ಬೆಲೆಕಟ್ಟಲು ಸಾಧ್ಯವಿಲ್ಲ ಸಾಮರ್ಥ್ಯ
Posted date: 27 Mon, Sep 2021 02:44:14 PM
ಕಾರ್ತಿಕ್ ಮೂವೀಸ್ ಲಾಂಛನದಲ್ಲಿ ರಾಜರಬಂಡಿ ಕಾರ್ತಿಕ್ ನಿರ್ಮಿಸುತ್ತಿರುವ ಸಾಮರ್ಥ್ಯ ಚಿತ್ರಕ್ಕೆ ಹೆಚ್.ಎಂ.ಟಿ. ಬಡಾವಣೆಯಲ್ಲಿ ನಿರ್ಮಿಸಿರುವ ಮೂರು ಸೆಟ್‌ಗಳಲ್ಲಿ  ಏ ಹುಡುಗಿ ನಿನ್ನ ಕಣ್ಣು ಚೆಂದ, ಬೆಲೆ ಕಟ್ಟಲು ಸಾಧ್ಯವಿಲ್ಲ ಅಂದ ಚೆಂದ, ಬಂಗಾರದ ಜಿಂಕೆ ನಾನು, ಸುಮ್ ಸುಮ್ನೆ ಬಲೆಗೆ ಬೀಳಲೇನು ಎಂಬ ಗೀತೆಗೆ ನಾಯಕ ನಾಯಕಿ ಅಭಿನಯದಲ್ಲಿ ರಾಮು ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಣವಾಯಿತು.  ಈ ಹಾಡನ್ನು ವಿಶ್ವಾ.ಜಿ ರಚಿಸಿದ್ದಾರೆ.  ಅಲ್ಲದೆ ೪ ಹೊಡೆದಾಟದ ದೃಶ್ಯಾವಳಿಗಳು ಸಹ ಚಿತ್ರೀಕರಣವಾದುವು.  4 ಜನ ಸಾಹಸ ನಿರ್ದೇಶಕರುಗಳಾದ ಡ್ಯಾನಿ, ಕೌರವ ವೆಂಕಟೇಶ್, ವಿನೋದ್, ಅರ್ಜುನ್ ಅವರ ಸಾಹಸ ಸಂಯೋಜನೆಯಲ್ಲಿ ರೋಡ್ ಫೈಟ್ ಒಂದು ರಾಮೋಹಳ್ಳಿ ಅಪಾರ್ಟ್‌ಮೆಂಟ್ ಬಳಿ ಆರ್.ಆರ್. ಕಾಲೇಜು, ಚಿಕ್ಕಬಾಣಾವರ, ಹಾಗೂ ನೆಲಮಂಗಲ ಗೆಸ್ಟ್‌ಹೌಸ್‌ನ ಬಳಿ ನಡೆಯಿತು. ಈ ಸಾಹಸ ದೃಶ್ಯದಲ್ಲಿ ಬಾಲಾಜಿ ಶರ್ಮ, ದಶರತ್ ಅಭಿ, ಪೆಟ್ರೋಲ್ ಪ್ರಸನ್ನ ಗ್ಯಾಂಗ್ ನವರೊಂದಿಗೆ ಹೊಡೆದಾಟದ ದೃಶ್ಯಗಳು ಚಿತ್ರೀಕರಣವಾದುವು. ಈ ಚಿತ್ರದ ನಿರ್ದೇಶನ ಹೆಚ್.ವಾಸು. ಇದು ಇವರ ೨೪ನೇ ಚಿತ್ರ.  ಚಿತ್ರಕ್ಕೆ ಛಾಯಾಗ್ರಹಣ-ಎ.ವಿ. ಕೃಷ್ಣಕುಮಾರ್ (ಕೆ.ಕೆ), ಸಂಗೀತ-ಅರುಣ್ ಆಂಡ್ರ್ಯು, ಸಾಹಿತ್ಯ-ಕೆ. ಕಲ್ಯಾಣ್, ವಿ ನಾಗೇಂದ್ರ ಪ್ರಸಾದ್, ವಿಶ್ವಾ.ಜಿ, ಸಾಹಸ-ಅರ್ಜುನ್, ಡ್ಯಾನಿ, ಕೌರವ ವೆಂಕಟೇಶ್, ವಿನೋದ್, ಸಂಕಲನ-ವೆಂಕಟೇಶ್-ಯುಡಿವಿ, ನೃತ್ಯ - ರಾಮು, ಸಹನಿರ್ದೇಶನ-ಎನ್ ಬಸವರಾಜು ಚೋರನಹಳ್ಳಿ, ನಿರ್ವಹಣೆ- ರಂಗಸ್ವಾಮಿ,  ತಾರಾಗಣದಲ್ಲಿ - ಬಾಲಾಜಿ ಶರ್ಮ, ಗಗನ ಮಧು, ಶೋಭರಾಜ್, ಅವಿನಾಶ್, ದಶರತ್ ಅಭಿ, ರವೀಂದ್ರನಾಥ್, ಪೆಟ್ರೋಲ್ ಪ್ರಸನ್ನ, ಕಾಮಿಡಿ ಕಿಲಾಡಿಗಳು ಸಂತು, ಸ್ವಾತಿ, ಶಶಿಕುಮಾರ್, ಮುಂತಾದವರಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಚಿಕ್ಕಮಗಳೂರು, ಸಕಲೇಶಪುರ ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಲವ್ & ಕ್ರೈಂ ಕಥಾ ವಸ್ತುವುಳ್ಳ ಈ ಕಥೆಯನ್ನು ಈಗಿನ ಕಾಲದ ಸಮಾಜಕ್ಕೆ ಹೊಂದಿಕೊಳ್ಳುವಂತಹ ಹಲವು ತಿರುವುಗಳು ಈ ಲವ್ ಸ್ಟೋರಿಯಲ್ಲಿದೆ.  
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed