ಜೂನ್ 12ರಂದು ಬರಲಿದೆ ``ದಿಲ್ ಪಸಂದ್`` ಚಿತ್ರದ ಫಸ್ಟ್ ಗ್ಲಿಂಪ್ಸ್
Posted date: 09 Thu, Jun 2022 � 09:41:55 PM
ತಮ್ಮ ಅದ್ಭುತ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದಿರುವ ಡಾರ್ಲಿಂಗ್ ಕೃಷ್ಣ ಅವರಿಗೆ ಜೂನ್ 12ರಂದು ಹುಟ್ಟುಹಬ್ಬದ ಸಂಭ್ರಮ. 
 
ಪ್ರಸ್ತುತ ಕೃಷ್ಣ ಅವರು ನಾಯಕರಾಗಿ ನಟಿಸುತ್ತಿರುವ "ದಿಲ್ ಪಸಂದ್" ಚಿತ್ರದ ಫಸ್ಟ್ ಗ್ಲಿಂಪ್ಸ್ ಜೂನ್ 12ರ ಬೆ.11.14ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಲಿದೆ. ಈ ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಮಾಡುವ ಮೂಲಕ "ದಿಲ್ ಪಸಂದ್" ಚಿತ್ರತಂಡ ಕೃಷ್ಣ ಅವರಿಗೆ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಲಿದೆ.

ವಿಭಿನ್ನ ಕಥಾಹಂದರದ "ದಿಲ್ ಪಸಂದ್" ಚಿತ್ರದ ಮಾತಿನ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದೆ. ಹಾಡುಗಳ ಚಿತ್ರೀಕರಣ ಬಾಕಿಯಿದೆ.

ರಶ್ಮಿ ಫಿಲಂಸ್ ಮೂಲಕ ಸುಮಂತ್ ಕ್ರಾಂತಿ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಶಿವ ತೇಜಸ್ ನಿರ್ದೇಶಿಸುತ್ತಿದ್ದಾರೆ.  ಕೆ.ಆರ್ .ರಂಗಸ್ವಾಮಿ  ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದ ಸುಮಧುರ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ "ದಿಲ್ ಪಸಂದ್"ಗಿದೆ.

ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಿಸುತ್ತಿದ್ದಾರೆ. ಮೇಘ ಶೆಟ್ಟಿ (ಜೊತೆಜೊತೆಯಲಿ ಖ್ಯಾತಿ), ಸಾಧುಕೋಕಿಲ, ರಂಗಾಯಣ ರಘು, ತಬಲ ನಾಣಿ, ಗಿರಿ, ಹರೀಶ್ ದೇವಿತಂದ್ರೆ, ಚಿತ್ಕಲ ಬಿರಾದಾರ್, ಅರುಣಾ ಬಾಲರಾಜ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed