ಹೊಂಬಾಳೆ ಫಿಲಂಸ್‌ ಲಾಂಛನದಲ್ಲಿ ಮೂಡಿಬರುತ್ತಿರುವ ಕಾಂತಾರ ಚಾಪ್ಟರ್‌ 1 2025ರ ಅಕ್ಟೋಬರ್‌ 2ರಂದು ಗ್ರ್ಯಾಂಡ್‌ ರಿಲೀಸ್‌
Posted date: 18 Mon, Nov 2024 07:36:42 AM
ಹೊಂಬಾಳೆ ಫಿಲಂಸ್‌ ಲಾಂಛನದಲ್ಲಿ ಮೂಡಿಬರುತ್ತಿರುವ ಕಾಂತಾರ ಚಾಪ್ಟರ್‌ 1 ಸಿನಿಮಾ ಈಗ ಬಿಗ್‌ ಬ್ರೇಕಿಂಗ್‌ ಸುದ್ದಿಯ ಜತೆಗೆ ಆಗಮಿಸಿದೆ. ಈಗಾಗಲೇ ಶೂಟಿಂಗ್‌ ಹಂತದಲ್ಲಿರುವ ಈ ಸಿನಿಮಾದ ಬಿಡುಗಡೆಯ ದಿನಾಂಕ ರಿವೀಲ್‌ ಆಗಿದೆ. 2025ರ ಅಕ್ಟೋಬರ್‌ 2ರ ಗಾಂಧಿ ಜಯಂತಿ ದಿನದಂದು ಕಾಂತಾರ ಚಾಪ್ಟರ್‌ 1 ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಸೇರಿ ಇನ್ನೂ ಹಲವು ಭಾಷೆಗಳಲ್ಲಿ ಈ ಸಿನಿಮಾ ಗ್ರ್ಯಾಂಡ್‌ ಆಗಿ ರಿಲೀಸ್‌ ಆಗಲಿದೆ.  
 
ಇತ್ತೀಚಿನ ದಿನಗಳಲ್ಲಿ ಬಹು ನಿರೀಕ್ಷಿತ ಕನ್ನಡ ಸಿನಿಮಾಗಳಲ್ಲಿ ಒಂದಾದ ಕಾಂತಾರ ಚಾಪ್ಟರ್‌ 1 ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಈ ಸಿನಿಮಾ 2025ರ  ಅಕ್ಟೋಬರ್‌ 2ರ ಗಾಂಧಿ ಜಯಂತಿ ಪ್ರಯುಕ್ತ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. 

ಹೊಂಬಾಳೆ ಫಿಲಂಸ್‌  ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಕೈ ಬಿಚ್ಚಿ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದೆ. ಅದರಂತೆ ಈಗಾಗಲೇ ಸಿನಿಮಾ ರಿಚ್‌ ಆಗಿಯೇ ಮೂಡಿಬರುತ್ತಿದೆ. ಕುಂದಾಪುರದಲ್ಲಿ ಐತಿಹಾಸಿಕ ಕದಂಬ ಸಾಮ್ರಾಜ್ಯವನ್ನು ಚಿತ್ರತಂಡ ಮರುಸೃಷ್ಟಿಸಿ, ಶೂಟಿಂಗ್‌ ಮುಂದುವರಿಸಿದೆ. ಈ ಮೂಲಕ ಪ್ರೇಕ್ಷಕನಿಗೆ ಶೌರ್ಯ, ಸಂಸ್ಕೃತಿ ಮತ್ತು ಅತೀಂದ್ರಿಯ ಯುಗಕ್ಕೆ ಕರೆದೊಯ್ಯಲಿದೆ. 

ಈ ಸಿನಿಮಾ ಮತ್ತು ತಮ್ಮ ಪಾತ್ರದ ಸಲುವಾಗಿ ನಟ ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿ, ವಿಶೇಷ ತಯಾರಿಯನ್ನೇ ಮಾಡಿಕೊಂಡಿದ್ದಾರೆ. ಕೇರಳದ ಅತ್ಯಂತ ಹಳೆಯ ಸಮರ ಕಲೆಯ ಪ್ರಕಾರಗಳಲ್ಲಿ ಒಂದಾದ ಕಲರಿಪಯಟ್ಟು ತರಬೇತಿ ಪಡೆದಿದ್ದಾರೆ. ಕಲೆಯನ್ನು ಕರಗತ ಮಾಡಿಕೊಳ್ಳಲು  ಸಾಕಷ್ಟು ಶ್ರಮಿಸಿದ್ದಾರೆ. ಅದರಂತೆ ಅಚ್ಚುಕಟ್ಟಾಗಿ ಸಿನಿಮಾ ಮೂಡಿಬಂದಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed