ಬಂದೇ ಬಿಡ್ತು ``ಬಡ್ಡೀಸ್`` ಟೀಸರ್. ಕಿರಣ್ ರಾಜ್ ನಟನೆಗೆ ಸಿನಿರಸಿಕರು ಫಿದಾ
Posted date: 27 Wed, Apr 2022 09:59:52 PM
ಅದ್ಭುತ ನಟನೆ, ಸಾಮಾಜಿಕ ಕಳಕಳಿಯಿಂದ ಖ್ಯಾತರಾಗಿರುವ ಸುರದ್ರೂಪಿ ನಟ ಕಿರಣ್ ರಾಜ್ ಅಭಿನಯದ "ಬಡ್ಡೀಸ್" ಚಿತ್ರದ ಟೀಸರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಕಿರಣ್ ರಾಜ್ ನಟನೆ ಟೀಸರ್ ನಲ್ಲಿ ಕಂಡು ಮನಸೊತ್ತಿರುವ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಚಿತ್ರದ ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

 ಭಾರತಿ ಶೆಟ್ಟಿ ಅವರು ಭಾರತಿ ಶೆಟ್ಟಿ ಫಿಲಂಸ್ ಲಾಂಛನದಲ್ಲಿ ತಮ್ಮ ಮೊದಲ ಚಿತ್ರವಾಗಿ "ಬಡ್ಡೀಸ್" ನಿರ್ಮಾಣ ಮಾಡಿದ್ದಾರೆ.

ಗುರುತೇಜ್ ಶೆಟ್ಟಿ  ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಹಾಡುಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ.

ಮೂರು ಹಾಡುಗಳಿರುವ ಈ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನೀಡುತ್ತಿದ್ದಾರೆ. 

ಯು.ಎಸ್.ಎ ನಿವಾಸಿ‌ ನಿಭಾ ಶೆಟ್ಟಿ‌  ಈ ಚಿತ್ರದ ಛಾಯಾಗ್ರಹಕರು.  ಕೆ.ಎಂ.ಪ್ರಕಾಶ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. 

ಕಿರಣ್ ರಾಜ್ ಗೆ ನಾಯಕಿಯಾಗಿ ಸಿರಿ ಪ್ರಹ್ಲಾದ್ ಅಭಿನಯಿಸಿದ್ದಾರೆ. ಗೋಪಾಲ್ ದೇಶಪಾಂಡೆ, ಅರವಿಂದ್ ಬೋಳಾರ್, ವಿನಯ್ ರೋಹನ್ ಸಾಯಿ, ಗಿರೀಶ್ ಹೆಗಡೆ, ಗಿರೀಶ್ ಜತ್ತಿ, ಲಂಕೇಶ್, ಹೇಮಂತ್, ವಿವೇಕ್ ಮುಂತಾದವರು "ಬಡ್ಡೀಸ್" ನಲ್ಲಿ ನಟಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed