ಹೊಸಬರ ಅಲೆಗಳಿಲ್ಲದ ಸಾಗರ
Posted date: 30 Sun, Oct 2022 09:26:18 PM
ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ `ಅಲೆಗಳಿಲ್ಲದ ಸಾಗರ` ಚಿತ್ರದ ಮುಹೂರ್ತ ಸಮಾರಂಭವು ಧರ್ಮಗಿರಿ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಆಗಮಿಸಿ ತಂಡಕ್ಕೆ ಶುಭಹಾರೈಸಿದರು. ಸಾಗರ್ ಸಿನಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಕರುಣಾಕರ್ ರಾವಣ್ ಮತ್ತು ನಿರಂಜನ್‌ಮೂರ್ತಿ.ಟಿ.ಎಸ್ ಜಂಟಿಯಾಗಿ ಬಂಡವಾಳ ಹೂಡುತ್ತಿದ್ದಾರೆ. ಸಾಗರ್ ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡುವ ಜತೆಗೆ ಕಂಪನಿ ಸಿಇಒ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ಚಿತ್ರವು ಗಂಡ ಹೆಂಡತಿ ಬಾಂದವ್ಯ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಒಂದಷ್ಟು ನೈಜ ಘಟನೆಗಳನ್ನು ಹೆಕ್ಕಿಕೊಂಡಿದೆ. ಬಾಂದವ್ಯದ ಸಂಬಂದಗಳೇ ಇಲ್ಲದಿದ್ದಾಗ, ಬಿದ್ದು ಎದ್ದು ನಿಲ್ಲಾಕ್ಕಾಗದೆ, ಯಾರಿಗೂ ಹೇಳಕ್ಕಾಗದೇ, ಒಂಟಿತನ ಸಹಿಸಕ್ಕಾಗದೇ ಚಿಂತೆಗಳ ಸುಳಿಯಲ್ಲಿ ಸಿಕ್ಕಿ, ನೆಮ್ಮದಿಯಿಂದ ಮಲಗಕ್ಕೂ ಆಗದೆ, ಮನಸ್ಸು ಒಡೆದೋಗಿ ಅಳಲು ಆಗದೆ, ನಗಲು ಪ್ರಯತ್ನಿಸಿದಾಗ, ಆ ಪ್ರಯತ್ನ ವಿಫಲವಾಗಿ, ನಗುವಿನ ಹಿಂದಿರುವ ನೋವು ಬಯಲಾಗುವ ಭಯದಿಂದ, ಸಾಗರ ತನ್ನ ಅಲೆಗಳ ಆರ್ಭಟವನ್ನು ಕೊಂದು, ಅಲೆಗಳೇ ಇಲ್ಲದ ಸಾಗರವಾಗಿ ಮೌನಗೊಂಡಿರುತ್ತದೆ. ಇವೆಲ್ಲಾವನ್ನು ಸೆಸ್ಪನ್ಸ್ ಥ್ರಿಲ್ಲರ್ ರೂಪದಲ್ಲಿ ತೋರಿಸಲಾಗುತ್ತಿದೆ. 

ಸಂಸ್ಥೆಯ ಎಂಡಿಯಾಗಿ ಮೋಹನ್ ನಾಯಕ. ವೈದ್ಯಳಾಗಿ ಬೇಲೂರಿನ ಅಶ್ವಿನ್‌ಶೆಟ್ಟಿ ಮತ್ತು ಸಾಗರ್‌ಗೆ ಜೋಡಿಯಾಗಿ ತೀರ್ಥಹಳ್ಳಿ ಕಡೆಯ ಶಾನ್ವಿಗೌಡ ನಾಯಕಿಯರು. ಸೆಕ್ಯುರಿಟಿ ಗಾರ್ಡ್ ಆಗಿ ರಂಗಯಾದವ್‌ಮಂಡ್ಯಾ ಇದ್ದಾರೆ. ಐದು ಜನರ ಸುತ್ತ ಕಥೆಯು ಸಾಗುತ್ತದೆ. ನಾಲ್ಕು ಹಾಡುಗಳಿಗೆ ಸಾಹಿತ್ಯ-ಸಂಗೀತ ಒದಗಿಸುತ್ತಿರುವುದು ಸಂಜೀವ್‌ರಾವ್. ಛಾಯಾಗ್ರಹಣ ರಾಘು.ಎ.ರೂಗಿ, ಸಂಕಲನ ನವೀನ್, ನೃತ್ಯ ಸ್ಟಾರ್‌ನಾಗಿ, ಸಾಹಸ ಅಶೋಕ್ ಅವರದಾಗದೆ. ಒಂದೇ ಹಂತದಲ್ಲಿ ನೆಲಮಂಗಲ ಸ್ಥಳದಲ್ಲಿ ಚಿತ್ರೀಕರಣ ನಡೆಸಿ, ಹಾಡಿಗೆ ವಿದೇಶಕ್ಕೆ ಹೋಗುವ ಇರಾದೆ ಇದೆ. ಕನ್ನಡ ಅಲ್ಲದೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಬರುತ್ತಿರುವುದು ವಿಶೇಷ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed