ಯಶ್ ಇಂಟರ್ ನ್ಯಾಷನಲ್ ಪ್ರಶಸ್ತಿಗೆ ಭಾಜನರಾದ ಎಡಿಟರ್ ಪವನ್ ಗೌಡ
Posted date: 18 Tue, Oct 2022 05:08:58 PM
 ಒಂದು ಸಿನಿಮಾದ ಎಡಿಟರ್ ಅಥವಾ ಸಂಕಲನಕಾರ ಚಿತ್ರೀಕಣದ ನಂತರ ಆ ಚಿತ್ರಕ್ಕೆ ಒಂದು‌ ಹೊಸ ರೂಪವನ್ನೇ ನೀಡುತ್ತಾನೆ. ನಿರ್ದೇಶಕನ ಜೊತೆಗೆ ಆತನ ಕೆಲಸವೂ ಪ್ರಮುಖವಾಗಿರುತ್ತದೆ. ಅತ್ಯುತ್ತಮ ಸಂಕಲನಕ್ಕೆ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಈಗಾಗಲೇ ಕನ್ನಡ ಸೇರಿದಂತೆ ಹಲವಾರು ಭಾಷೆಯ ಚಲನಚಿತ್ರಗಳಗೆ ಎಡಿಟರ್ ಆಗಿ‌ ಕಾರ್ಯನಿರ್ವಹಿಸಿರುವ ಪವನ್ ಗೌಡ ಅವರೀಗ ಯಶ್ ಇಂಟರ್ ನ್ಯಾಶನಲ್ ಯೂಥ್ ಜೆಮ್  ಪ್ರಶಸ್ತಿಗೆ  ಭಾಜನರಾಗಿದ್ದಾರೆ.  ಅವರು ಎಡಿಟರ್ ಆಗಿ ಕೆಲಸ ಮಾಡಿರುವ ತಮಿಳು ಭಾಷೆಯ  ಕ್ರಿಮಿನಲ್ ಚಿತ್ರಕ್ಕಾಗಿ ಬೆಸ್ಟ್ ಎಡಿಟರ್   ಪ್ರಶಸ್ತಿಯನ್ನು  ಗಳಿಸಿದ್ದಾರೆ. ಹೆಸರುಗಟ್ಟದಲ್ಲಿ ನಡೆದ ಯಶ್ ಇಂಟರ್ ನ್ಯಾಷನಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪವನ್ ಗೌಡ ಅವರು ಈ ಅವಾರ್ಡನ್ನು ಸ್ವೀಕರಿಸಿದರು.
 
ಮೂಲತ: ಎಂಜಿನಿಯರ್ ಆದ  ಪವನ್ ಗೌಡ ಹೈದರಾಬಾದ್ನಲ್ಲಿ ಸ್ಟಡಿ ಮುಗಿಸಿ ಅಲ್ಲೇ2 ಸಿನಿಮಾಗಳಿಗೆ ಕೆಲಸಮಾಡಿದ್ದಾರೆ. ನಂತರ ಕನ್ನಡದಲ್ಲಿ ಆಕಾಶವಾಣಿ ಬೆಂಗಳೂರು ನಿಲಯ, ನೈಟ್ ಮೇರ್, ಸೆಪ್ಟೆಂಬರ್ ೧೩, ಆನ್ ಲೈನ್ ಮದುವೆ ಆಫ್ ಲೈನ್ ಶೋಬನ ಅಲ್ಲದೆ ಚಂದನ್ ಶೆಟ್ಟಿ ಅಭಿನಯದ ಹೊಸ ಚಿತ್ರವೊಂದಕ್ಕೂ ಸಂಕಲನಕಾರರಾಗು  ಕೆಲಸ ಮಾಡುತ್ತಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed