ಮತ್ತೆ ನಿರ್ದೇಶನಕ್ಕಿಳಿದ ಅರ್ಜುನ್ ಸರ್ಜಾ
Posted date: 27 Mon, Jun 2022 08:30:10 AM
ಬಹುಭಾಷಾ ನಟ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ. ತಮ್ಮ ಅಮೋಘ ಅಭಿನಯದ ಮೂಲಕ ಚಿತ್ರರಸಿಕರನ್ನು ರಂಜಿಸ್ತಿರುವ ಅರ್ಜುನ್ ಸರ್ಜಾ ಇದೀಗ ಮಗಳ ಸಿನಿಮಾಗೆ ಮತ್ತೆ ಆಕ್ಷನ್ ಕಟ್ ಹೇಳ್ತಿದ್ದಾರೆ.

ಪ್ರೇಮ ಬರಹ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ  ಐಶ್ವರ್ಯ ಸರ್ಜಾ ಅಡಿ ಇಟ್ಟಿದ್ದರು. ಈ ಸಿನಿಮಾಗೆ ಅರ್ಜುನ್ ಸರ್ಜಾ ನಿರ್ದೇಶನದ ಜೊತೆಗೆ ನಿರ್ಮಾಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಆದಾದ ಬಳಿಕ ಐಶ್ವರ್ಯ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಈಗ ಮತ್ತೆ ಅರ್ಜುನ್ ಸರ್ಜಾ ಮಗಳ ಸಿನಿಮಾಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ನಿರ್ಮಾಣಕ್ಕೂ ಇಳಿದಿದ್ದಾರೆ.

ಅರ್ಜುನ್ ತಮ್ಮದೇ ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ನಡಿಯಲ್ಲಿ  ನಿರ್ಮಿಸಲಿರುವ ೧೫ನೇ ಸಿನಿಮಾದ ಮೂಲಕ ಮಗಳು ಐಶ್ವರ್ಯ ಅರ್ಜುನ್ ಅವರನ್ನು ತೆಲುಗಿನಲ್ಲಿ ನಾಯಕ ನಟಿಯಾಗಿ ಪರಿಚಯಿಸ್ತಿದ್ದಾರೆ. ಐಶ್ವರ್ಯಾ ಅರ್ಜುನ್ ನಾಯಕಿಯಾಗಿ ನಟಿಸ್ತಿರುವ ಈ ಸಿನಿಮಾದಲ್ಲಿ ತೆಲುಗು ಚಿತ್ರರಂಗದ ಯುವ ಮತ್ತು ಭರವಸೆಯ ನಟ ವಿಶ್ವಕ್ ಸೇನ್ ನಾಯಕನಾಗಿ ಅಭಿನಯಿಸ್ತಿದ್ದಾರೆ.

ವಿಶ್ವಕ್ ಸೇನ್ ನಿರ್ದೇಶನ ಫಲಕ್ನುಮಾ ದಾಸ್ ಸಿನಿಮಾ ಭರ್ಜರಿ ಯಶಸ್ಸು ಸಾಧಿಸಿದ್ದು, ಸದ್ಯ ದಾಸ್ ಕಾ ಧಮ್ಕಿ ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಜೊತೆಯಲೀಗ ಹೊಸ ಚಿತ್ರವನ್ನು ವಿಶ್ವಕ್ ಸೇನ್ ಒಪ್ಪಿಕೊಂಡಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ವಿಲನ್ ಗೆಟಪ್ ನಲ್ಲಿ ಜಗಪತಿ ಬಾಬು ನಟಿಸಲಿದ್ದಾರೆ.

ಇದೊಂದು ರೋಡ್ ಟ್ರಿಪ್ ಸಿನಿಮಾವಾಗಿದ್ದು, ಶೀರ್ಘದಲ್ಲಿಯೇ ಶೂಟಿಂಗ್ ಶುರುವಾಗಲಿದೆ. ಬಳಿಕ ಉಳಿದ ಪಾತ್ರ ವರ್ಗವನ್ನು ಚಿತ್ರತಂಡ ಪರಿಚಯಿಸಲಿದೆ. ಇತ್ತೀಚೆಗಷ್ಟೇ ಸಿನಿಮಾದ ಮುಹೂರ್ತ ಸಮಾರಂಭ ಜರುಗಿದ್ದು,  ಪವನ್ ಕಲ್ಯಾಣ್ ಚಿತ್ರಕ್ಕೆ ಕ್ಲಾಪ್  ಮಾಡಿ ಶುಭಾ ಹಾರೈಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ರಾಘವೇಂದ್ರ ರಾವ್ ಉಪಸ್ಥಿತರಿದ್ದರು. 

ಪಾತ್ರವರ್ಗ: ವಿಶ್ವಕ್ ಸೇನ್, ಐಶ್ವರ್ಯ ಅರ್ಜುನ್, ಜಗಪತಿ ಬಾಬು ಮತ್ತು ಇತರರು

ಕಥೆ, ನಿರ್ದೇಶಕ, ನಿರ್ಮಾಣ: ಅರ್ಜುನ್ ಸರ್ಜಾ

ಬ್ಯಾನರ್: ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed