ಪಿ.ಸಿ.ಶೇಖರ್ ನಿರ್ದೇಶನದ ಮಾನ್ವಿತ ಮತ್ತು ನಕುಲ್ ಅಭಿನಯದ ``BAD`` ಚಿತ್ರದ ಸುಂದರ ಯುಗಳಗೀತೆ ಜನಮನಸೂರೆಗೊಳ್ಳುತ್ತಿದೆ
Posted date: 28 Thu, Mar 2024 09:38:46 PM
ಎಸ್ ಆರ್ ವೆಂಕಟೇಶ್ ಗೌಡ ನಿರ್ಮಿಸಿರುವ ಹಾಗೂ ನಕುಲ್ ಗೌಡ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ "BAD" ಚಿತ್ರಕ್ಕಾಗಿ ಖ್ಯಾತ ಸಾಹಿತಿ ಕವಿರಾಜ್ "ಮಾತಿಗೂ ಮಾತಿಗೂ" ಎಂಬ ಸುಂದರ ಯುಗಳಗೀತೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು "ಸರಿಗಮಪ" ಖ್ಯಾತಿಯ ಪೃಥ್ವಿ ಭಟ್ ಹಾಗೂ ಸುನೀಲ್ ಗುಜಗೊಂಡ ಸುಶ್ರಾವ್ಯವಾಗಿ ಹಾಡಿದ್ದಾರೆ. ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಹಾಡು ಜನಮನಸೂರೆಗೊಳ್ಳುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಈಗಾಗಲೇ ಟೀಸರ್ ಹಾಗೂ ಟ್ರೇಲರ್ ಮೂಲಕ ಸದ್ದು ಮಾಡುತ್ತಿರುವ "BAD" ಚಿತ್ರ, ಹಾಡುಗಳ ಮೂಲಕವೂ ಜನಪ್ರಿಯವಾಗುತ್ತಿದೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. 

ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ "BAD" ಚಿತ್ರಕ್ಕೆ ನಿರ್ದೇಶಕ ಪಿ.ಸಿ.ಶೇಖರ್ ಅವರೆ ಸಂಕಲನ ಕಾರ್ಯ ಮಾಡಿದ್ದಾರೆ.  ಜಿ.ರಾಜಶೇಖರ್ ಕಲಾ ನಿರ್ದೇಶನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣವಿರುವ "BAD" ಚಿತ್ರಕ್ಕೆ ಸಚಿನ್ ಜಡೇಶ್ವರ ಎಸ್ ಬಿ  ಸಂಭಾಷಣೆ ಬರೆದಿದ್ದಾರೆ. 

 "ಪ್ರೀತಿಯ ರಾಯಭಾರಿ" ಚಿತ್ರದ ಮೂಲಕ ಜನರ ಮನಗೆದ್ದಿರುವ  ನಕುಲ್ ಗೌಡ  "BAD" ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದು, ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

ಕಾಮ, ಕ್ರೋಧ ಮೊದಲಾದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳಲ್ಲಿ ಆರು ಜನ ಕಲಾವಿದರು ಅಭಿನಯಿಸಿರುವುದು ಈ ಚಿತ್ರದ ವಿಶೇಷ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed