ನಟ ಅಭಿಜಿತ್ ಈಗ `ವಿಷ್ಣು`
Posted date: 14/May/2011
      ಹಲವು ವರ್ಷಗಳಿಂದ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಚಿತ್ರರಸಿಕರ ಮನ ಗೆದ್ದಿರುವ ಅಭಿಜಿತ್ ಅವರ ಅಭಿನಯದಲ್ಲಿ ‘ವಿಷ್ಣು ಎಂಬ ಚಿತ್ರ ಈ ತಿಂಗಳ ಇಪ್ಪತ್ತಮೂರರಂದು ಆರಂಭವಾಗಲಿದೆ. ಅಭಿಜಿತ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳಲಿದ್ದಾರೆ. ನಟನೆಯೊಂದಿಗೆ ನಿರ್ದೇಶನದ ಉಸ್ತುವಾರಿಯನ್ನು ಹೊತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಕೂಡ ಇವರದೆ.
      ಶ್ರೀಮತಿ ಸಿ.ಎನ್.ರೋಹಿಣಿಅಭಿಜಿತ್ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಇದೇ ಹದಿನೈದರಿಂದ ಆದರ್ಶ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣ ಆರಂಭವಾಗಲಿದೆ.
     ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಐದು ಹಾಡುಗಳು ಹಾಗೂ ಐದು ಸಾಹಸ ಸನ್ನಿವೇಶಗಳು ‘ವಿಷ್ಣು ಚಿತ್ರದಲ್ಲಿದೆ. ಎಂ.ಎನ್.ಕೃಪಾಕರ್ ಸಂಗೀತ ನಿರ್ದೇಶನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಗೋವರ್ಧನ್ ಸಂಕಲನ, ಬಾಬುಖಾನ್ ಕಲಾ ನಿರ್ದೇಶನ, ವೇಣು ಸಹ ನಿರ್ದೇಶನ ಹಾಗೂ ಅರಸು ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರಕ್ಕೆ ರಾಮಚಂದ್ರುಡು ಸಂಭಾಷಣೆ ಬರೆದಿದ್ದಾರೆ. ಅಭಿಜಿತ್, ಬುಲೆಟ್ ಪ್ರಕಾಶ್, ರವಿಶಂಕರ್(ಪಯಣ), ಗೀತಾ, ಸತ್ಯಪ್ರಕಾಶ್, ಮನೋಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed