ಇದೇ 27ಕ್ಕೆ ಬಿಡುಗಡೆಯಾಗಲಿದೆ ``ಬನಾರಸ್``ಚಿತ್ರದ``ಮಾಯಾ ಗಂಗೆ``ಹಾಡು
Posted date: 22 Wed, Jun 2022 08:56:30 AM
ತಿಲಕ್ ರಾಜ್ ಬಲ್ಲಾಳ್ ನಿರ್ಮಾಣದ , ಜಯತೀರ್ಥ ನಿರ್ದೇಶನದಲ್ಲಿ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಹಾಗೂ ಸೋನಲ್ ಮಂತೇರೊ ನಾಯಕ - ನಾಯಕಿಯಾಗಿ ನಟಿಸಿರುವ, ಬಹು ನಿರೀಕ್ಷಿತ ``ಬನಾರಸ್`` ಚಿತ್ರದ``ಮಾಯಾ ಗಂಗೆ``ಎಂಬ ಹಾಡು ಇದೇ ತಿಂಗಳ 27 ರಂದು ಬಿಡುಗಡೆಯಾಗಲಿದೆ.‌ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಮೋಷನ್ ಪೋಸ್ಟರ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಉತ್ತರ ಭಾರತದ ಪುಣ್ಯಭೂಮಿ ‌ಕಾಶಿಯಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣವಾಗಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed