ಪಾಲಾರ್ ಈ ವಾರ ಬಿಡುಗಡೆ
Posted date: 20 Mon, Feb 2023 02:07:05 PM
ಸೌನವಿ ಕ್ರಿಯೇಷನ್ ಮತ್ತು ಹೆಲೋ ಗ್ಲೋಬಲ್ ಬ್ಯಾನರ್ ಅಡಿಯಲ್ಲಿ ಕೆ.ಆರ್. ಸೌಜನ್ಯ, ಸೌಂದರ್ಯ ಕೆ.ಆರ್ ಮತ್ತು ನವೀನ್‌ಕುಮಾರ್ ಬಾಬು ಅವರ  ನಿರ್ಮಿಸಿರುವ, ಜೀವಾ ನವೀನ್ ಅವರ‌ ನಿರ್ದೇಶನದ, ಪಾಲಾರ್ ಚಿತ್ರ ಫೆ.24ರ ಶುಕ್ರವಾರ ತೆರೆಕಾಣಲಿದೆ. ಸುಮಾರು ವರ್ಷಗಳ ಹಿಂದೆ ಕೋಲಾರ ಮತ್ತು ದೇವನಹಳ್ಳಿ ಭಾದಲ್ಲಿ ನಡೆದ ನೈಜಘಟನೆಗಳನ್ನು ಇಟ್ಟುಕೊಂಡು ನಿರ್ಮಾಣವಾದ  ಮಹಿಳಾ ಪ್ರಧಾನ, ಹೋರಾಟದ ಕಥೆ ಇದಾಗಿದೆ. 
 
ಸಿನಿಮಾಬಂಡಿ ಖ್ಯಾತಿಯ ಗಾಯಕಿ ವೈ.ಜಿ.ಉಮಾ ಕೋಲಾರ, ತಿಲಕ್‌ರಾಜ್  ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಮಹೇಶ್ ಬಾಬು, ಜಲಜಾ ಕುಂದಾಪುರ, ಸನೂಪ್ ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದಾರೆ.  ಸುಬ್ರಮಣ್ಯ ಆಚಾರ್ಯ ಅವರ ಸಂಗೀತ, ಆಸಿ ರೆಹಾನ್ ಅವರ ಛಾಯಾಗ್ರಹಣ, ವಲಿ ಕುಲಾಯಿಸ್ ಅವರ ಸಂಕಲನ ಈ ಚಿತ್ರಕ್ಕಿದೆ.
 ಪಾಲಾರ್ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ನಡೆಯುವ ಕಥೆಯಿದಾಗಿದ್ದು,  ಬಾಗೇಪಲ್ಲಿ, ಕೋಲಾರ, ದೇವನಹಳ್ಳಿ ಹಾಗೂ ಚಿಕ್ಕಾಬಳ್ಳಾಪುರ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಈ ಚಿತ್ರವನ್ನು  ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್ ಮೂಲಕ ಮಂಜುನಾಥ್ ಅವರು  ರಿಲೀಸ್ ಮಾಡುತ್ತಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed