ಜನವರಿ 28 ರಂದು ``ಒಂಭತ್ತನೇ ದಿಕ್ಕು`` ರಾಜ್ಯಾದ್ಯಂತ ಬಿಡುಗಡೆ.
Posted date: 23 Sun, Jan 2022 02:07:19 PM
ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಚಿತ್ರಗಳನ್ನು ನೀಡಿರುವ ದಯಾಳ್ ಪದ್ಮನಾಭನ್ ನಿರ್ಮಿಸಿ, ನಿರ್ದೇಶಿಸಿರುವ ``ಒಂಭತ್ತನೇ ದಿಕ್ಕು`` ಚಿತ್ರ ಜನವರಿ 28ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 

ಲೂಸ್ ಮಾದ ಯೋಗಿ - ಅದಿತಿ ಪ್ರಭುದೇವ  ನಾಯಕ - ನಾಯಕಿಯಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಸಾಯಿಕುಮಾರ್, ಹಿರಿಯನಟ ಅಶೋಕ್, ಸುಂದರ್, ಸಂಪತ್ ಕುಮಾರ್, ರಮೇಶ್ ಭಟ್, ಶೃತಿ ನಾಯಕ್, ಪ್ರಶಾಂತ್ ಸಿದ್ದಿ, ಮುನಿ ಮುಂತಾದವರಿದ್ದಾರೆ.
 
ಅವಿನಾಶ್ ಯು ಶೆಟ್ಟಿ ಈ ಚಿತ್ರದ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಹಾಗೂ  ಗುರು ದೇಶಪಾಂಡೆ  ``ಒಂಭತ್ತನೇ ದಿಕ್ಕು`` ಚಿತ್ರದ  ಬ್ಯುಸಿನೆಸ್‌ ಅಸೋಸಿಯೇಟ್. 
ಮಣಿಕಾಂತ್ ಕದ್ರಿ ಸಂಗೀತ ನೀಡಿರುವ ಈ ಚಿತ್ರಕ್ಕೆ ರಾಕೇಶ್ ಛಾಯಾಗ್ರಹಣ, ಪ್ರೀತಿ ಮೋಹನ್ ಸಂಕಲನವಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed