ಇಂದು ಸಂಚಾರಿ ವಿಜಯ್ ಹುಟ್ಟು ಹಬ್ಬ
Posted date: 17 Sun, Jul 2022 10:58:52 AM
ನಮ್ಮಗಳ ನಡುವೆ ನಾಲ್ಕಾರು ವರ್ಷಗಳ ಕಾಲ ಅತ್ಯಂತ ಕ್ರಿಯಾಶೀಲರಾಗಿ ಮತ್ತು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಇದ್ದವರು ಆಕಸ್ಮಿಕವಾದ ಘಟನೆಯಿಂದ ಇಹಲೋಕ ತ್ಯಜಿಸಿ ಪರಮಾತ್ಮನಲ್ಲಿ ಲೀನವಾಗುತ್ತಾರೆ. 

ಇಂದು ವಿಜಯ್ ಹುಟ್ಟು ಹಬ್ಬ,  ಈಗೇನಿದ್ರೂ ವಿಜಯ್ ನೆನಪು ಮಾತ್ರ.  ವಿಜಯ್ ಸದಾ ನಮ್ಮ ನೆನಪಲ್ಲಿ ಇರಬೇಕು ಎಂಬ ಸದುದ್ದೇಶದಿಂದ ರೋಟರಿ ಬೆಂಗಳೂರು ಹೈಗ್ರೌಂಡ್ ನವರು  ಇನ್ಫೋಸಿಸ್ ಫೌಂಡೇಶನ್ ರವರ ಸಿ ಎಸ್ ಆರ್ ನಿಧಿಯ ಸುಮಾರು ನಾಲ್ಕು ಕೋಟಿಗಳಲ್ಲಿ ನಿರ್ಮಿಸಿರುವ ನಾಲ್ಕು ಲ್ಯಾಬ್ ಬ್ಯುಲ್ಟ್ ಆನ್ ವೀಲ್ಸ್ ಗಳಲ್ಲಿ ಒಂದನ್ನು  ಕಿದ್ವಾಯಿ ಆಸ್ಪತ್ರೆಯವರ  ಉಪಯೋಗಕ್ಕಾಗಿ ಪುನೀತ್ ರಾಜಕುಮಾರ್ ಮತ್ತು ವಿಜಯಕುಮಾರ್ ( ಸಂಚಾರಿ ವಿಜಯ್) ಇವರುಗಳು ನೆನಪಲ್ಲಿ ಇಂದು ಹಸ್ತಾಂತರಿಸಿದ್ದಾರೆ . ಈ ಮೂಲಕ ಸರಿಯಾದ ಸಮಯಕ್ಕೆ ಸಾವಿರಾರು ರೋಗಿಗಳ ತಪಾಸಣೆ ಆಗಿ ಅವರುಗಳ ಆರೋಗ್ಯ ಸುಧಾರಿಸಲು  ಸಹಕಾರಿಯಾಗಲಿದೆ  ಮತ್ತು ಇನ್ನೂ ಒಂದು ಲ್ಯಾಬ್ ಮುಂದಿನ ಹದಿನೈದು ದಿನಗಳಲ್ಲಿ ನೀಡುತ್ತಿದ್ದಾರೆ.  ಈ ಒಟ್ಟಾರೆ ಯೋಜನೆಯಲ್ಲಿ ನಾನು ಭಾಗಿಯಾಗಿದ್ದೆ ಎನ್ನುವುದು ಸಂತೋಷದ ವಿಷಯ.  

ವಿಜಯ್ ನಿಮ್ಮ ನೆನಪು ಶಾಶ್ವತ.  

B S Lingadevaru
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed