ಲೂಸ್ ಮಾದ ಈಗ ದೇವದಾಸ್
Posted date: 6/May/2009

ಕನ್ನಡ ಚಿತ್ರರಂಗದಲ್ಲಿ ಸದ್ಯ ಲಕ್ಕಿ ಸ್ಟಾರ್ ಎನಿಸಿಕೊಂಡಿರುವ ಯೋಗೇಶ್ ನಾಯಕನಾಗಿ ಅಭಿನಯಿಸಿದ ನಂದ ನಂದಿತ ಹಾಗೂ ಅಂಬಾರಿ ಚಿತ್ರಗಳ ಯಶಸ್ವಿ ನಂತರ ಯೋಗಿ, ರಾವಣ, ಪ್ರೀತ್ಸೆ ಪ್ರೀತ್ಸೆ ಚಿತ್ರಗಳು ನಿರ್ಮಾಣ ಹಂತದಲ್ಲಿದ್ದು, ಇದಲ್ಲದೆ ಮತ್ತೊಂದು ಚಿತ್ರ ಸದ್ಯದಲ್ಲೇ ಪ್ರಾರಂಭವಾಗಲಿರುವ ದೇವದಾಸ್ ಚಿತ್ರಕ್ಕೆ ಯೋಗೇಶ್ ನಾಯಕನಾಗಿ ಅಭಿನಯಿಸಲಿದ್ದಾರೆ. ಕಳೆದ ೨೦ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಶಾಂತಕುಮಾರ್ ಕಳೆದ ವರ್ಷ ಫ್ರೆಂಡ್ಸ್ ಭಾಗ-೨ ಚಿತ್ರವನ್ನು ನಿರ್ದೇಶಿಸಿದ್ದರು, ಆ ಚಿತ್ರ ಅಂತಿಮ ಹಂತದಲ್ಲಿದೆ.

ಆಗಸ್ಟ್ ತಿಂಗಳಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿರುವ ಈ ಚಿತ್ರವನ್ನು ಎ.ಬಿ.ಸಿ.ಡಿ ಶಾಂತಕುಮಾರ್ ಕಥೆ-ಚಿತ್ರಕಥೆ ರಚಿಸಿ ನಿರ್ಮಿಸುವುದರ ಜೊತೆ ನಿರ್ದೇಶನ ಕೂಡ ಮಾಡುತ್ತಿರುವ ಈ ಚಿತ್ರಕ್ಕೆ ರೇಣುಕುಮಾರ್: ಛಾಯಾಗ್ರಹಣ, ಹರಿಕೃಷ್ಣ: ಸಂಗೀತ, ಮಂಜುನಾಥ: ಸಂಭಾಷಣೆ, ಫೈವ್‌ಸ್ಟಾರ್ ಗಣೇಶ್: ನೃತ್ಯನಿರ್ದೇಶನ, ಡಿಫರೆಂಟ್ ಡ್ಯಾನಿ: ಸಾಹಸ, ಶ್ಯಾಮ್: ಸಂಕಲನವಿರುವ ಈ ಚಿತ್ರದ ಇನ್ನುಳಿದ ತಾರಾಗಣದ ಆಯ್ಕೆ ನಡೆಯುತ್ತಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed