ರಾಜವರ್ಧನ್ ನಟನೆಯ ಗಜರಾಮ ಬಿಡುಗಡೆಗೆ ರೆಡಿ..ಫೆ.7ಕ್ಕೆ ಮಾಸ್ ಆಕ್ಷನ್ ಚಿತ್ರ ತೆರೆಗೆ ಎಂಟ್ರಿ
Posted date: 06 Mon, Jan 2025 02:39:50 PM
ಸ್ಯಾಂಡಲ್‌ವುಡ್‌ ಕಂಡ ಹಿರಿಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಈಗಾಗಲೇ `ಬಿಚ್ಚುಗತ್ತಿ` ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ತಮ್ಮ ಸಾಮರ್ಥ್ಯ ಎಂಥದ್ದು ಎಂಬುದನ್ನು ತೋರಿಸಿದ್ದಾರೆ. `ಹಿರಣ್ಯ` ಅನ್ನೋ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದ ಇದೇ ರಾಜವರ್ಧನ್‌ ಇದೀಗ, ಗಜರಾಮ ಸಿನಿಮಾವನ್ನು ಚಿತ್ರಮಂದಿರಕ್ಕೆ ತರಲು ಉತ್ಸುಕರಾಗಿದ್ದಾರೆ.
 
ರಾಜವರ್ಧನ್  ನಟನೆಯ ಬಹುನಿರೀಕ್ಷಿತ ಚಿತ್ರ `ಗಜರಾಮ` ಬಿಡುಗಡೆಗೆ ಸಿದ್ಧವಾಗಿದೆ.  ಫೆಬ್ರವರಿ 7ಕ್ಕೆ ರಾಜ್ಯಾದ್ಯಂತ ಸಿನಿಮಾ ಥಿಯೇಟರ್ ಗೆ ಎಂಟ್ರಿ ಕೊಡಲಿದೆ. ಟೈಟಲ್, ಟೀಸರ್ ಹಾಗೂ ಸಾರಾಯಿ ಶಾಂತಮ್ಮ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಸುನಿಲ್ ಕುಮಾರ್ ವಿ ಎ ಆಕ್ಷನ್ ಕಟ್ ಹೇಳಿದ್ದಾರೆ. 
 
ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ರಾಜವರ್ಧನ್ ಗೆ ಜೋಡಿಯಾಗಿ ತಪಸ್ವಿನಿ ಬಣ್ಣ ಹಚ್ಚಿದ್ದಾರೆ. ಪೊಲೀಸ್ ಪಾತ್ರದಲ್ಲಿ ದೀಪಕ್‌ ನಟಿಸಿದರೆ, ಕಬೀರ್ ಸಿಂಗ್ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ. ರಾಗಿಣಿ ಸ್ಪೆಷಲ್ ನಂಬರ್ ಗೆ ಹೆಜ್ಜೆ ಹಾಕಿದ್ದಾರೆ. ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣ, ಜ್ಞಾನೇಶ್ ಬಿ. ಮಠದ್ ಸಂಕಲನ, ಧನಂಜಯ್ ಅವರ ಕೊರಿಯೋಗ್ರಾಫಿ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಅವರ ಸಾಹಿತ್ಯವಿದೆ.
 
`ಬಾಂಡ್ ರವಿ` ಸಿನಿಮಾವನ್ನು ನಿರ್ಮಾಣ ಮಾಡಿರುವ ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ ಅಡಿಯಲ್ಲಿ ನರಸಿಂಹಮೂರ್ತಿ `ಗಜರಾಮ` ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮಾಸ್ ಆಕ್ಷನ್ ಎಂಟರ್​ಟೈನರ್​ ಆಗಿರುವ `ಗಜರಾಮ` ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡುತ್ತಿರುವುದು ವಿಶೇಷ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed