ಮತ್ತೊಮೆ ತೆರೆಯ ಮೇಲೆ``ರಾನಿ``ಚಿತ್ರದ ನಾಯಕ ಹಾಗೂ ನಿರ್ದೇಶಕರ ಜುಗಲ್ ಬಂದಿ ಸೂಪರ್ ಹೀರೋ ಆಗಿ ಬರಲಿದ್ದಾರೆ ಕಿರಣ್ ರಾಜ್ .
Posted date: 17 Sun, Nov 2024 08:26:36 AM
ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಾಯಕ ಕಿರಣ್ ರಾಜ್ ಸದ್ದಿಲ್ಲದೆ ಮತ್ತೊಂದು ಬಿಗ್ ಬಜೆಟ್ ಚಿತ್ರಕ್ಕಾಗಿ ಸಿದ್ದತೆ ನೆಡೆಸುತ್ತಿದ್ದಾರೆ. ”ರಾನಿ” ಚಿತ್ರದ ಮೂಲಕ ಕ್ಲಾಸ್ ಅಂಡ್ ಮಾಸ್ ಗೂ ಸೈ ಎನಿಸಿಕೊಂಡ ಕಿರಣ್ ರಾಜ್, ತಾನೆಂತ ಪ್ರತಿಭಾನ್ವಿತ ನಟ ಎನ್ನುದನ್ನು ಸಾಬೀತು ಪಡಿಸಿದ್ದಾರೆ. ಸದಾ ಪಾತ್ರ ಮತ್ತು ಕಥೆಯ ಬಗ್ಗೆ ಯೋಚಿಸುವ ಕಿರಣ್ ರಾಜ್, ಸೂಪರ್ ಹೀರೋ ಆಗಿ ತೆರೆಯ ಮೇಲೆ ಮಿಂಚಲಿದ್ದಾರೆ. ಅದಕ್ಕಾಗಿ ತೆರೆಮರೆಯಲ್ಲಿ ತಯಾರಿ ಜೋರಾಗಿ ನೆಡೆಸುತ್ತಿದ್ದಾರೆ. ಈ ಪಾತ್ರದ ವಿಶೇಷ ತರಬೇತಿಗಾಗಿ ಕಿರಣ್ ರಾಜ್ ವಿದೇಶಕ್ಕೆ ತೆರಳಲಿದ್ದಾರೆ. ಇನ್ನು ಈ ನೂತನ ಚಿತ್ರಕ್ಕೆ “ರಾನಿ” ನಿರ್ದೇಶಕ ಗುರುತೇಜ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸನಾತನ ಧರ್ಮದ ಹಿನ್ನೆಲೆಯ ಕಥಾಹಂದರ ಈ ಚಿತ್ರದಲ್ಲಿರುತ್ತದೆ. ಶೀರ್ಷಿಕೆ, ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಸದ್ಯದಲ್ಲೇ ಘೋಷಣೆಯಾಗಲಿದೆ.