ಶ್ರೀ ರಾಮನವಮಿಯ ಶುಭದಿನದಂದು ``ಹೊಯ್ಸಳ``ನ ಆಗಮನ..
Posted date: 08 Thu, Sep 2022 02:21:29 PM
ಡಾಲಿ ಧನಂಜಯ ಅಭಿನಯದ ಬಹು ನಿರೀಕ್ಷಿತ ಈ ಚಿತ್ರ 30.3.2023 ರಂದು ಬಿಡುಗಡೆ. 

ವಿಭಿನ್ನ‌ ಪಾತ್ರಗಳ ಮೂಲಕ ಕನ್ನಡಿಗರ ಮನಗದ್ದಿರುವ ನಟ ಡಾಲಿ ಧನಂಜಯ ನಾಯಕರಾಗಿ ಅಭಿನಯಿಸುತ್ತಿರುವ, ಬಹು ನಿರೀಕ್ಷಿತ "ಹೊಯ್ಸಳ" ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 

 30.3.2023 ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಅಂದು ಶ್ರೀರಾಮನವಮಿ ಶುಭದಿನ ಕೂಡ. 

ಚಿತ್ರಕ್ಕೆ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಈಗ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

 ಡಾಲಿ ಧನಂಜಯ ಈ ಚಿತ್ರದಲ್ಲಿ ಗುರುದೇವ ಹೊಯ್ಸಳ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮೃತ ಅಯ್ಯಂಗಾರ್ ಈ ಚಿತ್ರದ ನಾಯಕಿ. ಅಚ್ಯುತಕುಮಾರ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅವಿನಾಶ್ ಕೆ.ಜಿ.ಎಫ್, ರಾಘು ಶಿವಮೊಗ್ಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

ವಿಜಯ್ ಕಿರಗಂದೂರು ಅರ್ಪಿಸುತ್ತಿರುವ ಈ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿದ್ದಾರೆ. "ರತ್ನನ ಪ್ರಪಂಚ" ದ ನಂತರ ಕೆ.ಆರ್.ಜಿ ಸ್ಟುಡಿಯೋಸ್ ಹಾಗೂ ಧನಂಜಯ ಅವರ ಕಾಂಬಿನೇಶನ್ ನಲ್ಲಿ ಬರುತ್ತಿರುವ ಎರಡನೇ ಚಿತ್ರ "ಹೊಯ್ಸಳ".

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಿಜಯ್ ನಾಗೇಂದ್ರ ನಿರ್ದೇಶಿಸುತ್ತಿದ್ದಾರೆ.  ವಿಜಯ್ ನಾಗೇಂದ್ರ ಈ ಹಿಂದೆ ಗಣೇಶ್ ಅಭಿನಯದ "ಗೀತಾ" ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ "ಹೊಯ್ಸಳ" ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed