ಬಹು ನಿರೀಕ್ಷಿತ ತುಳು ಚಿತ್ರ `ಸರ್ಕಸ್` ನ ಮಾತಿನ ಚಿತ್ರೀಕರಣ ಪೂರ್ಣ
Posted date: 16 Sun, Jan 2022 06:29:33 PM
`ಗಿರ್ ಗಿಟ್` ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ನಾಯಕನಟನಾಗಿ ನಟಿಸಿ, ನಿರ್ದೇಶಿಸುತ್ತಿರುವ ಆರ್.‌ಎಸ್.‌‌ಸಿನೆಮಾ,  ಶೂಲಿನ್ ಫಿಲಂಸ್ ಬ್ಯಾನರ್ ನಲ್ಲಿ ಅನಿಲ್ ಶೆಟ್ಟಿ, ಸುಧಾಕರ್ ಶೆಟ್ಟಿ ಮತ್ತು ಮಂಜುನಾಥ್ ಅತ್ತಾವರ್ ಜಂಟಿಯಾಗಿ ನಿರ್ಮಿಸುತ್ತಿರುವ ಕೋಸ್ಟಲ್ ವುಡ್ ನ
ಬಹು ನಿರೀಕ್ಷಿತ ತುಳು ಚಿತ್ರ  `ಸರ್ಕಸ್` ನ  ಮಾತಿನ ಚಿತ್ರೀಕರಣ ಇತ್ತೀಚೆಗಷ್ಟೇ  ಮುಗಿದಿದ್ದು ಇನ್ನು ಕೇವಲ ಹಾಡಿನ‌ ಚಿತ್ತೀಕರಣವಷ್ಟೇ ಬಾಕಿ ಇದೆ.
 
ಮಂಗಳೂರು,ಮರವೂರು ಹಾಗೂ ಸುತ್ತಮುತ್ತಲ ಪರಿಸರದಲ್ಲಿ ಕಳೆದ ಹತ್ತೊಂಬತ್ತು ದಿನಗಳಿಂದ ಸತತ ಚಿತ್ರೀಕರಣದಲ್ಲಿ ತೊಡಗಿದ್ದ ಚಿತ್ರತಂಡ ಇದರಲ್ಲಿ ಸಾಹಸ ದೃಶ್ಯವನ್ನು ಕೂಡ ಚಿತ್ರೀಕರಿಸಿದೆ.

ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಚಿತ್ರತಂಡದೊಂದಿಗೆ ನೇರಪ್ರಸಾರದಲ್ಲಿ ಬಂದ ನಟ ರೂಪೇಶ್ ಶೆಟ್ಟಿ ಅನಿರೀಕ್ಷಿತವಾಗಿ ಬಂದೊಂದಗಿದ  ಕರ್ಫ್ಯೂ ಹಾಗೂ ಕೊರೋನಾದ ಕರಿನೆರಳಿನ ನಡುವೆಯೂ ಎಲ್ಲಾ ನಿಯಮಗಳನ್ನು ಪಾಲಿಸಿ ಅಂದುಕೊಂಡಂತೆ ಚಿತ್ರ ಚೆನ್ನಾಗಿ ಮೂಡಿ ಬರಲು ಕಾರಣವಾದ ಎಲ್ಲಾ ತಂತ್ರಜ್ಞರಿಗೆ ಕೃತಜ್ಞತೆ ಸಲ್ಲಿಸಿದರು..

ಕನ್ನಡ ಚಿತ್ರಗಳಲ್ಲಿ ಗಮನ ಸೆಳೆದಿದ್ದ ನಟ ಯಶ್ ಶೆಟ್ಟಿ `ಸರ್ಕಸ್`  ಚಿತ್ರದ ಮೂಲಕ ಖಳನಟನಾಗಿ ತುಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಾಯಕಿಯಾಗಿ ರಚನಾ ರೈ ತುಳುಚಿತ್ರರಂಗಕ್ಕೆ ಪ್ರವೇಶಮಾಡುತ್ತಿದ್ದು ಖ್ಯಾತ ಹಾಸ್ಯನಟರಾದ  ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಪ್ರಸನ್ನ ಶೆಟ್ಟಿ ಬೈಲೂರು ಹಾಗೂ ಮತ್ತಿತರು ನಟಿಸುತ್ತಿರುವ `ಸರ್ಕಸ್` ನಲ್ಲಿ ರೂಪೇಶ್ ಶೆಟ್ಟಿ ಜತೆ ರಾಕೇಶ್ ಕದ್ರಿ ನಿರ್ದೇಶನಕ್ಕೆ ಜೊತೆಯಾಗಿದ್ದಾರೆ. ನಿರಂಜನ್‌ ದಾಸ್ ಛಾಯಾಗ್ರಹಣ, ನವೀನ್ ಶೆಟ್ಟಿ ನೃತ್ಯ ನಿರ್ದೇಶನ, ರಾಹುಲ್ ವಶಿಷ್ಠ ಸಂಕಲನ‌ ಈ ಚಿತ್ರಕ್ಕಿದ್ದರೆ ದೀಕ್ಷಿತ್ ಆಳ್ವ ಕಾರ್ಯಕಾರಿ‌‌‌ ನಿರ್ಮಾಪಕರಾಗಿ ಜವಾಬ್ದಾರಿ ವಹಿಸಿದ್ದಾರೆ. 

ಹಾಡಿನ ಚಿತ್ರೀಕರಣ ಮುಗಿಸಿ ಪರಿಸ್ಥಿತಿ ತಿಳಿಯಾದ ಬಳಿಕ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಇರಾದೆಯನ್ನು ರೂಪೇಶ್ ಶೆಟ್ಟಿ ವ್ಯಕ್ತ ಪಡಿಸಿದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed