ಸತ್ಯ ನ ಕ್ರಿಯೇಟ್ ಮಾಡಿದ್ RGV, ನಮ್ಮ GGVV ಶಿವ ಗೆ ಫಿದಾ
Posted date: 18 Tue, Jan 2022 06:37:12 PM
ರಾಜ್ ಬಿ ಶೆಟ್ಟಿಗೆ `RGV` ಶಹಬ್ಬಾಸ್ ಗಿರಿ...ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ ರಾಮ್ ಗೋಪಾಲ್ ವರ್ಮಾ ಹೇಳಿದ್ದೇನು?

ರಾಜ್ ಬಿ ಶೆಟ್ಟಿಗೆ ಮತ್ತು ರಿಷಬ್ ಶೆಟ್ಟಿ ಅಭಿನಯದ `ಗರುಡ ಗಮನ ವೃಷಭ ವಾಹನ` ಸಿನಿಮಾ ಜೀ5 ಒಟಿಟಿಯಲ್ಲಿ ಧಮಾಲ್ ಸೃಷ್ಟಿಸ್ತಿದೆ.  ಸಂಕ್ರಾಂತಿ ಹಬ್ಬದ ಪ್ರಯುಕ್ತ ಜೀ5 ಒಟಿಟಿಗೆ ಎಂಟ್ರಿ ಕೊಟ್ಟ ಈ ಸಿನಿಮಾ ಮೂರೇ ದಿನದಲ್ಲಿ ದಾಖಲೆ ಬರೆದಿದೆ. `ಗರುಡ ಗಮನ ವೃಷಭ ವಾಹನ` ಸಿನಿಮಾ ಮೊದಲು ಮೂರು ದಿನಗಳಲ್ಲಿಗಲ್ಲಿ ಬರೋಬ್ಬರಿ 8 ಕೋಟಿ ನಿಮಿಷ ವೀಕ್ಷಣೆ ಕಂಡಿದೆ. ಇದೀಗ ಈ ಸಿನಿಮಾವನ್ನು ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್ ವರ್ಮ್ ಮೆಚ್ಚಿಕೊಂಡಿದ್ದಾರೆ.

ಗಮನ ವೃಷಭ ವಾಹನ ಸಿನಿಮಾ ಚಿತ್ರಪ್ರೇಮಿಗಳು ಮಾತ್ರ ಸಿನಿಮಾರಂಗದ ಸೆಲೆಬ್ರಿಟಿಗಳಿಗೂ ಇಷ್ಟವಾಗಿದೆ. ಗಮನ ವೃಷಭ ವಾಹನ ಸಿನಿಮಾಗೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಮನಸೂರೆಗೊಳಿಸಿದೆ. ಇಡೀ ಸಿನಿಮಾಕ್ಕೆ ಫಿದಾ ಆಗಿರುವ ಆರ್ ಜಿವಿ ನಿರ್ದೇಶಕ ರಾಜ್ ಬಿ ಶೆಟ್ಟಿಗೆ ಶಹಬ್ಬಾಸ್ಗಿರಿ ಕೊಟ್ಟಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ಚಿತ್ರವನ್ನು, ರಾಜ್ ಬಿ ಶೆಟ್ಟಿ ಅಭಿನಯವನ್ನು ಒಂದಷ್ಟು ವಿಜ್ಞಾನ ಪದಗಳಲ್ಲಿ ಬಣ್ಣಿಸಿದ್ದಾರೆ. ಸಿನಿಮಾ ಮತ್ತೊಂದು ಲೆವೆಲ್ನಲ್ಲಿದೆ. ರಾಜ್ ಬಿ ಶೆಟ್ಟಿ ಪಾತ್ರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಈ ಮೂಲಕ ಅವರು ಸಂಪೂರ್ಣ ರೂಪಾಂತರ ಹೊಂದಿದ್ದಾರೆ ಎಂದಿರುವ ಆರ್ಜಿವಿ,  ಇಡೀ ಚಿತ್ರ  `ಅಲ್ಟ್ರಾಸ್ಕೋಪಿಕ್`ಎಂದು ಹಾಡಿ ಹೊಗಳಿದ್ದಾರೆ

ರಾಮ್ ಗೋಪಾಲ್ ವರ್ಮಾಗೂ ಮೊದಲೇ ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ಇಷ್ಟಪಟ್ಟಿದ್ದರು. ಇದೀಗ RGV ಕೂಡ ರಾಜ್ ಸಿನಿಮಾಗೆ ಫಿದಾ ಆಗಿದ್ದಾರೆ. ಕಳೆದ ನವೆಂಬರ್ 19ರಂದು ಥಿಯೇಟರ್ ಗೆ ಎಂಟ್ರಿ ಕೊಟ್ಟಿದ್ದ ಗಮನ ವೃಷಭ ವಾಹನ ಸಿನಿಮಾ ಥಿಯೇಟರ್ ನಲ್ಲೂ ಧೂಳ್ ಎಬ್ಬಿಸಿತ್ತು. ಈಗ ಜೀ5 ಒಟಿಟಿಯಲ್ಲಿ ಕಮಾಲ್ ಮಾಡ್ತಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed