ಗಣಪತಿ ಬಪ್ಪ ಮೋರಯಾ ಅಂದ್ರು ಬನಾರಸ್ ಹೀರೋ ಝೈದ್!
Posted date: 08 Thu, Sep 2022 02:10:14 PM
ಝೈದ್ ಖಾನ್ ಬನಾರಸ್ ಚಿತ್ರದ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಡುವ ಹುಮ್ಮಸ್ಸಿನಲ್ಲಿದ್ದಾರೆ. ಇದೀಗ ಅಷ್ಟ ದಿಕ್ಕುಗಳಲ್ಲಿಯೂ ಬನಾರಸ್‌ನ ಪ್ರಭೆ ನಾನಾ ರೀತಿಯಲ್ಲಿ ಪ್ರಜ್ವಲಿಸುತ್ತಿದೆ. ಇದೇ ಹೊತ್ತಿನಲ್ಲಿ ಝೈದ್ ಖಾನ್ ಭಕ್ತಿ ಭಾವಗಳಿಂದ ಗಣಪತಿ ಪೂಜೆಯಲ್ಲಿ ಪಾಲ್ಗೊಳ್ಳುವ ಮೂಲಕ, ಈ ಹಬ್ಬವನ್ನು ಮನಸಾರೆ ಸಂಭ್ರಮಿಸುವ ಮೂಲಕ ಸುದ್ದಿ ಕೇಂದ್ರದಲ್ಲಿದ್ದಾರೆ. ಇದರೊಂದಿಗೆ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
 
ಮೊನ್ನೆದಿನ ಚಾಮರಾಜಪೇಟೆಯ ಶಾಸಕರಾದ ಜಮೀರ್ ಅಹ್ಮದ್ ಖಾನ್ ತಮ್ಮ ಕಚೇರಿಯಲ್ಲಿ ಗಣೇಶನನ್ನು ಕೂರಿಸಿ, ಪೂಜೆ ಸಲ್ಲಿಸಿದ್ದರು. ಇದರಲ್ಲಿ ಅವರ ಪುತ್ರ ಝೈದ್ ಖಾನ್ ಕೂಡಾ ಉತ್ಸುಕತೆಯಿಂದ ಭಾಗಿಯಾಗಿದ್ದರು. ಮತ, ಧರ್ಮಗಳಾಚೆಗೆ ಗಣೇಶನಿಗೆ ಪೂಜೆ ಸಲ್ಲಿಸಿ, ನೆರೆದಿದ್ದ ನಾಗರಿಕರೊಂದಿಗೆ ಸೇರಿ ಕುಣಿದು ಸಂಭ್ರಮಿಸಿದ್ದಾರೆ. ಈ ಮೂಲಕ ಬನಾರಸ್ ಚಿತ್ರದ ನವನಾಯಕ ಝೈದ್ ಖಾನ್ ಜನರೆಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.
 
ಹೀಗೆ ಗಣೇಶನ ಪೂಜೆಯೊಂದಿಗೆ ಮೆಚ್ಚುಗೆಗೆ ಪಾತ್ರರಾಗಿರುವ ಝೈದ್ ಖಾನ್ ಬನಾರಸ್ ಚಿತ್ರದ ನಾಯಕನಾಗಿ ಈಗಾಗಲೇ ಒಂದಷ್ಟು ನಿರೀಕ್ಷೆ ಮೂಡಿಸಿದ್ದಾರೆ. ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ, ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿರುವ ಬನಾರಸ್, ಇದೇ ನವೆಂಬರ್ ನಾಲಕ್ಕನೇ ತಾರೀಕಿನಂದು ತೆರೆಗಾಣೋದೂ ನಿಕ್ಕಿಯಾಗಿದೆ. ಈಗಾಗಲೇ ಮಾಯಗಂಗೆ ಎಂಬೊಂದು ಹಾಡಿನ ಮೂಲಕ ಅಗಾಧ ನಿರೀಕ್ಷೆ ಮೂಡಿಸಿರುವ ಬನಾರಸ್ ಐದು ಭಾಷೆಗಳಲ್ಲಿ ಏಕಕಾಲಕ್ಕೆ ರೂಪುಗೊಂಡಿರುವ ಪ್ಯಾನಿಂಡಿಯಾ ಚಿತ್ರ. ಈ ಮೂಲಕ ಝೈದ್ ಖಾನ್ ನಾಯಕನಾಗಿ ನೆಲೆ ಕಂಡುಕೊಳ್ಳಲಿದ್ದಾರೆಂಬ ಭರವಸೆ ಗಟ್ಟಿಗೊಂಡಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed