ಚಿತ್ರ: ಹಗ್ಗ
ನಿರ್ದೇಶನ : ಅವಿನಾಶ್
ನಿರ್ಮಾಣ: ರಾಜ್ ಭಾರದ್ವಜ್ , ದಯಾಳ್ ಪದ್ಮನಾಭನ್
ತಾರಾಗಣ: ವಿಷ್ಣು,ಹರ್ಷಿಕಾ ಪೂಣಚ್ಚ, ಅನುಪ್ರಭಾಕರ್, ತಬಲ ನಾಣಿ, ಭವಾನಿ ಪ್ರಕಾಶ್,ಅವಿನಾಶ್, ಸುಧಾ ಬೆಳವಾಡಿ ಮತ್ತಿತರರು
ರೇಟಿಂಗ್ : * 3/ 5
ಕನ್ನಡದಲ್ಲಿ ಇತ್ತೀಚೆಗೆ ವಿಭಿನ್ನ ಮತ್ತು ಪ್ರಯೋಗಾತ್ಮಕ ಚಿತ್ರಗಳು ತೆರೆಗೆ ಬರುತ್ತಿವೆ,ಅವುಗಳ ಸಾಲಿಗೆ ಮತ್ತೊಂದು ಸೇರ್ಪಡೆ “ಹಗ್ಗ”. ಸೇಡಿನ ಬೆಂಕಿನಲ್ಲಿ ಬೆಂದ ಸಸ್ಪೆನ್ಸ್, ಥ್ರಿಲರ್ ಚಿತ್ರ. ಕೊನೆತನಕ ನೋಡಿಸಿಕೊಂಡು ಹೋಗುವ ಶಕ್ತಿ ಚಿತ್ರಕ್ಕಿದೆ.
ಪ್ರೀತಿ, ಪ್ರೇಮ, ಹೊಡೆದಾಟ ಬಡಿದಾಟ ಸುತ್ತ ಮೊದಲರ್ದ ಕಥೆ ಸಾಗಿದರೆ ದ್ವಿತೀಯಾರ್ಧದದಲ್ಲಿ ಚಿತ್ರದ ನಿಜವಾದ ಕತೆ ಬಿಚ್ಚಿಕೊಳ್ಳುತ್ತದೆ. ಅದುವೇ ಚಿತ್ರದ ದಿಕ್ಕು ಬದಲಾಯಿಸುತ್ತೆ. ಕೆಲವೊಂದು ಸನ್ನಿವೇಶಗಳಲ್ಲಿ ಮೈಜುಮ್ ಎನಿಸುವ ಮಟ್ಟಿಗೆ ಚಿತ್ರ ಮೂಡಿಬಂದಿದೆ.
ನಾಗೇಕೊಪ್ಪಲು, ಕಾಡಿನ ಮದ್ಯ ಇರುವ ಪುಟ್ಟ ಗ್ರಾಮ. ಮಗು ಹುಟ್ಟಿದ ಬಳಿಕ ತಾಯಿ ನಿಗೂಡವಾಗಿ ನೇಣು ಹಾಕಿಕೊಂಡು ಸಾವನ್ನಪ್ಪುತ್ತಾರೆ. ಇಡೀ ಊರಿಗೆ ಇದೊಂದು ಶಾಪ. ಹೀಗಾಗಿ ಹೆಂಗಸರನ್ನು ಮತ್ತೊಂದು ಊರಿಗೆ ಕಳುಹಿಸಿ ಗಂಡಸರೇ ಇರುವ ಊರದು.
ಆ ಊರಿನ ಗೌಡರ ಮಗ ರಾಮ್-ವಿಷ್ಣುಗೆ ಅದೇ ಊರಿನ ಮಲ್ಲಿ - ಪ್ರಿಯಾ ಹೆಗ್ಡೆ ಮೇಲೆ ಅತಿಯಾದ ಪ್ರೀತಿ, ಮೊದಲೇ ಊರಿನ ಇತಿಹಾಸ ಗೊತ್ತಿದ್ದ ಆಕೆಯ ತಾಯಿ ರಾಮ್ಗೆ ಮಗಳನ್ನು ಮದುವೆ ಮಾಡಲು ಹಿಂಜರಿದು ರಾತ್ರೋರಾತ್ರಿ ಊರುಬಿಟ್ಟು ಹೋಗ್ತಾಳೆ, ಪ್ರೀತಿಯ ಕನವರಿಕೆಯಲ್ಲಿ ರಾಮ್ ಊರು ಬಿಟ್ಟು ನಗರ ಸೇರ್ತಾನೆ.
ಸೋದರ ಮಾವ ಪ್ರಾಂಕ್ ಪ್ರಕಾಶ್ ಸಹಕಾರದೊಂದಿಗೆ ಪತ್ರಕರ್ತೆ ರಿತಿಕಾ- ಪರಿಚಯವಾಗುತ್ತದೆ, ಆಕೆಯ ನೆರವಿನೊಂದಿಗೆ ಊರಿನಲ್ಲಿ ವಿಚಿತ್ರ ಕಂಡುಹಿಡಿಯಲು ಮುಂದಾಗುತ್ತಾನೆ. ಈ ಸಮಯದಲ್ಲಿ ಫ್ಲಾಶ್ ಬ್ಯಾಕ್ ಅದರ ಹಿಂದಿನ ಭಯಾನಕ ಕಥೆ ಬಿಚ್ಚಿಕೊಳ್ಳುತ್ತದೆ. ಅದು ಏನು, ಹಗ್ಗ ಎಂದು ಚಿತ್ರಕ್ಕೆ ಯಾಕೆ ಇಟ್ಟಿದ್ದಾರೆ ಎನ್ನುವ ಕುತೂಹಲಗಳಿಗೆ ಉತ್ತರ ಸಿಗಲಿದೆ.
ಊರಿಗೆ ಅಂಟಿಕೊಂಡಿದ್ದ ಶಾಪವಾದರೂ ಏನು, ಅದರಿಂದ ಊರಿನ ಜನ ಮುಕ್ತಿ ಪಡೆಯುತ್ತಾರೆ.ಇಲ್ಲ ಮುಂದೇನಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿಯೇ ನೋಡಿದರೆ ಚೆನ್ನ.
ನಿರ್ದೇಶಕ ಅವಿನಾಶ್ ಚಿತ್ರವನ್ನು ಅದರಲ್ಲಿಯೂ ದ್ವಿತೀಯಾರ್ದದಲ್ಲಿ ಬೆರಳ ತುದಿಯಲ್ಲಿ ಕಳಿತು ಸಿನಿಮಾ ನೋಡುತವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ನಟಿ ಅನುಪ್ರಭಾಕರ್ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಇಡೀ ಸಿನಿಮಾಕ್ಕೆ ಮತ್ತಷ್ಟು ವೇಗ ನೀಡಿದ್ದಾರೆ. ಸಿಕ್ಕ ಪಾತ್ರವನ್ನು ಅಕ್ಷರಷಃ ಜೀವಿಸಿ ಬಿಟ್ಟಿದ್ದಾರೆ. ತಾವೊಬ್ಬ ಪರಿಪೂರ್ಣ ಕಲಾವಿದೆ ಎನ್ನುವದನ್ನು ನಿರೂಪಿಸಿದ್ದಾರೆ. ಹಗ್ಗದ ಜೀವಾಳ ಅವರೇ.
ನಾಯಕ ವಿಷ್ಣು, ನಾಯಕಿ ಹರ್ಷಿಕಾ ಪೂಣಚ್ಚ ತಮ್ಮ ಪಾತ್ರಗಳಿಗೆ ಜೀವತುಂಬಿದ್ದಾರೆ.ಜೊತೆಗೆ ಭವಾನಿ ಪ್ರಕಾಶ್, ತಬಲ ನಾಣಿ ಪಾತ್ರಗಳು ಗಮನ ಸೆಳೆಯುತ್ತವೆ. ಅವಿನಾಶ್, ಸುಧಾ ಬೆಳವಾಡಿ, ಸಂಜು ಬಸಯ್ಯ, ಪ್ರಿಯಾ ಹೆಗ್ಡೆ, ಸದಾನಂದ ಕಾಳೆ ಸೇರಿದಂತೆ ಹಲವು ಮಂದಿ ಚಿತ್ರದ ತಾರಾಬಳಗದಲ್ಲಿದ್ದಾರೆ.
ನೂರಕ್ಕೆ ಶೇಕಡಾ 90 ರಷ್ಟು ಮಹಿಳೆಯರು ಕೊಟ್ಟು ಕೆರ ಹಿಡಿದಿದ್ದಾರೆ ಎಂದು ತಬಲ ನಾಣಿಯ ಹೇಳುವುದು ಸರಿಯಲ್ಲ, ಆ ರೀತಿ ನೀಡಿರುವುದು ಹೆಣ್ಣುಮಕ್ಕಳಿಗೆ ಮಾಡಿದ ಅವಮಾನದಂತಿದೆ.