ವಿನೋದ್ ಪ್ರಭಾಕರ್ ಎದುರು ತೊಡೆ ತಟ್ಟಿದ ಶ್ರೀನಗರ ಕಿಟ್ಟಿ
Posted date: 20 Tue, Sep 2022 09:46:49 AM
ನವೀನ್ ರೆಡ್ಡಿ ಬಿ ಸಾರಥ್ಯದಲ್ಲಿ ಮೂಡಿ ಬರ್ತಿರುವ ಮಾದೇವ ಸಿನಿಮಾ ಅಖಾಡಕ್ಕೆ ಇದೀಗ ಶ್ರೀನಗರ ಕಿಟ್ಟಿ ಎಂಟ್ರಿ ಕೊಟ್ಟಿದ್ದಾರೆ. 80 ರ ದಶಕದ ಕಥೆಯನ್ನು ಒಳಗೊಂಡಿರುವ ಈ ಚಿತ್ರದಲ್ಲಿ 
ಮರಿ ಟೈಗರ್ ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿದ್ದು, ವಿನೋದ್ ಎದುರು ಶ್ರೀನಗರ ಕಿಟ್ಟಿ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ.  ಸಮುದ್ರ ಎಂಬ ಪವರ್ ಫುಲ್ ಪಾತ್ರದ ಮೂಲಕ ಶ್ರೀನಗರ ಕಿಟ್ಟಿ ಗ್ಯಾಂಗ್ ಸ್ಟಾರ್ ಆಗಿ ಅಬ್ಬರಿಸಲಿದ್ದಾರೆ.

ಭಂಟಿ ಎಂಬ ಸಿನಿಮಾ ನಿರ್ಮಾಣ ಮಾಡಿರುವ ಆರ್ ಕೇಶವ್ ದೇವಸಂದ್ರ ಮಾದೇವ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಲವ್ ಗುರು ಸಮಂತ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.  ಶೃತಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ನಟಿಸುತ್ತಿರುವ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಗೆ ಜೋಡಿಯಾಗಿ ಸೋನಲ್ ಮೊಂಥೆರೋ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಬಾಲಕೃಷ್ಣ ಥೋಟ ಛಾಯಾಗ್ರಹಣ, ಪ್ರದ್ಯೋತ್ಥನ್ ಸಂಗೀತ ಸಿನಿಮಾಕ್ಕಿದೆ.

ಹೈದ್ರಾಬಾದ್ ರಾಮೋಜಿ ಫಿಲ್ಮ್ ಸಿಟಿ, ಮದ್ದೂರು, ಕನಕಪುರ, ಚನ್ನಪಟ್ಟಣ ಭಾಗದಲ್ಲಿ ಶೇಕಡ ಐವತ್ತರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಉಳಿದ ಭಾಗದ ಚಿತ್ರೀಕರಣವನ್ನು ಮಲೆನಾಡು ಶಿವಮೊಗ್ಗ ಸೇರಿದಂತೆ ಇತರೆ ಭಾಗಗಳಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed