ಖ್ಯಾತ ನಟ ಅರ್ಜುನ್ ಸರ್ಜಾ ಅವರಿಗೆ ಮಾತೃ ವಿಯೋಗ
Posted date: 23 Sat, Jul 2022 09:35:09 PM
ಕನ್ನಡದ ಹೆಸರಾಂತ ನಟ ಶಕ್ತಿಪ್ರಸಾದ್ ಪತ್ನಿ, ದಕ್ಷಿಣ ಭಾರತದ ಪ್ರಸಿದ್ದ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮೀದೇವಮ್ಮ ಅವರು ಇಂದು ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. 
 
ಲಕ್ಷ್ಮೀದೇವಮ್ಮ ಅವರಿಗೆ 83 ವರ್ಷ ವಯಸ್ಸಾಗಿತ್ತು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಇವರಿಗೆ ಕಿಶೋರ್ ಸರ್ಜಾ, ಅರ್ಜುನ್ ಸರ್ಜಾ ಹಾಗೂ  ಅಮ್ಮಾಜಿ ಅವರು ಮಕ್ಕಳು. ಕಿಶೋರ್ ಸರ್ಜಾ ಈಗಾಗಲೇ ಮೃತರಾಗಿದ್ದಾರೆ. ಪ್ರಸಿದ್ದ ನಟರಾದ ಚಿರಂಜೀವಿ ಸರ್ಜಾ , ಧ್ರುವ ಸರ್ಜಾ ಹಾಗೂ ಸೂರಜ್ ಸರ್ಜಾ ಲಕ್ಷ್ಮೀದೇವಮ್ಮ ಅವರ ಮೊಮ್ಮಕ್ಕಳು.
 ಚಿರಂಜೀವಿ ಸರ್ಜಾ  ನಿಧನದಿಂದ ಲಕ್ಷ್ಮೀದೇವಮ್ಮ ಅವರು ಬಹಳ ನೊಂದಿದ್ದರು. 
 
ಅಂತ್ಯಕ್ರಿಯೆಯನ್ನು ಮಧುಗಿರಿ ಬಳಿಯಿರುವ ತಮ್ಮ ಹಳ್ಳಿಯಲ್ಲಿ ನಡೆಸುವುದಾಗಿ ಅರ್ಜುನ್ ಸರ್ಜಾ ತಿಳಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed