ಡಾಲಿ ಧನಂಜಯ್, ಸತ್ಯದೇವ್ ಚಿತ್ರಕ್ಕೆ ನಾಯಕಿಯಾದ ತಮಿಳು ನಟಿ ಪ್ರಿಯಾ ಭವಾನಿ ಶಂಕರ್
Posted date: 17 Mon, Oct 2022 09:53:09 AM
ಡಾಲಿ ಧನಂಜಯ್, ಸತ್ಯ ದೇವ್ ನಟನೆಯ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಸಿನಿ ಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರ ಧನಂಜಯ್ ಹಾಗೂ ತೆಲುಗು ನಟ ಸತ್ಯದೇವ್ ಇಬ್ಬರ ಸಿನಿ ಕೆರಿಯರ್ ನ 26ನೇ ಸಿನಿಮಾವಾಗಿದ್ದು, ಸದ್ಯದಲ್ಲೇ ಸಿನಿಮಾ ಟೈಟಲ್ ರಿವೀಲ್ ಆಗಲಿದೆ. ಚಿತ್ರೀಕರಣದಲ್ಲಿ ನಿರತವಾಗಿರುವ ಚಿತ್ರತಂಡದಿಂದ ಲೇಟೆಸ್ಟ್ ಅಪ್ ಡೇಟ್ ಹೊರಬಿದ್ದಿದ್ದು, ಚಿತ್ರತಂಡವನ್ನು ತಮಿಳು ನಟಿ ಪ್ರಿಯಾ ಭವಾನಿ ಶಂಕರ್ ಸೇರಿಕೊಂಡಿದ್ದಾರೆ.
 
ಹೌದು, ಧನಂಜಯ್, ಸತ್ಯದೇವ್ ಸಿನಿಮಾಗೆ ನಾಯಕಿಯರ ಹುಡುಕಾಟದಲ್ಲಿ ಚಿತ್ರತಂಡವಿತ್ತು ಇದೀಗ ಪ್ರಿಯಾ ಭವಾನಿ ಶಂಕರ್ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. `ಓಹ್ ಮನಪೆಣ್ಣೆ`, `ಬ್ಲಡ್ ಮನಿ`, `ತಿರುಚಿತ್ರಬಾಲಂ`ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ಪ್ರಿಯಾ ಭವಾನಿ ಶಂಕರ್ ಗಿದು ತೆಲುಗಿನಲ್ಲಿ ಮೊದಲ ಸಿನಿಮಾವಾಗಿದೆ. ಚಿತ್ರದಲ್ಲಿ ಫ್ಯಾಶನ್ ಡಿಸೈನರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಪ್ರಿಯಾ. ಚಿತ್ರದ ಇನೊಬ್ಬ ನಟಿಯನ್ನು ಸದ್ಯದಲ್ಲೇ ಪರಿಚಯಿಸಲಿದೆ ಚಿತ್ರತಂಡ.
 
ತೆಲುಗಿನಲ್ಲಿ ಪೆಂಗ್ವಿನ್ ಸಿನಿಮಾ ನಿರ್ದೇಶಿಸಿದ್ದ ಈಶ್ವರ್ ಕಾರ್ತಿಕ್ ಡಾಲಿ-ಸತ್ಯದೇವ್ ಬಣ್ಣ ಹಚ್ಚಿರುವ 26ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.  ಕ್ರೈಮ್ ಆಕ್ಷನ್ ಎಂಟಟೈನರ್ ಕಥಾಹಂದರ ಒಳಗೊಂಡಿದ್ದು, ಓಲ್ಡ್ ಟೌನ್ ಪಿಕ್ಚರ್ಸ್ ಸಂಸ್ಥೆಯಡಿ ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ಇದಾಗಿದೆ.  
 
ಟಗರು ಸಿನಿಮಾ ಖ್ಯಾತಿಯ ಚರಣ್ ರಾಜ್ ಸಂಗೀತ, ಮಣಿಕಂಠನ್ ಕೃಷ್ಣಮಾಚಾರಿ ಛಾಯಾಗ್ರಹಣ, ಅನಿಲ್ ಕ್ರಿಶ್ ಸಂಕಲನ, ಸುಬ್ಬು ಸಾಹಸ ಚಿತ್ರಕ್ಕಿದೆ. ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸಿನಿಮಾತಂಡ ಸದ್ಯದಲ್ಲೇ ಸಿನಿಮಾ ಟೈಟಲ್ ರಿವೀಲ್ ಮಾಡಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed