ಭಾಷೆ ಜೊತೆಗೆ ಸಿನಿಮಾ ಬೆಳೆಯುತ್ತದೆ - ಟಿ.ಎಸ್.ನಾಗಭರಣ
Posted date: 25 Tue, Oct 2022 11:52:23 AM
ಮಾರಿಗುಡ್ಡದ ಗಡ್ಡಧಾರಿಗಳು ಚಿತ್ರದ ಹೊಸ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ನಿರ್ದೇಶಕ ಟಿ.ಎಸ್.ನಾಗಭರಣ ಶಿಷ್ಯ ನಿರ್ದೇಶನ ಮಾಡಿರುವ ಚಿತ್ರದ ಕುರಿತಂತೆ ಮಾತನಾಡಿದರು. ಅದ್ಬುತವಾದ ಕ್ರಿಯೆಯನ್ನು ಇವತ್ತಿನ ಕಾಲಘಟ್ಟದಲ್ಲಿ ಗಡ್ಡಧಾರಿಗಳು ಮಾಡಿದ್ದಾರೆ. ಸೂರಿ ಆಕಾರ ಆಗಿದೆ. ಆದರೆ ಹೃದಯ ಬಹಳ ಚೆನ್ನಾಗಿದೆ. ನಿಜವಾಗಿಯೂ ಎಲ್ಲಾ ವಿಲನ್‌ಗಳು ಹಾಗೆಯೇ ಇದ್ದರು.  ಸಿನಿಮಾವನ್ನು ಒಬ್ಬರಿಂದ ಮಾಡಲು ಸಾಧ್ಯವಿಲ್ಲ. ಎಲ್ಲರ ಶ್ರಮ ಇರಬೇಕು. ಇದೊಂದು ಸಾಂಘಿಕ ಕೆಲಸ. ಯಾವುದೇ ಸಿನಿಮಾವನ್ನು ನಾನೇ ಮಾಡಿರೋದು ಅಂತ ಹೇಳಿಕೊಳ್ಳಲು ಸಾಧ್ಯವಿಲ್ಲ. ಆ ರೀತಿ ಹೇಳಿದ್ದರೆ ಅಣ್ಣಾವ್ರು ಎಷ್ಟೋ ಹೇಳಬಹುದಿತ್ತು. ಅವರು ಯಾವತ್ತು ಆ ಮಟ್ಟಕ್ಕೆ ಹೋಗಲಿಲ್ಲ. ಅವರು ಹೇಳಿದ್ದು ಒಂದೇ ಮಾತು. ಅಭಿಮಾನಿ ದೇವರುಗಳಿಗಾಗಿ. ನಾನಲ್ಲ ಮಾಡಿದ್ದು ನಾವು ಮಾಡಿದ್ದು. ನಾವು ಅನ್ನೋದನ್ನ ಸೂರಿ ಬಹಳ ಸೊಗಸಾಗಿ ಎಲ್ಲರಿಗೂ ಹೇಳಿದ್ದಾರೆ. ಎಲ್ಲಿ ನಾವು ಅನ್ನೋದು ಇರುತ್ತೋ ಅದು ತಾನೆ ತಾನಾಗಿ ವ್ಯಕ್ತಿಯಿಂದ ಶಕ್ತಿಯಾಗಿ ಮಾರ್ಪಾಡುತ್ತೆ. ಅಂತಹ ಶಕ್ತಿಯನ್ನು ಗಡ್ಡಧಾರಿಗಳು ಪಡೆದುಕೊಂಡಿದ್ದಾರೆ.
 
ಪಡೆದುಕೊಂಡಿರುವುದನ್ನು ನಿಮ್ಮಗಳ ಮುಂದೆ ಇಡುತ್ತಿದ್ದಾರೆ. ಸಲಗದಿಂದ ಸೂರಿ ಹುಟ್ಟಿಕೊಂಡಂತೆ, ಗಡ್ಡಧಾರಿಗಳಿಂದ ರಾಜೀವ ಚಂದ್ರಕಾಂತ ಹುಟ್ಟಿಕೊಂಡಿದ್ದಾರೆ. ಸಿನಿಮಾ ಅನ್ನೋದು ಎಲ್ಲರೂ ಸೇರಿದಾಗ ಸೃಷ್ಟಿಯಾಗುತ್ತದೆ. ಅದು ಕೆಜಿಎಫ್, ಕಾಂತಾರ ಇರಬಹುದು. ಪ್ರತಿಯೊಂದು ಕಾಲಘಟ್ಟಕ್ಕೆ ಮೀರಿ ಸಿನಿಮಾ ಆಗಬೇಕು. ಸೂರಿ ಪ್ರಯತ್ನ ಒಂದರಿಂದ ಹತ್ತಾಗಲಿ. ನಿಮ್ಮದೆ ವರ್ಚಸ್ಸನ್ನು ರೂಪಿಸಿಕೊಳ್ಳಿ ಎಂದು ಧೀರ್ಘಕಾಲದ ಮಾತುಗಳಿಗೆ ವಿರಾಮ ಹಾಕಿದರು. 
 
ನಿರ್ದೇಶಕ ರಾಜೀವ್‌ಚಂದ್ರಕಾಂತ್ ಹೇಳುವಂತೆ ವಿಲನ್‌ಗೋಸ್ಕರವೇ ಕಥೆ ಬರೆದಿರುವುದು ವಿಶೇಷ. ೯೦ರ ಕಾಲಘಟ್ಟದಲ್ಲಿ ಕಾಲ್ಪನಿಕ ಮಾರಿಗುಡ್ಡ ಎಂಬ ಸ್ಥಳದಲ್ಲಿ ಗಡ್ಡಧಾರಿಗಳು ಅಲ್ಲಿನ ಜನರ ಹಣ, ವಸ್ತುಗಳನ್ನು ದೋಚುತ್ತಿರುತ್ತಾರೆ. ಮತ್ತೋಂದು ಟ್ರಾಕ್‌ದಲ್ಲಿ ಪ್ರೇಮಿಗಳ ಕಥೆಯೊಂದು ತೆರೆದುಕೊಳ್ಳುತ್ತದೆ. ಎಲ್ಲೋ ಒಂದು ಕಡೆ ಇವರೆಡು ಸೇರಿಕೊಳ್ಳುತ್ತದೆ. ಇದು ಒಂದು ಏಳೆಯ ಸಾರಾಂಶವಾಗಿದೆ. ಕೋಲಾರ, ನರಸಾಪುರಘಟ್ಟ, ಏರೋಹಳ್ಳಿ ಘಟ್ಟ, ಕೆಜೆಎಫ್ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಡಿಐ ನಡೆಯುತ್ತಿದ್ದು, ಡಿಸೆಂಬರ್ ವೇಳೆಗೆ ತೆರೆಗೆ ತರಲು ಯೋಜನೆ ರೂಪಿಸಲಾಗಿದೆ ಅಂತ ಒಂದಷ್ಟು ಮಾಹಿತಿ ನೀಡಿದರು.
 
ಮುಖ್ಯ ಪಾತ್ರ ಹಾಗೂ ಬಂಡವಾಳ ಹೂಡಿರುವ ಸಲಗಸೂರಿಯಣ್ಣ ನಮ್ಮನ್ನು ಅರಸಿ ಎಂದು ಕೋರಿಕೊಂಡರು. ನಾಯಕ ಪ್ರವೀಣ್, ನಾಯಕಿ ನಮ್ರತಾಅಗಸಿಮನಿ, ಇನ್ಸ್‌ಪೆಕ್ಟರ್ ಆಗಿರುವ ಗಣೇಶ್‌ರಾವ್, ಎಮ್ಮೆ ಕಾಯುವ ಬೆನಕ ನಂಜಪ್ಪ, ರಕ್ಷಿತ್, ನಂಜುಂಡ, ನಾಗಾವಿಜಯ್, ಶಾರುಣ್‌ಲೋಕೇಶ್, ಗಾಯಿತ್ರಿ, ಸೆಲ್ವಿ, ಬೇಬಿಮಾರಿಷ ಮುಂತಾದವರು ಅವಕಾಶ ಸಿಕ್ಕಿದ್ದಕ್ಕೆ ಸಂತಸವನ್ನು ಹಂಚಿಕೊಂಡರು. 
 
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್, ಸಂಗೀತ ಸಂಯೋಜಕರಾದ ಕೆ.ಎಂ.ಇಂದ್ರ, ಶಶಾಂಕ್‌ಶೇಷಗಿರಿ, ಸಂಕಲನಕಾರ ಎನ್.ಎಂ.ವಿಶ್ವ, ಮಾಜಿ ಕಾರ್ಪೋರೇಟರ್ ವೇಲು, ಸಾಹಸ ಮಾಡಿಸಿರುವ ಜಾಗ್ವಾರ್‌ಸಣ್ಣಪ್ಪ ಉಪಸ್ತಿತರಿದ್ದರು. 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed