ಡಾಲಿ ಪಿಕ್ಚರ್ಸ್ ನಿರ್ಮಾಣದ `ಬಡವ ರಾಸ್ಕಲ್` ಚಿತ್ರದ ಮೊದಲ ಹಾಡು ಬಿಡುಗಡೆ
Posted date: 11 Wed, Aug 2021 12:56:16 PM

ಡಾಲಿ ಪಿಕ್ಚರ್ಸ್ ನಿರ್ಮಾಣದ `ಬಡವ ರಾಸ್ಕಲ್` ಚಿತ್ರದ ಮೊದಲ ಹಾಡು ಉಡುಪಿ ಹೋಟೆಲು  ಬಿಡುಗಡೆಯಾಗಿದ್ದು, ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಲಭ್ಯವಿದೆ. ಈ ಹಾಡಿಗೆ ಸಾಹಿತ್ಯವನ್ನು ಸ್ವತಃ ಡಾಲಿ ಧನಂಜಯ್ ಅವರು ಬರೆದಿದ್ದು, ಸಂಗೀತವನ್ನು ವಾಸುಕಿ ವೈಭವ್ ಅವರು ಸಂಯೋಜಿಸಿದ್ದಾರೆ. ಈ ಸುಮಧುರ ಹಾಡಿಗೆ ವಿಜಯ್ ಪ್ರಕಾಶ್ ಅವರ ಧ್ವನಿ ಜೀವ ತಂದಿದೆ. ಧನಂಜಯ್ ಅವರಿಗೆ ಅಮೃತ ಐಯ್ಯಂಗಾರ್  ಜೋಡಿಯಾಗಿ ನಟಿಸಿದ್ದಾರೆ. ಈ ಹಾಡು ಪ್ರೀತಿ ಮಾಡುವ ಪ್ರತಿ ಮನಸ್ಸಿಗೆ ಅರ್ಪಣೆ. ಈ ಚಿತ್ರವನ್ನು ಕೆ ಆರ್ ಜಿ ಸ್ಟುಡಿಯೊಸ್ ಮೂಲಕ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಹಂಚಿಕೆ ಮಾಡುತ್ತಿದ್ದು, ಸಂಪೂರ್ಣ ಪ್ರಚಾರಕಲೆ ಇದರ ಅಂಗಸಂಸ್ಥೆಯಾದ ಕೆ ಆರ್ ಜಿ ಕನ್ನೆಕ್ಟ್ಸ್ ವಹಿಸಿಕೊಂಡಿದೆ. ಬಡವ ರಾಸ್ಕಲ್ ಸೆಪ್ಟೆಂಬರ್ ೨೪ರಿಂದ ಚಿತ್ರಮಂದಿರಗಳಲ್ಲಿ ನಿಮ್ಮನ್ನು ರಂಜಿಸಲು ಸಜ್ಜಾಗಿದ್ದಾನೆ. 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed