆಗುತ್ತಿದೆ.
ಮಹಾತ್ಮ ಗಾಂಧಿಯ ಬದುಕಿಗೂ ಮತ್ತು ಸುರೇಶ್ ಹೆಬ್ಳೀಕರ್ ಅವರು ನಿರ್ವಹಿಸುತ್ತಿರುವ ಪಾತ್ರಕ್ಕೂ ಸಾಕಷ್ಟು ಹೋಲಿಕೆಗಳಿವೆ. ಅಲ್ಲದೇ, ಗಾಂಧಿ ಬದುಕನ್ನೇ ಆದರ್ಶವಾಗಿ ತಗೆದುಕೊಂಡು ಬದುಕುವ ಪಾತ್ರ ಕೂಡ ಅದಾಗಿದೆ. ಗಾಂದಿಯ ಮೌಲ್ಯ, ಜೀವನ, ಸಾಧನೆಯನ್ನು ಈ ಪಾತ್ರದ ಮೂಲಕ ಸಮೀಕರಿಸಬಹುದಾಗಿದೆ.

ಈ ಪಾತ್ರದ ಕುರಿತು ಗುರು ಶಿಷ್ಯರು ಸಿನಿಮಾದ ಕ್ರಿಯೇಟಿವ್ ಹೆಡ್ ಮತ್ತು ಕೋ ಪ್ರೊಡ್ಯುಸರ್ ತರುಣ್ ಕಿಶೋರ್ ಹೇಳುವುದು ಹೀಗೆ   ನಮ್ಮ ಈ ಸಿನಿಮಾದಲ್ಲಿ ಸುರೇಶ್ ಹೆಬ್ಳೀಕರ್ ಅವರು ಗಾಂಧಿ ತತ್ವವನ್ನು ಪಾಲಿಸುವ ವ್ಯಕ್ತಿಯಾಗಿ ಮತ್ತು ಹಳ್ಳಿಯೊಂದರಲ್ಲಿ ಶಾಲೆ ನಡೆಸುವ ಅಪ್ಪಟ ಗಾಂಧಿವಾದಿಯಾಗಿ ನಟಿಸುತ್ತಿದ್ದಾರೆ. ಪಾತ್ರ ಮತ್ತು ಸಿನಿಮಾದ ಬಗೆಗಿರುವ ಅವರ ಪ್ರೀತಿ ಎಂದಿಗೂ ಮಾದರಿ. ಪರಿಸರ ಹೋರಾಟಗಾರರಾಗಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾಗಿ ನಮ್ಮೊಂದಿಗೆ ಅವರು ಬೆರೆತ ರೀತಿ ಹೆಮ್ಮೆ ಮೂಡಿಸುವಂಥದ್ದು. ಸಾಮಾನ್ಯವಾಗಿ ವ್ಯಾಪಾರಿ ಗುಣದ ಚಿತ್ರಗಳಲ್ಲಿ ಕಾಣಿಸಿಕೊಳ್ಳದ ಇವರು, ಇದೇ ಮೊದಲ ಬಾರಿಗೆ ನಮ್ಮ ಸಿನಿಮಾದಲ್ಲಿ ನಟಿಸಿದ್ದು ಖುಷಿ ತಂದಿದೆ ಎಂದಿದ್ದಾರೆ.

ಜಂಟಲ್ ಮನ್ ಖ್ಯಾತಿಯ ನಿರ್ದೇಶಕ ಜಡೇಶ್ ಕೆ ಹಂಪಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸುಧಾಕರ್ ಶೆಟ್ಟಿ ಅವರ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ನಟ ಶರಣ್ ಅವರ ಲಡ್ಡು ಸಿನಿಮಾಸ್ ಮತ್ತು ತರುಣ್ ಕಿಶೋರ್ ಅವರ ಕ್ರಿಯೇಟಿವಿಸ್ ಬ್ಯಾನರ್ ನಲ್ಲಿ ಗುರು ಶಿಷ್ಯರು ಚಿತ್ರ ತಯಾರಾಗಿದೆ.
ಈಗಾಗಲೇ ಶೇಕಡಾ ಎಂಬತ್ತರಷ್ಟು ಸಿನಿಮಾದ ಶೂಟಿಂಗ್ ಮುಗಿದಿದ್ದು, ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಬೆಂಗಳೂರಿನಲ್ಲಿ ಸಿದ್ದತೆ ನಡೆದಿದೆ. ಎಂದಿನಂತೆ ಮಾಧ್ಯಮದ ಮಿತ್ರರ ಸಹಕಾರವನ್ನು ಕೋರುತ್ತೇವೆ.
ಈ ಸಿನಿಮಾದಲ್ಲಿ ಶರಣ್ ನಾಯಕನಾಗಿ ನಟಿಸಿದ್ದು, ಇಲ್ಲಿ ಅವರು ಪಿಟಿ ಮಾಸ್ಟರ್ ಪಾತ್ರ ಮಾಡಿದ್ದಾರೆ. ನಿಶ್ವಿಕಾ ನಾಯಕಿ. ಹಿರಿಯ ನಟ ದತ್ತಣ್ಣ ಸೇರಿದಂತೆ ಹೆಸರಾಂತ ಕಲಾವಿದರು ನಟಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed