ಈವಾರ ತೆರೆಮೇಲೆ ಪಂಪನ ‌ಮರ್ಡರ್ ಮಿಸ್ಟ್ರಿ
Posted date: 14 Wed, Sep 2022 07:59:54 AM
ಕನ್ನಡದ ಆದಿಕವಿ ಪಂಪ, ಇದೇ ಹೆಸರಿನಲ್ಲಿ ಹಿರಿಯ ನಿರ್ದೇಶಕ  ಎಸ್.ಮಹೇಂದರ್ ಅವರು  ಚಲನಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಈ ಶುಕ್ರವಾರ (16) ಪಂಪ‌ ಚಿತ್ರವು  ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಟೋಟಲ್ ಕನ್ನಡ ಮಳಿಗೆಯ ವಿ.ಲಕ್ಷ್ಮಿಕಂತ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪ್ರೊಫೆಸರ್ ಪಂಪ ಅವರ ಹತ್ಯೆಯ ನಂತರ ನಡೆಯುವ ಕುತೂಹಲಕಾರಿ ಘಟನೆಗಳೇ ಈ ಚಿತ್ರದ ಕಥಾವಸ್ತು.  ಒಂದು ಮರ್ಡರ್ ಮಿಸ್ಟ್ರಿ  ಜೊತೆಗೆ, ಹದಿಹರೆಯದ ಪ್ರೀತಿ-ಪ್ರೇಮ, ಭಾಷೆಯ ಮೇಲಿನ ಅಭಿಮಾನ ಮತ್ತು ದುರಭಿಮಾನ, ಹೋರಾಟ ಈ ಎಲ್ಲವನ್ನೂ ಹಿತಮಿತವಾಗಿ ಒಳಗೊಂಡಿರುವ ಪಕ್ಕಾ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಚಿತ್ರ ಇದಾಗಿದೆ.
 
ಪಂಪ ಚಿತ್ರಕ್ಕೆ ಸಾಹಿತ್ಯ ರಚಿಸಿ  ಸಂಗೀತ ಸಂಯೋಜನೆಯನ್ನು ಹಂಸಲೇಖ ಅವರು ಮಾಡಿದ್ದಾರೆ. ಅಲ್ಲದೆ  ರಮೇಶ್‌ಬಾಬು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪ್ರೊಫೆಸರ್ ಪಂಪನ ಪಾತ್ರದಲ್ಲಿ ರಂಗಭೂಮಿ ಕಲಾವಿದ ಕೀರ್ತಿಭಾನು ನಟಿಸಿದ್ದಾರೆ. ಚಾರ್ಲಿ ಖ್ಯಾತಿಯ ಸಂಗೀತಾ  ಶೃಂಗೇರಿ ನಾಯಕಿಯಾಗಿದ್ದು, ರಾಘವ್ ನಾಯಕ್, ಅರವಿಂದ್, ಆದಿತ್ಯ ಶೆಟ್ಟಿ, ಭಾವನಾ ಭಟ್, ರೇಣುಕಾ, ರವಿಭಟ್, ಶ್ರೀನಿವಾಸಪ್ರಭು ಮುಂತಾದ ಕಲಾವಿದರು ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed