ಹೈನದ ಆಡಿಯೋ ರೈಟ್ಸ್ zee ಮ್ಯೂಸಿಕ್ ತೆಕ್ಕೆಗೆ
Posted date: 29 Tue, Oct 2024 01:08:31 PM
ಅಮೃತ ಫಿಲಂ ಸೆಂಟರ್ ಮತ್ತು ಕೆ ಕೆ ಕಂಬೈನ್ಸ್ ಆಡಿಯಲ್ಲಿ ತಯಾರಾಗಿರುವ ಚಿತ್ರ ಹೈನದ ಆಡಿಯೋ ರೈಟ್ಸ್ zee ಮ್ಯೂಸಿಕ್   ತೆಕ್ಕೆಗೆ ಸೇರಿದೆ . ನಿರ್ದೇಶಕ ವೆಂಕಟ್ ಭಾರದ್ವಾಜ್ ಈ ಸುದ್ದಿಯನ್ನು ಮಾಧ್ಯಮಕ್ಕೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ೪ ಹಾಡುಗಳಿದ್ದು ಎಲ್ಲ ವಯಸ್ಸಿನ ಜನರಿಗೆ ಇಷ್ಟವಾಗುವಂಥ ಸಾಹಿತ್ಯ ಸಂಗೀತ ಮತ್ತು ಅದ್ಭುತವಾದ ದೃಶ್ಯಗಳನ್ನು ಸಂಯೋಜಿಸಲಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ . ಪ್ರಮುಖವಾಗಿ ಈ ಚಿತ್ರದಲ್ಲಿ ಕನ್ನಡ   RAP  ಹೈನ ಶೀರ್ಷಿಕೆ ಸಂಗೀತ ಕಾರ್ತಿಕ್ ಗುಬ್ಬಿ ಹಾಡಿದ್ದಾರೆ ಅದೇ ಚಿತ್ರದ ಹೈಲೈಟ್.   
 
ಸುಮಾರು ೫೨ ಕ್ಕೂ ಅಧಿಕ ತಾರಾಗಣ ಬಳಗ ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದೆ , ಭಾರತ - ಬಾಂಗ್ಲಾದೇಶ ಗಡಿಯಲ್ಲಿ ಮತ್ತು ತುಂಬಾ ಅತಿ ಸೂಕ್ಷ್ಮವಾದ ಪ್ರದೇಶಗಳಲ್ಲಿ ಈ ಚಿತ್ರ ತಂಡ ದೃಶ್ಯಗಳನ್ನು ಚಿತ್ರೀಕರಿಸಿದೆ.. ಹೈನ ಚಿತ್ರ ನಿಜ ಘಟನೆ ಆಧಾರ ಚಿತ್ರವಾಗಿದ್ದು ಹೈನ ಚಿತ್ರವೂ  ಅತಿ ಶೀಘ್ರದಲ್ಲಿ ಬೆಳ್ಳಿ ತೆರೆಮೇಲೆ ಬಿಡುಗಡೆ ಆಗಲಿದೆ , ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿರುವ ಚಿತ್ರಕ್ಕೆ, ಲವ್ ಪ್ರಾನ್ ಮೆಹ್ತಾ ಸಂಗೀತ , ನಿಶಾಂತ್ ನಾಣಿ ಚಿತ್ರಕ್ಕೆ ಛಾಯಾಗ್ರಹಣ., ಲಕ್ಷ್ಮಣ್ ಶಿವಶಂಕರ್ ಸಂಭಾಷಣೆ ಮತ್ತು ಶಮೀಕ್ ಭಾರದ್ವಾಜ್ ರವರ ಸಂಕಲನವಿದೆ .
 
ತಾರಾಗಣದಲ್ಲಿ ಡಾ:ರಾಜ್ ಕಮಲ್ , ಹರ್ಷ್ ಅರ್ಜುನ್ ಕಲಾಲ್ , ದಿಗಂತ್ ,   ಲಕ್ಷ್ಮಣ್ ಶಿವಶಂಕರ್ , ನಿರಂಜನ್ , ವೆಂಕಟ್ ಭಾರದ್ವಾಜ್ , ಶಿಶಿರ್ ಕುಮಾರ್ , ನಂದಕುಮಾರ್ , ಮನೋಹರ್, ಅಭಿಷೇಕ್ ಐಯಂಗಾರ್ , ಲಾರೆನ್ಸ್ಹಾ ಪ್ರೀತಮ್ ಹಾಗು  ಇತರರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed