ಆಲ್ ಓಕೆಯಿಂದ ಬಂತು ಮತ್ತೊಂದು ಮೋಟಿವೇಷನ್ ಸಾಂಗ್…`ಸೋರುತಿವುದು ಮನೆಯ ಮಾಳಿಗಿ` ಎಂದ ರ್ಯಾಪರ್
Posted date: 18 Sat, Jun 2022 08:50:01 AM
ಕನ್ನಡದ ರ್ಯಾಪರ್ ಆಲೋಕ್ ಬಾಬು ಊರೂಫ್ ಆಲ್ ಓಕೆ ಕುಲಕೋಟಿ ಕನ್ನಡಿಗರು ಸಂಗೀತ ಪ್ರಿಯರು ಆಸ್ವಾದಿಸುವ ಮತ್ತೊಂದು ಗಾಯನವನ್ನು ಉಣಬಡಿಸಿದ್ದಾರೆ. ತಮ್ಮದೇ ರ್ಯಾಂಪ್, ಹಿಪಾಪ್ ಸ್ಟೈಲ್ ಹಾಡುಗಳನ್ನು ಮಾಡ್ತಾ ಸಂಗೀತಯಾನದಲ್ಲಿ ಫಂಟರ್ ಆಗಿರುವ ಆಲ್ ಓಕೆ ಈಗ ಶರೀಫ್ ಅಜ್ಜರ ’ಸೋರುತಿವುದು ಮನೆಯ ಮಾಳಿಗಿ’ ಜನಪದ ಹಾಡಿಗೆ ರ್ಯಾಪ್ ಸ್ಪರ್ಶ ಕೊಟ್ಟು ಅದ್ಭುತವಾಗಿ ಹಾಡನ್ನು ರೂಪಿಸಿದ್ದಾರೆ.

ಕನ್ನಡದ ಮಟ್ಟಿಗೆ ಹೊಸತನ, ವಿಶೇಷತನದಿಂದ ಕೂಡಿರುವ ’ಸೋರುತಿವುದು ಮನೆಯ ಮಾಳಿಗಿ’ ಆಲ್ಬಂ ಹಾಡಿನಲ್ಲಿ ಅಜ್ಞಾನದ ಕುರಿತು ಪ್ರತಿಯೊಬ್ಬರಿಗೂ ಪ್ರೇರಣೆ ತುಂಬುವಂತಹ ಸಾಹಿತ್ಯವಿದೆ. ಈ ಹಾಡಿಗೆ ಆಲ್ ಓಕೆ ಸಾಹಿತ್ಯ, ಸಂಗೀತ, ನಿರ್ಮಾಣ-ನಟನೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಬ್ಲಾಕ್ ಅಂಡ್ ವೈಟ್ ಥೀಮ್ ನಲ್ಲಿ ಮೂರು ಶೇಡ್ ನಲ್ಲಿ ಕಾಣಿಸಿಕೊಂಡಿರುವ ಆಲ್ ಓಕೆ ಕಾಸ್ಟ್ಯೂಮ್ ಸ್ಟೈಲ್, ಲೋಕೇಷನ್, ಮೇಕಿಂಗ್ ಎಲ್ಲವೂ ಅದ್ಧೂರಿಯಾಗಿ ಮೂಡಿ ಬಂದಿದೆ. 

ಸಂತ ಶಿಶುನಾಳ ಶರೀಫರ ಹಾಡಿನಿಂದ ಸ್ಫೂರ್ತಿ ಪಡೆದು ತಯಾರಿಸುವ ಹಾಡಿಗೆ ರಾಜಾ ರಾಮ್ ರಾಜೇಂದ್ರನ್ ನಿರ್ದೇಶನ ಹಾಗೂ ಛಾಯಾಗ್ರಾಹಣ, ಜೋಲ್ಸನ್ ಪಣಿಕರ್ ಸಂಕಲನ ಹಾಗೂ ಗ್ರಾಫಿಕ್ ಜವಾಬ್ದಾರಿ ನಿರ್ವಹಿಸಿದ್ದಾರೆ. ಕಳೆದ 19 ವರ್ಷಗಳಿಂದ  ಕನ್ನಡ ರ್ಯಾಪ್ ದುನಿಯಾದಲ್ಲಿ ತಮ್ಮದೇ ಸ್ಟೈಲ್ ಕ್ರಿಯೇಟ್ ಮಾಡಿರುವ ಆಲ್ ಓಕೆ ಈಗ ಜನಪದ ಸಾಹಿತ್ಯದ ಉಳಿವಿಗಾಗಿ ಹೊಸ ಪ್ರಯೋಗ ಮಾಡಿದ್ದು, ಈ ವಿಭಿನ್ನತೆ ಹಾಡು ಪ್ರತಿಯೊಬ್ಬರಿಗೂ ಇಷ್ಟವಾಗುವುದರಲ್ಲಿ ಯಾವುದೇ ಸಂದೇಹ ಬೇಡ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed