ಡಿಸೆಂಬರ್ 12 ರಿಂದ 15 ರವರೆಗೂ ಬಹು ನಿರೀಕ್ಷಿತ BPL ಕ್ರಿಕೆಟ್ ಟೂರ್ನಿ
Posted date: 18 Mon, Nov 2024 07:32:45 AM
ಮಹೇಶ್ ವಿ ಸಾರಥ್ಯದ ಈ ಕ್ರಿಕೆಟ್ ಟೂರ್ನಿಯಲ್ಲಿ ಚಂದನವನದ ತಾರರಯರೊಂದಿಗೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗಿ .
 
ನಟನಾಗಿ, ಕ್ರಿಕೆಟ್ ಆಟಗಾರನಾಗಿ  ಗುರುತಿಸಿಕೊಂಡಿರುವ ಮಹೇಶ್ ವಿ ಸಾರಥ್ಯದಲ್ಲಿ ಡಿಸೆಂಬರ್ 12 ರಿಂದ 15 ರವರೆಗೂ ನಾಲ್ಕು ದಿನಗಳ ಕಾಲ ನಡೆಯುವ ಈ ಕ್ರಿಕೆಟ್ ಟೂರ್ನಿಯಲ್ಲಿ ಸ್ಯಾಂಡಲ್ ವುಡ್ ನ ತಾರೆಯರು, ಸರ್ಕಾರಿ ಅಧಿಕಾರಿಗಳು, ವಕೀಲರು, ಉದ್ಯಮಿಗಳು ಹೀಗೆ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪತ್ರಿಕಾಗೋಷ್ಠಿಯಲ್ಲಿ ನೀಡಿದರು.
 
ನಾನು ಹಲವು ವರ್ಷಗಳಿಂದ ರಾಜ್ ಕಪ್ , ಕೆಸಿಸಿ ಕಪ್ ಸೇರಿದಂತೆ ಅನೇಕ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಡಿದ್ದೇನೆ. ಕ್ರಿಕೆಟ್ ನನ್ನ ನೆಚ್ಚಿನ ಕ್ರೀಡೆ. ಹಾಗಾಗಿ ಈ ಬಾರಿ ನಾನೇ ಹಲವು ಸ್ನೇಹಿತರ ಸಹಕಾರದಿಂದ BPL(ಬೆಂಗಳೂರು ಪ್ರೀಮಿಯರ್ ಲೀಗ್) ಕ್ರಿಕೆಟ್ ಪಂದ್ಯಾವಳಿಯನ್ನು ಆರಂಭಿಸುತ್ತಿದ್ದೇನೆ. ಡಿಸೆಂಬರ್‌ 12 ರಿಂದ ನಾಲ್ಕು ದಿನ ರಾಜನಕುಂಟೆಯಲ್ಲಿರುವ ಸುಸ್ಸಜಿತ ಕ್ರಿಕೆಟ್ ಮೈದಾನದಲ್ಲಿ ಈ ಟೂರ್ನಿ ನಡೆಯಲಿದೆ. ಸ್ಯಾಂಡಲ್ ವುಡ್ ತಾರೆಯರು, ಸರ್ಕಾರಿ ಅಧಿಕಾರಿಗಳು, ವಕೀಲರು, ಉದ್ಯಮಿಗಳು ಹೀಗೆ ವಿವಿಧ ಕ್ಷೇತ್ರಗಳ ಗಣ್ಯರು ಆಡಲಿದ್ದಾರೆ. ಈ ಟಿ12 ಕ್ರಿಕೆಟ್ ಪಂದ್ಯದಲ್ಲಿ ಐಸಿಸಿ  ನಿಯಮಗಳು ಏನಿದೆಯೊ ಅದೇ ಇರುತ್ತದೆ. ಪವರ್ ಪ್ಲೇನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದೆ. ಎಲ್ಲಾ ಪಂದ್ಯಗಳು ಆನಂದ್ ಆಡಿಯೋ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರವಾಗಲಿದೆ. ಆರು ತಂಡಗಳಿದ್ದು, ಆರು‌ ಜನ ತಂಡದ ಮಾಲೀಕರು, ನಾಯಕರು ಹಾಗೂ ಉಪ ನಾಯಕರನ್ನು ಇಂದು ಪರಿಚಯಿಸುತ್ತಿದ್ದೇವೆ. ನಮ್ಮ ಈ ಪ್ರಯತ್ನ ನಿಮ್ಮ ಬೆಂಬಲವಿರಲಿ ಎಂದು ಮಹೇಶ್ ತಿಳಿಸಿದರು. 
 
ನಟ ರಾಹುಲ್ ಹಾಗೂ ತಂಡಗಳ ಮಾಲೀಕರು, ನಾಯಕರು ಹಾಗೂ ಉಪನಾಯಕರು "BPL" ಕ್ರಿಕೆಟ್ ಟೂರ್ನಿ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಆರ ತಂಡಗಳ ಪರಿಚಯ ಜಿ ಎಲ್ ಆರ್ ವಾರಿಯರ್ಸ್ ಮಾಲೀಕರು ರಾಜೇಶ್, ನಾಯಕ ಲೂಸ್ ಮಾದ ಯೋಗಿ, ಉಪ ನಾಯಕ ಶೋಭನ್ ಬಾಬು. 

ಇಂಡಿಯನ್ ಅಡ್ವೊಕೆಟ್ಸ್ ಮಾಲೀಕರು ಅರವಿಂದ್ ವೆಂಕಟೇಶ್ ರೆಡ್ಡಿ. 

ನಕ್ಷತ್ರ ವಾರಿಯರ್ಸ್ ಮಾಲೀಕರು ನಕ್ಷತ್ರ ಮಂಜು, ನಾಯಕ ಡಾರ್ಲಿಂಗ್ ಕೃಷ್ಣ, ಉಪ ನಾಯಕ ಗಣೇಶ್.

ಕೆಜಿಎಸ್ ಟಿ ಕಿಂಗ್ಸ್ ಮಾಲೀಕರು ಥೀರನ್ ಮುಖೇಶ್. ನಾಯಕರು ಸತೀಶ್.

ಭಜರಂಗಿ ಬಾಯ್ಸ್ ತಂಡದ ಮಾಲೀಕರು ಸ್ವಸ್ತಿಕ್ ಆರ್ಯ, ನಾಯಕ ಸಂತೋಷ್ ಬಿಲ್ಲವ ಹಾಗೂ ಉಪ ನಾಯಕ ವ್ಯಾಸರಾಜ್.

ಕೆಎಸ್ ಪಿ SAMARYA ತಂಡದ ಮಾಲೀಕರು ಅಭಿ ರಾಣವ್. ನಾಯಕ ಸೋಮಶೇಖರ್ ಹಾಗೂ ಉಪನಾಯಕ ಗಣೇಶ್.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed